photo : internet ಚಿತ್ರಕೃಪೆ : ಇಂಟರ್ ನೆಟ್
ದಿನಾಂಕ:೨೧.೧೨.೨೦೧೨ ಕ್ಕೆ ಪ್ರಳಯವಾಗುತ್ತದೆ ಎಂಬ ಅನೇಕ ಜೋತಿಷ್ಯಗಾರರು ಹೇಳಿದ್ದಾರೆ ಮತ್ತು ಹೇಳುತ್ತಾ ಇದ್ದಾರೆ. ಹಾಗೇ ಮಾಧ್ಯಮದವರೂ ಕೂಡಾ ಅವರನ್ನು ಹಿಂಬಾಲಿಸುತ್ತಾ ಸ್ವಲ್ಪ ಮುಂದೆ ಹೋಗಿ ಇನ್ನೇನೂ ಪ್ರಳಯ ಈಗಲೇ ಆಗುತ್ತದೆ ಎನ್ನುವ ಹಾಗೆ ಬಿಂಬಿಸುತ್ತಿದ್ದಾರೆ.
ಸತ್ಯವಾಗಲೂ ಇದು ಶುದ್ಧ ಸುಳ್ಳು, ಬರೀ ಉಹಾಪೋಗಳೇ ಹೊರತು ನಿರ್ಧಿಷ್ಟವಾದ ಕಾರಣಗಳಿಲ್ಲದ ಹೇಳಿಕೆಗಳು. ಇನ್ನೂ ಸಾವಿರಾರು ವರ್ಷಗಳಾದರೂ ಭೂಮಿಯ ಅಂತ್ಯವಿಲ್ಲ. ಭೂಮಿಗೆ ಇನ್ನೂ ವಯಸ್ಸಿದೆ, ಭೂಮಿಯ ಮೇಲೆ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆಯೇ ಹೊರತು ಪ್ರಳಯವಾಗುವದಿಲ್ಲ. . . . . ಭಯಪಡಬೇಡಿ.
ದಿನಾಂಕ:೧೯.೦೩.೨೦೧೧ ರಂಸು "ಸುಪರ್ ಮೂನ್" ಭೂಮಿಯನ್ನು ತಳಮಳಗೊಳಿಸುತ್ತಾನೆ. ಸಮುದ್ರ ಹುಕ್ಕುತ್ತದೆ ಎಂತೆ, ಸುನಾಮಿ ಸಂಭವಿಸುತ್ತದೆ ಎಂತೆ, ಚಂದ್ರ ಇನ್ನು ಮೇಲೆ ಕಾಣುವದಿಲ್ಲವಂತೆ, ಹೀಗೆ ಅಂತೆ-ಕಂತೆಗಳ ಕಥೆಗಳು ಆರಂಭವಾಗಿದ್ದವು. ಆ ಕಥೆಗಳು ೧೯.೦೩.೨೦೧೧ ರಂದು ಹೋಳಿ ಹುಣ್ಣಿಮೆಯ ದಿವಸ ಬರೀ "ಹೋಳು" ಎನ್ನುವದು ಎಲ್ಲರಿಗೂ ತಿಳಿಯಿತು.
