ಕೊಪ್ಪಳ :- ಅಜ್ಮಲ್ ಕಸಬ್‌ನನ್ನು ಗೆಲ್ಲಿಗೆರಿಸಲು ಅಂಕಿತ ಹಾಕಿದ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸಿರುವ ಹಿಂದು ಜಾಗರಣಾ ವೇದಿಕೆ ಸಂವಿಧಾನಿಕ ದೇಗುಲ ಸಂಸತ್ತ ಭವನದ ಮೇಲೆ ದಾಳಿಯ ಪ್ರಮುಖ ರೂವಾರಿ ಅಫ್ಜಲ್ ಗೂ ಕೂಡಾ ಇದೇ ರೀತಿ ದಿಟ್ಟ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
ಮುಂಬಯಿಯ ದಾಳಿಯಲ್ಲಿ ನಮ್ಮ ಸೈನಿಕರು ಹಾಗೂ ದಕ್ಷ ಪೋಲೀಸ್ ಅಧಿಕಾರಿಗಳ ಮೇಲೆ ಮನಸೊ ಇಚ್ಚೆ ಗುಂಡಿನದಾಳಿ ನಡೆಸಿ ಅಧಿಕಾರಿಗಳೂಸೇರಿ ನೂರಾರು ಜನರ ಪ್ರಾಣ ಬಲಿತೆಗೆದುಕೊಂಡು ಪಾಪಿ ಪಾಕಿಸ್ತಾನ ಮೂಲದ ಉಗ್ರ ಅಜ್ಮಲ್ ಕಸಬ್ ನನ್ನು ಇಂದು ಬೆಳಿಗ್ಗೆ ೦೭:೩೦ ಕ್ಕೆ ಮುಂಬೈನ ಯರವಾಢ ಜೈಲಿನಲ್ಲಿ ಗಲ್ಲಿಗೇರಿಸಿರುವು ಸಮಸ್ತ ಭಾರತೀಯರ ಒಕ್ಕೂರಲಿನ ಭಾವನೆಗೆ ಸ್ಪಂದಿಸಿ ಹಾಗೂ ಮಹಾತ್ಮಯೋಧರಿಗೆ ಸಲ್ಲಿಸಿದ ಗೌರವವಾಗಿದೆ.
ಸದಾ ಭಯೋತ್ಪಾದಕರ ದಾಳಿಯ ಕರಿನೆರಳ ಬಯದಿಂದ ಬದುಕು ಸಾಗುಸುತ್ತಿರು ಭಾರತಿಯರು ನಿಟ್ಟಿಸಿರು ಬಿಡುವಂತಾಗಿದೆ. ಅಲ್ಲದೆ ನಮ್ಮ ಭಾರತದ ಹೃದಯವಾದ ಸಂಸತ್ ದಾಳಿಯ ರೂವಾರಿ ಅಫ್ಜಲ್ ನನ್ನು ಗಲ್ಲಿಗೇರಿಸಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೇಸ್ ಸರ್ಕಾರ ಭಾರತೀಯರ ಈ ಪ್ರತಿಕ್ರಿಯೆ ಯನ್ನು ಕಂಡು ಕೊಡಲೇ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮವನ್ನು ವ್ಯಕ್ತಪಡಿಸಿದರು. ಸಂಜಯ ಖಟವಾಟೆ, ಶಿವಯ್ಯ ಹಿರೇಮಠ, ಗವಿಸಿದ್ದಪ್ಪ ಜಂತಗಲ್, ಚಂದ್ರಪ್ಪ ಉತ್ತಂಗಿ, ನಾಗರಾಜ, ರಾಖೇಶ, ಹನುಮೇಶ ರಾಮ, ಕುಮಾರ ರಾಜು, ವಿನಯ ವಿರೇಶ ಗೊಂಡಬಾಳ, ಕೃಷ್ಣಕುಮಾರ ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment