ಕೊಪ್ಪಳ ನ.೧೮: ನಗರದ ಹೊರವಲಯ ಹುಲಿಕೇರೆ ಪ್ರೇಕ್ಷಣಿಯ ತಾಣವನ್ನಾಗಿ ಮಾಡುವ ನೇಪದಲ್ಲಿ ಕಡುಬಡವರು ವಾಸಿಸುವ ಕನಕಗಿರಿ ಓಣಿಯ ರಸ್ತೆ ಅಗಲೀಕರಣ ಮಾಡಿ ನೂರಾರು ಸಂಖ್ಯೆಯ ಸಾರ್ವಜನಿಕರಿಗೆ ಬೀದಿಪಾಲು ಮಾಡಿರುವ ಜಿಲ್ಲಾಡಳಿತದ ಕ್ರಮಕ್ಕೆ ಸೈಯದ್ ಫೌಂಡೆಷನ್ ಅಧ್ಯಕ್ಷ ಹಾಗೂ ಬಿ.ಎಸ್.ಅರ್. ಕಾಂಗ್ರೆಸ್ ಮುಖಂಡ ಕೆ.ಎಂ. ಸಯ್ಯದ್ ತೀವ್ರವಾಗಿ ಖಂಡಿಸಿದ್ದಾರೆ.
ಅವರು ರವಿವಾರ ಮಧ್ಯಾಹ್ನ ನಿರಾಶ್ರೀತ ಕನಕಗಿರಿ ಓಣಿಗೆ ಭೇಟಿ ಮಾಡಿ ರಸ್ತೆ ಅಗಲಿಕರಣದಲ್ಲಿ ಮನೆ ಕಳೆದುಕೊಂಡಿರುವ ಸಾರ್ವಜನಿಕರನ್ನು ಸಾಂತ್ವನ ಹೇಳಿ ನಿಮ್ಮೊಂದಿಗೆ ನಾನ್ನಿದ್ದೇನೆ ನಿಮ್ಮನ್ನು ನಿರಾಶ್ರೀತರನ್ನಾಗಿ ಮಾಡಲು ಬಿಡುವುದಿಲ್ಲ. ಜಿಲ್ಲಾಡಳಿತ ಏಕಾಏಕಿಯಾಗಿ ಮುನ್ಸೂಚನೆ ನೀಡದೇ, ರಸ್ತೆ ಅಗಲಿಕರಣಕ್ಕೆ ಮುಂದಾಗಿರುವುದು, ಸಮಂಜಸವಲ್ಲ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಕನಕಗಿರಿ ಓಣಿಯ ನಿರಾಶ್ರಿತರು ಈ ರಸ್ತೆ ಅಗಲಿಕರಣದಲ್ಲಿ ಬಹಳಷ್ಟು ಜನ ತಮ್ಮ ಸಂಪೂರ್ಣ ಮನೆ ಕಳೆದುಕೊಂಡಿದ್ದಾರೆ. ಹುಲಿಕೇರಿ ಅಭಿವೃದ್ದಿ ಪಡಿಸಲು ಕಡುಬಡವರು ಮತ್ತು ಟಾಂಗ ಹೊಡೆಯುವರ ಕುಟುಂಬಗಳಿಗೆ ಬೀದಿಗೆ ತಳ್ಳಿ ಅಲ್ಲಿ ಅಭಿವೃದ್ದಿ ಪಡಿಸುವ ಅಗತ್ಯ ಏನಿತ್ತು? ಹಾಗೂ ಆ ಓಣಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಗಲಳತೆ ಕೂಡ ಅವಶ್ಯಕತೆಯಿದ್ದಿಲ್ಲ. ಒಂದು ವೇಳೆ ಅಗಲಿಕರಣ ಮಾಡುವುದು ಅಷ್ಟೊಂದು ಅವಶ್ಯಕತೆ ಇದ್ದರೆ, ಮೊದಲು ಆ ರಸ್ತೆ ಓಣಿಯಲ್ಲಿರುವ ಸಾರ್ವಜನಿಕರಿಗೆ ಬೇರೊಂದುಕಡೆ ಮನೆ ನೀವೇಶನ ನೀಡಿ ಸ್ಥಳಾಂತರಿಸಿ ನಂತರ ಅಗಲಿಕರಣಕ್ಕೆ ಮುಂದಾಗಬೇಕಾಗಿತ್ತು. ಇವೇಲ್ಲ ಪರಿಗಣಿಸದೇ ಅವರೆಲ್ಲರನ್ನು ನಿರಾಶ್ರಿತರನ್ನಾಗಿ ಮಾಡಿರುವ ಕ್ರಮ ಕಾಯ್ದೆಕ್ರಮವಲ್ಲ ಸಭೆಯ ನಿರ್ಣಯದಂತೆ ಜಿಲ್ಲಾಢಳಿತ ಮೊದಲು ಅವರಿಗೆ ಸೂಕ್ತವಾದ ನಿವೇಶನ ಮನೆ ಒದಗಿಸಿಕೊಟ್ಟು ಮುಂದಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಇದೇ ರಸ್ತೆಯಲ್ಲಿರುವ ಸುಮಾರು ೫೦೦ ವರ್ಷಗಳ ಇತಿಹಾಸಯುಳ್ಳ ಹಿಂದು ಮುಸ್ಲಿಂರ ಶ್ರದ್ಧಾ ಭಕ್ತಿಯ ತಾಣ ಜಂಡಾಕಟ್ಟ ಹಾಗೂ ಆಶುರಖಾನಗಳಿದ್ದು, ಅದು ಪುರಾತನ ಕಾಲದ ಒಂದು ಸ್ಥಳವಾಗಿದೆ ಇದನ್ನು ಆ ರಸ್ತೆ ಅಗಲಿಕರಣ ನೆಪದಲ್ಲಿ ನೆಲಸಮ ಮಾಡಬಾರದು, ಒಂದು ವೇಳೆ ನೆಲಸಮಕ್ಕೆ ಜಿಲ್ಲಾಡಳಿತ ಮುಂದಾದರೆ, ಆ ಓಣಿಯ ಸಾರ್ವಜನಿಕರೊಂದಿಗೆ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು. ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತ ಮತ್ತು ನಗರ ಸಭೆ ನೇರ ಹೊಣೆಯಾದಿತು ಎಂದು ಸೈಯದ್ ಫೌಂಡೆಷನ್ ಅಧ್ಯಕ್ಷ ಹಾಗೂ ಬಿ.ಎಸ್.ಅರ್. ಕಾಂಗ್ರೆಸ್ ಮುಖಂಡ ಕೆ.ಎಂ. ಸೈಯದ್ ಎಚ್ಚರಿಸಿದ್ದಾರೆ.
ಈ ಸಂದರ್ಬದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಹಾಜಿ ಸೈಯದ್ ಹಜರತ್ ಪಾಷಾ ಖಾದ್ರಿ, ಸೇರಿದಂತೆ ನಗರಸಭಾ ಸದಸ್ಯ ಯಲ್ಲಪ್ಪ ತರಕಾರಿ, ಕನಕಗಿರಿ ಓಣಿಯ ಶ್ರವಣಕುಮಾರ ಪುರೊಹಿತ್, ಇಂಜನಿಯರ್ ಖಾನ್‌ಸಾಬ, ಖಾಜಾಸಾಬ, ರೇಣವ್ವ, ಇಸ್ಮಾಯಿಲ್‌ಸಾಬ, ಲಾರಿ ಮಾಲಕರ ಸಂಘದ ಅಧ್ಯಕ್ಷರು, ಸಮದ್ ಸಿದ್ದಿಖಿ, ಕರೀಮ್‌ಸಾಬ, ಖಾಜಾಸಾಬ ಬಗಡಾ, ಈರಣ್ಣ ಸಂಡೂರ, ಕಾಟ್ವಾ, ಅಲ್ಲದೆ ಓಣಿಯ ಸಾರ್ವಜನಿಕರು, ಮಹಿಳೆಯರು, ಯುವಕರು, ನಿರಾಶ್ರಿತರು, ಉಪಸ್ಥಿತರಿದ್ದರು.
0 comments:
Post a Comment