ಆದಿ ಕಾಲದಿಂದಲೂ ಪರಿಸರಕ್ಕೆ ಮಹತ್ವವಾದ ಸ್ಥಾನವನ್ನು ಕೊಟ್ಟಿದ್ದಾರೆ. ಪ್ರಕೃತಿಯನ್ನು ದೇವತೆ ಎಂತಲೂ, ಮಾತೆ ಎಂತಲೂ ಕರೆದಿದ್ದಾರೆ ಹಾಗೇನೇ ಪೂಜಿಸುತ್ತಾ ಬಂದಿದ್ದಾರೆ. ಆದರೆ ಈಗ ಆ ಸ್ಥಾನಮಾನವನ್ನು ಪ್ರಕೃತಿಗೆ ನಾವು ಕೊಡುತ್ತಿಲ್ಲ, ಪ್ರಕೃತಿಯನ್ನು ನಾವು ಕೇವಲವಾಗಿ ಕಾಣುತ್ತಿದ್ದೇವೆ. ಪ್ರಕೃತಿಯಲ್ಲಿನ ಎಲ್ಲವುಗಳನ್ನು ಅನುಭವಿಸಿ ಪ್ರಕೃತಿಗಾಗಿ ನಾವು ಏನನ್ನು ಕೊಡುತ್ತಿಲ್ಲ, ಹೀಗಾದಾಗ ಪ್ರಕೃತಿ ಸುಮ್ಮನಿರುವದೇ ? ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ನಾವು ಅದನ್ನು ಭಕ್ಷಿಸಿದರೆ ಅದು ನಮ್ಮನ್ನು ಭಕ್ಷಿಸುವದರಲ್ಲಿ ಸಂದೇಹವೇ ಇಲ್ಲ. ಅದು ಹೇಗೆ ಭಕ್ಷಿಸುತ್ತದೆ, ಅದು ಹೇಗೆ ನಮ್ಮನ್ನು ನಾಶ ಮಾಡುತ್ತದೆ, ಅದಕ್ಕೆ ನಮ್ಮ ಹಾಗೆ ತಿಳುವಳಿಕೆ ಇದೆಯೇ ? ಚಾಣಾಕ್ಷತೆ ಇದೆಯೇ ? ಎಂದು ನಾವು ಯೋಚಿಸಿದ್ದೇ ಆದರೆ ಅದು ನಮ್ಮ ಮೂರ್ಖತನದ ಪರವಾವಧಿಯೇ . . . ಹೊರತು ಮತ್ತೇನೂ ಅಲ್ಲ.
ಮಾನವ ಹೇಳುತ್ತಾನೆ, ಹೇಳಿ ನಂತರ ಮಾಡಿ ತೋರಿಸುತ್ತಾನೆ. ಆದರೆ ಪ್ರಕೃತಿ ಹೇಳುವದಿಲ್ಲ. ಮಾಡಿ ತೋರಿಸುತ್ತದೆ. ಪ್ರಕೃತಿ ಮುನಿಸಿಕೊಂಡರೆ (ಒಂದೇ ಕ್ಷಣ) ಏನಾಗುತ್ತದೆ ಎನ್ನುವದಕ್ಕೆ ಮೊನ್ನೆ ನಡೆದ ಜಪಾನಿನ ಒಂದು ದೃಶ್ಯವೇ ಸಾಕು ಮತ್ತೇನೂ ಹೇಳಬೇಕಾಗಿಲ್ಲ.
ಎಷ್ಟೋ ತಂತ್ರಗಾರಿಕೆ ಮುಂದುವರಿದಿದೆ ಅಂದರೂ ಪ್ರಕೃತಿಯ ವಿರುದ್ಧ ಚಲಿಸುವದು ಸುಲಭದ ಮಾತಲ್ಲ. ಪ್ರಕೃತಿಯನ್ನು ಅಧ್ಯಯನ ಮಾಡಬಹುದೇ ವಿನ: ಪ್ರಕೃತಿಯ ಕಾರ್ಯಗಳನ್ನು ತಡೆಯಲು ಸಾಧ್ಯವಿಲ್ಲ. ವೈಜ್ಞಾನಿಕ ಸತ್ಯಾಸತ್ಯತೆಯ ಪ್ರಕಾರ ಯಾವುದೇ ವಸ್ತುವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಹಾಗೂ ಲಯಗೊಳಿಸುವದೂ ಸಾಧ್ಯವಿಲ್ಲ. ಹಾಗೇನಾದರೂ ಸಾಧ್ಯವಿದ್ದರೆ ನಮಗೆ ಬೇಕಾದ ವಸ್ತುಗಳನ್ನು ನಾವೇ ತಯಾರಿಸಿಕೊಂಡು ಪ್ರಕೃತಿಯನ್ನು ಅವಲಂಬಿಸದ ಹಾಗೆ ಇರಬಹುದಿತ್ತು. ಮೊನ್ನೆ ಮೊನ್ನೆ ಚೀನಾದಲ್ಲಿ ಆದ ಮಳೆಯಿಂದಾಗಿ ಭೂಕುಸಿತ ಉಂಟಾಯಿತು ಅದನ್ನು ತಡೆಯಲು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ.
