PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಜನಪದ ಕಾವ್ಯಗಳು ಕಾಲವನ್ನು ಮತ್ತು ವ್ಯಕ್ತಿಯನ್ನು  ಗುರಿಯಾಗಿಟ್ಟುಕೊಂಡು ರಚನೆಯಾಗಿರಲಿಲ್ಲ. ಆದರೆ ನೆನಪಿನ ಸ್ಮೃತಿಯೊಳಗಡೆ ಕೆಲವು ವಿಚಾರಗಳು ವಾಸ್ತವ ಸಂಗತಿಗಳನ್ನು ಮೈಗೂಡಿಸಿಕೊಂಡೇ ರಚನೆಯಾಗಿರುತ್ತವೆ. ಇಂತಹ ಜನಪದ ಕಾವ್ಯಗಳು ಗಟ್ಟಿಯಾದ ತತ್ವ ಸಿದ್ಧಾಂತಗಳನ್ನು ಒಳಗೊಂಡಿರುತ್ತವೆ. ಬೇರೆ ಯಾವ ಕಾಲದ ಮಹಾಕಾವ್ಯಗಳು ಜನಪದ ಮಹಾಕಾವ್ಯಗಳಲ್ಲಿನ ತತ್ವ ಸಿದ್ಧಾಂತಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ.  ಇಂತಹ ಜನಪದ ಕಾವ್ಯಗಳಲ್ಲಿ ಮಂಟೆಸ್ವಾಮಿ ಮೌಖಿಕ ಕಾವ್ಯವು ಬಹುಮುಖ್ಯವಾಗಿದೆ. ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕರಾದ ಡಾ.ಚಲುವರಾಜು ನುಡಿದರು. ಅವರು  ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ  ದಿನಾಂಕ ೨೯-೧೧-೨೦೧೨ ರಂದು ಸಾಹಿತ್ಯಭವನದಲ್ಲಿ ಜರುಗಿದ  ಪ್ರಾಚೀನ ಕವಿ ಕಾವ್ಯ ಚಿಂತನಾ ಮಾಲೆ  ಕಾರ್ಯಕ್ರಮದಲ್ಲಿ ಮಂಟೆಸ್ವಾಮಿಯ ಮೌಖಿಕ ಪರಂಪರೆ ಈ ವಿಷಯವಾಗಿ  ಉಪನ್ಯಾಸ ನೀಡುತ್ತಾ ಮಾತನಾಡಿದರು. ಮುಂದುವರೆದು ಮಾತನಾಡುತ್ತಾ ಈ ಮಹಾಕಾವ್ಯದ ನಾಯಕ ಮಂಟೆಸ್ವಾಮಿ ಉತ್ತರದಿಂದ ದಕ್ಷಿಣಕ್ಕೆ ಹರಿದ ಮಹಾಬೆಳಕು.ಈ ಬೆಳಕು ಕಲ್ಯಾಣದ ಬೆಳಕೆ ಹೊರತು ಬೇರಾವ ಬೆಳಕಲ್ಲ.  ಏಕೆಂದರೆ ಕಲ್ಯಾಣವೆಂಬುದು ಕೇವಲ ಬಸವಣ್ಣನಿಗೆ, ಅಲ್ಲಮಪ್ರಭುವಿಗೆ, ಅಕ್ಕಮಾದೇವಿಗೆ, ನೀಲಮ್ಮಳಿಗೆ, ಬಿಜ್ಜಳನಿಗೆ, ಸೀಮಿತವಾಗಿರಲಿಲ್ಲ. ಜನ ಸಾಮಾನ್ಯರಿಗೂ ಸಹ ಅಜ್ಞಾನದ ಕತ್ತಲು ಕಳೆದು ಜ್ಞಾನದ ಹೊಸಬೆಳಕನ್ನು ಚೆಲ್ಲುವ ಕೇಂದ್ರವಾಗಿತ್ತು. ಇಂತಹ ಕಲ್ಯಾಣದ ಪರಿಸರ ಮತ್ತು ಪರಂಪರೆ ಮಂಟೆಸ್ವಾಮಿಗೆ ಸಹಾಯ ನೀಡಿತು. ಈ ನಿರ್ಲಕ್ಷಿತ ಕಾವ್ಯದಲ್ಲಿ ಶೈವಧರ್ಮದ ಸಂಸ್ಕೃತಿ ಮತ್ತು ಪರಂಪರೆಯ ಕುರುಹುಗಳಿವೆ. ಈ ಕಾವ್ಯ ಕುರಿತು ಮತ್ತಷ್ಟು ಚಿಂತನೆಗಳು ನಡೆಯಬೇಕಾಗಿದೆ ಎಂದರು.
