PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ: ದಿ ೧೦  ರಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ತಾಲುಕಾ ಘಟಕವು ಕರ್ನಾಟಕ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಶಿವಸೇನಾ ಕಾರ್ಯಕರ್ತರನ್ನು ಬಂದಿಸುವಂತೆ ಒತ್ತಾಯಿಸಿ ಮಹಾತ್ಮ ಗಾಂಧೀ ವೃತ್ತದಿಂದ ಮುಂಡರಿಗೆ ಭೀಮರಾಯ ವೃತ್ತದವರೆಗೆ ಅರೆಬೆತ್ತಲೆ ಮೆರವಣಿಗೆ ಮಾಡಿ ಹಾಗೂ ಶಿವಸೇನಾ ಮುಖ್ಯಸ್ಥ ಬಾಳಠಾಕ್ರೆಯ ಪ್ರತಿಕೃತಿ ದಹಿಸಿದರು.
    ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಇಬ್ಬರು ಅಧಿಕಾರಿಗಳ ಮೇಲೆ ಕೊಲ್ಲಾಪುರದಲ್ಲಿ ಏಕಾಏಕಿ ಹಲ್ಲೆ ನಡೆಸಿರುವುದು ಕೊಪ್ಪಳ ತಾಲೂಕಾ ಘಟಕ ಬಲವಾಗಿ ಖಂಡೀಸುತ್ತದೆ. ಮತ್ತು ಕನ್ನಡ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಕೊರಳ ಪಟ್ಟಿ ಇಡಿದು ಹೊರ ಹಾಕುವ ಮೂಲಕ ಶಿವಸೇನಾ ಕಾರ್ಯಕರ್ತರು ತಮ್ಮ ನೀಚ ಬುದ್ದಿಯನ್ನು ಮತ್ತೋಮ್ಮೆ ಪ್ರರ್ದಶಿಸಿದ್ದಾರೆ. ನಿಪ್ಪಾಣಿಯಲ್ಲಿ ಉದ್ಯಮೆ ಸ್ಥಾಪಿಸಿದರೆ ಶಿವಸೇನೆಗೆ ಆಗುವ ಹಾನಿಯಾದರೂ ಏನು ಎಂಬುದು ತಿಳಿಂiiದಾಗಿದೆ. ವಾಸ್ತವವಾಗಿ ಉದ್ಯಮೆ ಸ್ಥಾಪನೆ ವಿಷಯವೂ ಗಡಿವಿವಾದಕ್ಕೆ ಯಾವೂದೇ ರೀತಿಯ ಸಂಬಂಧವಿಲ್ಲ. ಆದರೂ ಶಿವಸೇನಾ ಕಾರ್ಯಕರ್ತರ ಗುಂಡಾ ವರ್ತನೆ ಮೂಲಕ ಕನ್ನಡಗರ ಹಾಗೂ ಮರಾಠಿ ಬಾಷಿಕ ಜನರ ನಡುವೆ ವೈಷಮ್ಯವನ್ನು ಬಿತ್ತುತ್ತಿದ್ದಾರೆ. ಪದೇ ಪದೇ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿರುವ ಕನ್ನಡಿಗರನ್ನು ಕೆಣಕುತ್ತಿರುವ ಶಿವಸೇನಾ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಹಾಗೂ ಕರ್ನಾಟಕದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ಅಮಾನವೀಯ ಕೃತ್ಯ ಎಸಗಿದ ಶಿವಸೇನಾ ಕಾರ್ಯಕರ್ತರ ವಿರುದ್ಧ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ತೇಗೆದುಕೊಂಡು ಬಂಧಿಸಬೇಕು. ಇಲ್ಲಾವಾದರೆ ಮುಂದಿನ ದಿನಮಾನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರವಾದ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸಿದ್ದಾರೆ.
ತಾಲೂಕ ಅದ್ಯಕ್ಷರಾದ ಶಿವನಗೌಡ ಪಾಟೀಲ (ಹಲಗೇರಿ) ನೇತೃತ್ವದಲ್ಲಿ ನಡೆದ ಪ್ರತಿಬಟನೆಯಲ್ಲಿ ಜಿಲ್ಲಾ ವಕ್ತಾರಾದ ಗವಿಸಿದ್ದಪ್ಪ ಕರ್ಕಿಹಳ್ಳಿ, ಜಿಲ್ಲಾ ವಿಧ್ಯಾರ್ಥಿ ಘಟಕ ಅದ್ಯಕ್ಷರಾದ ಬಿ. ಗಿರೀಶಾನಂದ ಜ್ಞಾನಸುಂದರ, ನಗರ ಘಟಕದ ಅದ್ಯಕ್ಷರಾದ ಹನುಮಂತಪ್ಪ ಬೆಸ್ತರ, ಕರವೇ ಮುಖಂಡರಾದ ಶಿವಶರಣಪ್ಪ ಚಂದನಕಟ್ಟಿ, ಮಲ್ಲಪ್ಪ ವಾರದ, ಸುರೇಶ ಗೊಲ್ಲರ, ಪೃಥೀರಾಜ ಚಾಕಲಬ್ಬಿ, ಚೇತನಕುಮಾರ ಹಿರೇಮಠ, ಜುಬೇರ, ಯಲ್ಲಪ್ಪ ಕೆ, ಶಿವಾನಂದ ಬಿ. ಮಂಜುನಾಥ ಕುಕನೂರು, ಮರ್ದಾನಸಾಬ, ಸುನೀಲ ಹೂಗಾರ, ಹಬೀಬ ಬಿಸರಳ್ಳಿ, ಜೀವನಕುಮಾರ ಹೆಚ್, ನೂರಸಾಬ ಮುಂತಾದವರು ಬಾಗವಹಿಸಿದ್ದರು.

Advertisement

0 comments:

Post a Comment

 
Top