ಅನೇಕ ಮಿಲಿಯನ್ ವರ್ಷಗಳ ಹಿಂದೆ ಇಡೀ ಪ್ರಪಂಚವೇ ಒಂದು ಅನಿಲ ತುಂಬಿದ ಬಲೂನಿನಂತೆ ಗೋಳವಾಗಿತ್ತು. ಕಾಲಕ್ರಮೇಣ ಆ ಗೋಳದಲ್ಲಿ ಸಾಂದ್ರತೆ ಹೆಚ್ಚಾಗಿ ಒತ್ತಡಕ್ಕೆ ಗುರಿಪಟ್ಟು ಸ್ಪೋಟಗೊಂಡು ಗೃಹಗಳು, ನಕ್ಷತ್ರಗಳು, ಧೂಮಕೇತುಗಳು, ಉಲ್ಕೆಗಳು, ಉಲ್ಕಾ ಪಿಂಡಗಳು, ಕ್ಷುದ್ರಗ್ರಹಗಳು ಇನ್ನು ಮುಂತಾದ ಆಕಾಶಕಾಯಗಳೂ ಹುಟ್ಟಿಕೊಂಡವು. ಕಾಲಕ್ರಮೇಣ ನಕ್ಷತ್ರಗಳು ಬೆಳಕನ್ನು ಚಿಮ್ಮಹತ್ತಿದವು. ಗ್ರಹಗಳು ಅವುಗಳ ಬೆಳಕಿನಿಂದ ಪ್ರತಿಫಲನಗೊಂಡವು. ಗ್ರಹಗಳಲ್ಲಿ ಒಂದಾದ ಭೂಮಿಯೂ ಕೂಡ ಹಾಗೇನೆ ಪುನ: ರಚನೆಯಾಗುತ್ತಾ ಜೀವಿಗಳು ಉದಯಿಸಲು ಕಾರಣವಾಯಿತು. ಜೀವಿಗಳು ಉದಯಿಸಿ ಬೆಳೆಯಲು ಬೇಕಾಗುವ ಎಲ್ಲಾ ಅಂಶಗಳು ಭೂಮಿಯ ಮೇಲೆ ಇರುವೂದರಿಂದ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಡೈನೋಸಾರನಂತಹ ದೈತ್ಯ ಜೀವಿಗಳು, ಮಾನವನಂತಹ ಚಾಣಾಕ್ಷ ಜೀವಿಯಾಗಿ ಬೆಳೆದು ಭೂಮಿಯ ಮೇಲೆ ಜೀವಿಸಲು ಆರಂಭಿಸಿದವು. ಇತರ ಯಾವ ಆಕಾಶ ಕಾಯಗಳ ಮೇಲೆ ಜೀವಿಗಳು ಬದುಕಲು ಬೇಕಾಗುವ ಅಂಶಗಳು ಇಲ್ಲದಕಾರಣ ಅಲ್ಲಿ ಜೀವಿಗಳು ಇಲ್ಲ, ಎನ್ನುವ ಅಂಶ ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ, ಜೀವಿಗಳಿಗೆ ಬದುಕಲು ಬೇಕಾಗುವ ಅಂಶಗಳನ್ನು "ರಕ್ಷಿಸೋಣ" ಎನ್ನುವ ಅಂಶ ಏಕೆ ತಿಳಿಯುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ.