ಈ ಕಾರ್ಯಕ್ರಮವನ್ನು ಡಾ.ಸೋಮಶೇಖರ ಇಮ್ರಾಪೂರ ವಿಶ್ರಾಂತ ಪ್ರಾಧ್ಯಪಕರು ಧಾರವಾಡ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಂಟೇಸ್ವಾಮಿ ಕಾವ್ಯದಲ್ಲಿ  ಅವರ ಬದುಕಿಗೂ ಮತ್ತು ಕತೆಗೂ ನೇರವಾದ ಸಂಬಂಧವಿದೆ. ಇತಿಹಾಸ ಮತ್ತು ಪೂರಾಣಗಳ ಸಮನ್ವಯತೆ ಇದೆ. ಅಲ್ಲದೇ ಉತ್ತರಕರ್ನಾಟಕದ ವಚನಚಳುವಳಿ ಮತ್ತು ವಚನಗಳ ಪ್ರಭಾವವನ್ನು ಕಾಣಬಹುದು. ಈ ಮಹಾಕಾವ್ಯ ನೀಲಗಾರರು ಹಾಡಲ್ಪಡುವ ಕಾವ್ಯವಾಗಿದೆ ಎಂದು ಮಾತನಾಡಿದರು.
ಆರಂಭದಲ್ಲಿ ವಿಶ್ರಾಂತ ಆಕಾಶವಾಣಿ ಅಧಿಕಾರಿಗಳಾದ   ಬಿ.ಎಚ್.Pರಡಿಯವರು ಭುವನೇಶ್ವರಿ ಭಾವಚಿತ್ರಕ್ಕೆ ಗೌರವ ಸಮರ್ಪಣೆ ಮಾಡಿದರು. ವೇದಿಕಯ ಮೇಲೆ ಕೊಪ್ಪಳ ತಾಲೂಕ ಕ.ಸಾ.ಪ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಮುಜುಂದಾರ, ಗಂಗಾವತಿ ತಾಲೂಕ ಕ.ಸಾ.ಪ ಅಧ್ಯಕ್ಷರಾದ ಅಜಮೀರ ನಂದಾಪರ, ಯಲಬುರ್ಗಾ ತಾಲೂಕ ಕ.ಸಾ.ಪ ಅಧ್ಯಕ್ಷರಾದ ಶಿವಮೂರ್ತಿ ಇಟಗಿ, ಕುಷ್ಟಗಿ ತಾಲೂಕ ಕ.ಸಾ.ಪ ಅಧ್ಯಕ್ಷರಾದ ಚಂದಪ್ಪ ಅಕ್ಕಿ ಅಲ್ಲದೇ   ಕೆ.ಎಸ್.ಎಸ್.ಮಹಾವಿದ್ಯಾಲಯ ಗದಗನ  ಹಿಂದಿ ವಿಭಾಗದ ಶ್ರೀಮಲ್ಲಣ್ಣ ರಾಟಿ, ಗದಗ ಕ.ಸಾ.ಪ ಜಿಲ್ಲಾ ಅಧ್ಯಕ್ಷರಾದ ಡಾ.ಶಿವಪ್ಪಕುರಿ ಸಹ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ವೀರಪ್ಪ ನಿಂಗೋಜಿ ವಹಿಸಿ ಮಾನಾಡಿದರು. ಗೀತ ಗಾಯನವನ್ನು ಸದಾಶಿವಪಾಟೀಲ ಸಂಗಡಿಗರು, ಪ್ರಸ್ತಾವಿಕ ಶಿ.ಕಾಬಡಿಗೇರ, ಸ್ವಾಗತ ಅಕ್ಬರ್ ಕಾಲಿಮಿರ್ಚಿ, ವಂದನಾರ್ಪu ಅರ್.ಎಸ್.ಸರಗಣಾಚಾರ.ನಿರೂಪಣೆ ಶಿವಾನಂದ ಮೇಟಿ  ನೆರವೇರಿಸಿದರು. 

Advertisement

0 comments:

Post a Comment

 
Top