ಪ್ರಕೃತಿ ಯಾರ ಕೈಯಲ್ಲಿ ಸಿಕ್ಕಿಲ್ಲ, ಯಾರ ಮಾತು ಕೇಳಲ್ಲ, ಯಾರಿಗಾಗೂ ಕಾಯುತಿಲ್ಲ. ಹಾಗೇನೇ ಕಾಯಬೇಕಾಗಿಲ್ಲ. ಏಕೆಂದರೆ ಅದಕ್ಕೆ ಅದರದೇ ಆದ ನಿಬಂಧನೆಗಳಿವೆ. ಪ್ರಕೃತಿ ಇದೆ ಎಂದು ನಾವುಗಳು ಇದ್ದೇವೆಯೇ ಹೊರತು .. ನಾವುಗಳು ಇದ್ದೇವೆ ಎಂದು ಪ್ರಕೃತಿ ಇಲ್ಲ. ಈ ಅಂಶವನ್ನು ನಾವು ಗಮನದಲ್ಲಿಡಬೇಕು. ಪ್ರಕೃತಿಯಲ್ಲಿನ ಅಂಶಗಳನ್ನು ಉಪಯೋಗಿಸಿಕೊಂಡು ಏನೆಲ್ಲ ಸಾಧಿಸಿದ್ದೇವೆ, ಆದರೆ ಪ್ರಕೃತಿಗಾಗಿ ನಾವು ಏನನ್ನು ಕೊಡುತ್ತಿಲ್ಲ. ಬದಲಾಗಿ ಪ್ರಕೃತಿ ಮೇಲೆ ಸವಾರಿ ಮಾಡಲು ಹೊರಟಿದ್ದೇವೆ. ಹಾಗೇನಾದರೂ ನಾವು ಸವಾರಿಯನ್ನು ಮುಂದುವರಿಸಿದ್ದೇ ಆದರೆ ನಮ್ಮ ನಾಶ ಖಚಿತ ಎನ್ನುವದರಲ್ಲಿ ಎರಡು ಮಾತಿಲ್ಲ.
ಪ್ರಕೃತಿಗೆ ಎಷ್ಟು ತಾಳ್ಮೆ ಇದೆ ಎಂದರೆ ಸತ್ಯವಾಗಲೂ ಪ್ರಕೃತಿಯನ್ನು ದೇವತೆ, ತಾಯಿ ಎಂದು ಕರೆದಿದ್ದಾರಲ್ಲ ಅದು ೧೦೦ ಕ್ಕೆ ೧೦೦ ಸರಿಯಾಗಿದೆ. ಯಾವ ತಾಯಿ (ದೇವತೆ) ತನ್ನ ಮಕ್ಕಳು ಎಷ್ಟು ತಪ್ಪು ಮಾಡಿದರೂ ಅದನ್ನು ಬೇರೆಯವರಿಗೆ ಹೇಳದೆ ಮಕ್ಕಳ ಗುಣಗಾನ ಮಾಡುತ್ತಾಳೆಯೇ ಹೊರತು ಮಕ್ಕಳನ್ನು ನಿಂದಿಸುವದಿಲ್ಲ.
ಹಾಗೆ ಪ್ರಕೃತಿ ಮಾತೆ ನಾವು ಎಷ್ಟೇ ತಪ್ಪು ಮಾಡಿದರೂ ಸಹಿಸಿಕೊಂಡು ಬಂದಿದ್ದಾಳೆ ಮತ್ತು ಸಲುಹಿ ಸಾಕಿದ್ದಾಳೆ. ಸಹನೆಗೂ ಒಂದು ಮಿತಿ ಇದೆ. ಸಹನೆ ಮೀರಿದರೆ ಅದನ್ನು ತಡೆಯಲು ಸಾಧ್ಯವಾಗುವದಿಲ್ಲ.
ಭೂಮಿಯಲ್ಲಿ ಅರಣ್ಯ ನಾಶ ಮಾಡಿದೆವು. ಪ್ರಾಣಿ ಸಂಕುಲವನ್ನು ಬಲಿ ತೆಗೆದುಕೊಂಡೆವು, ಉದರವನ್ನು ಕೆದಿಕಿದೆವು, ವಿಷಾನಿಲವನ್ನು ಉತ್ಪಾದಿಸಿದೆವು. ಇನ್ನು ಅನೇಕ ರೀತಿಯಲ್ಲಿ ಪ್ರಕೃತಿಗೆ ತೊಂದರೆ ಕೊಟ್ಟರೂ ಕಾಲಕಾಲಕ್ಕೆ ಮಳೆ, ಬೆಳೆ, ಗಾಳಿ, ನೀರು, ಹಸಿರು, ಹುಸಿರನ್ನು ನೀಡುತ್ತಾ ಇದೆ. ಇದಕ್ಕೆ ನಮ್ಮ ಕೊಡುಗೆಗಳೇನು ? ಒಂದಿಷ್ಟಾದರೂ ಯೋಚನೆ ಇದೆಯೇ ? . . . . ಇಲ್ಲ ಇನ್ನು ಮುಂದೆಯಾದರೂ ನಾವು ಸುಧಾರಿಸದಿದ್ದರೆ ಅಥವಾ ಪ್ರಕೃತಿಯ ಜೊತೆಗೆ ಸ್ನೇಹ ಬೆಳೆಸಿ ಸಹಕಾರದಿಂದ ಬಾಳಿದರೆ ಮಾತ್ರ ಜೀವಿಗಳ ಬದುಕು ಸಾಧ್ಯವೇ ಹೊರತು ಇಲ್ಲವಾದಲ್ಲಿ ಸಾವು ಖಚಿತ ಎನ್ನುವದು ಕಟು ಸತ್ಯ. ಆದರೆ ಪ್ರಳಯ ಮಾತ್ರ ಆಗುವದಿಲ್ಲ. ಜಪಾನಿಗಾದ ಸ್ಥಿತಿ ನಮಗೂ ಬರುವದರಲ್ಲಿ ಸಂದೇಹವೇ ಇಲ್ಲ.
ಜಪಾನ ಸುತ್ತಲೂ ನೀರಿದೆ ಅದಕ್ಕೆ ಅಲ್ಲಿ ಆ ರೀತಿ ಆಗಿದೆ. ನಮಗೆ ಹೇಗೆ ಸಾಧ್ಯ ? ಆ ರೀತಿ ಆಗುವದಿಲ್ಲ ಎಂದು ನಾವು ತಿಳಿದು ಮತ್ತೇ ಪ್ರಕೃತಿ ಮಾತೆಗೆ ಹಿಂಸೆ ಕೊಟ್ಟಿದ್ದೇ ಆದರೆ ನಾವು ತೋಡಿದ ಭಾವಿಯಲ್ಲಿ ನಾವೇ ಹಾರಿದಂತೆ ಆಗುತ್ತದೆ ಎನ್ನುವರಲ್ಲಿ ಸಂದೇಹವೇ ಇಲ್ಲ.
ಕಾರಣ ನಾವು ಭೂಮಿಯ ಮೇಲಿನ ಜೀವಿಗಳನ್ನು ಪ್ರೀತಿಸಬೇಕು, ಸಸ್ಯಗಳನ್ನು ಬೆಳಸಬೇಕು, ಪೋಷಿಸಬೇಕು. ನೀರಿನ ಸಂರಕ್ಷರಣೆ ಮಾಡಬೇಕು. ಕೆರೆಗಳ ಪುನರುಜ್ಜೀವನ ಗೊಳಿಸಬೇಕು, ನದಿಗಳನ್ನು ಹೂಳೆತ್ತಬೇಕು, ಒಕ್ಕಲುತನವನ್ನು ಬೆಳೆಸಬೇಕು, ನೀರಿನ ಮಿತವ್ಯಯ ರೂಪಿಸಿಕೊಳ್ಳಬೇಕು. ಅಂತರ್ಜಲಮಟ್ಟ ಹೆಚ್ಚಿಸಿಕೊಳ್ಳಬೇಕು. ಅಂದರೆ ಮಾತ್ರ ಇನ್ನು ಕೆಲವು ವರ್ಷಗಳ ಕಾಲ ಈ ಭೂಮಿಯ ಮೇಲೆ ಬದುಕಲು ಸಾಧ್ಯ. ಅದನ್ನು ಬಿಟ್ಟು ಸ್ವೇಚ್ಛಾಚಾರದಿಂದ ಪ್ರಕೃತಿಯ ವಿರುದ್ಧ ವರ್ತಿಸಿದ್ದೇ ಆದರೆ ಪ್ರಕೃತಿಯಲ್ಲಿ ಕೂಡ ನಮ್ಮ ಮೇಲೆ ರುದ್ರನರ್ತನೆ ಮಾಡುತ್ತದೆ ಎನ್ನುವದರಲ್ಲಿ ಎರಡು ಮಾತಿಲ್ಲ.
ಈಗ ನಮಗೆ ಪ್ರಕೃತಿ ಕೊಟ್ಟಿರುವದು ಮತ್ತು ಕೊಡುತ್ತಿರುವದು ಎಚ್ಚರಿಕೆ ಸಮಯ, ಈ ಅವಧಿಯಲ್ಲಿ ನಾವು ಸುಧಾರಿಸದಿದ್ದರೆ ನಾವು ಕೂಡಾ ಕಾಲಗರ್ಭದಲ್ಲಿ ಸೇರುವದು ಖಚಿತ.
ಇಷ್ಟೆಲ್ಲ ಹೇಳಿದ್ದೀರಿ ಎಂದರೆ ನಮಗೆ ಬಹಳ ಸಂತೋಷ ನಮ್ಮಲ್ಲಿ ಪ್ರಳಯವಾಗುವದಿಲ್ಲ, ನಾವು ಸಾಯುವದಿಲ್ಲ, ನಾವು ಇನ್ನು ಬದುಕಬಲ್ಲೆವು ಎಂದು ತಿಳಿದು ಮೈ ಮರೆಯಬೇಡಿ ನಮಗೂ ಸಣ್ಣಪುಟ್ಟ ತೊಂದರೆಗಳೂ ಕಾಣಿಸುತ್ತವೆ. ಅವುಗಳೆಂದರೆ ನೀರಿನ ಆಹಾಕಾರ, ಅಂತರ್ಜಲಮಟ್ಟ ಕುಸಿತ, ವಿದ್ಯುತ್ ತೊಂದರೆ ತಾಪಮಾನ ಏರಿಕೆ, ರೋಗ ರುಜಿನಗಳ ಉತ್ಪಾದನೆ, ನೇರಳಾತೀತ ಕಿರಣಗಳ ತಾಗುವಿಕೆ ಹೀಗೆ ಇನ್ನು ಹತ್ತಾರು ಸಮಸ್ಯೆಗಳೂ ನಮ್ಮನ್ನು ಕಾಡುತ್ತವೆ. ಈ ಕಾರಣಗಳಿಂದ ಜೀವಿಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದೆ ವಿನ:ಹ ಪ್ರಳಯವಾಗುವದಿಲ್ಲ.
ನಿಸರ್ಗದಲ್ಲಿನವುಗಳನ್ನು ಉಪಯೋಗಿಸಿ ಮತ್ತೇ ಸಮತೋಲನ ಕಾಪಾಡದಿದ್ದರೆ ಆಗುವುದೇ ಒಳಿತಿಗಿಂತ ಕೇಡು ಹೆಚ್ಚು. ಬ್ಯಾಂಕಿನ ಖಾತೆಯಲ್ಲಿನ ಹಣವನ್ನು ಬರೀ Wiಣhಜಡಿಚಿತಿ ಮಾಡಿದರೆ ಖಾತೆಯಲ್ಲಿ ಹಣ ಜಮಾ ಮಾಡಲೇಬೇಕು ತಾನೆ ? ಕಾಲಕಾಲಕ್ಕೆ ಹಣ ಖಾತೆಗೆ ಜಮಾ ಮಾಡುವಂತೆ ಮತ್ತೆ ಮತ್ತೆ ನಾವು ನಿಸರ್ಗಕ್ಕೆ ಕೊಡುಗೆಗಳನ್ನು ಕೊಡುತ್ತಾ ಹೋಗಬೇಕು. ಃಚಿಟಚಿಟಿಛಿe ತರಲೇಬೇಕು ಇಲ್ಲವಾದಲ್ಲಿ Imbಚಿಟಚಿಟಿಛಿe ಹಾಗಿ ಃಚಿಟಚಿಟಿಛಿe ತಪ್ಪಿ ಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.
ಕಾರಣ ಪ್ರಕೃತಿ ಮಾತೆಯನ್ನು ಪೂಜಿಸೋಣ, ಗೌರವಿಸೋಣ, ವಂದಿಸೋಣ, ರಕ್ಷಿಸೋಣ ಆಗ ಅದು ನಮ್ಮನ್ನು ರಕ್ಷಿಸುತ್ತದೆ.
ಮಾಧ್ಯಮದವರು ಸೃಷ್ಟಿಸುತ್ತಿರುವ ಈ ಪ್ರಳಯಕ್ಕೆ ಸಂಬಂಧಿಸಿದಂತೆ ಇನ್ನು ಬದುಕಬೇಕೆನ್ನುವವರೂ ಬೇಗನೆ ಸಾಯಲು ನಿರ್ಧಸಿಸಬೇಕು ಎನ್ನುವ ಹಗೆ ಟಿ.ವಿ. ಯವರು ಬಿಂಬಿಸುತ್ತಿದ್ದಾರೆ. ಅದೇ ಪತ್ರಿಕೋದ್ಯಮದವರು ಮಾತ್ರ ಹಾಗಲ್ಲ, ತಮಗೇನಾದರೂ ಸ್ವಲ್ಪ ಸತ್ಯಾಂಶಗಳು ದೊರೆತರೆ ಮಾತ್ರ ಪತ್ರಿಕೆಯಲ್ಲಿ ಬರೆಯುತ್ತಾರೆ. ಆದರೆ ಟಿ.ವಿ ಮಾಧ್ಯಮದವರು ಟಿ.ವಿ ನೋಡಲೆಂದೇ ಇಲ್ಲದ್ದನ್ನು ಸೃಷ್ಟಿ ಮಾಡಿ ಜನರಿಗೆ ಹೆದರಿಸುವುದೇ ಅವರ ಕಾರ್ಯ. ಪ್ರಳಯದ ಹಾನಿಗಿಂತ ಇವರು ಬಿಂಬಿಸುವ ವಿಚಾರಗಳೇ ಹೆಚ್ಚು ಪರಿಣಾಮಕಾರಿಯಾಗಿವೆ.
ಒಂದು ತಿಂಗಳಿನಲ್ಲಿ ಒಂದು ಸುದ್ದಿಯನ್ನು ಮಾಧ್ಯಮದಲ್ಲಿ ಬಿತ್ತರಿಸಿದರೆ ನಂತರದ ತಿಂಗಳಿನಲ್ಲಿ ಬೇರೆಯದೆ ವಿಷಯವನ್ನು ತೆಗೆದುಕೊಂಡು ಪ್ರಳಯ ಇನ್ನೇನು ಆಗಿಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಭಯವನ್ನು ಹುಟ್ಟಿಸುತ್ತಾರೆ.
ಸ್ವಲ್ಪ ದಿನಗಳ ಕಳೆದ ನಂತರ ಅದೇ ಮಾಧ್ಯಮದವರು ಕೆಲವು ವೈಜ್ಞಾನಿಕ ಸತ್ಯಗಳನ್ನು ತಿಳಿದುಕೊಂಡು ಪ್ರಳಯವಿಲ್ಲವಂತೆ, ಅನ್ಯ ಗ್ರಹಗಳ ಜೀವಿಗಳ "ಎಲಿಯನ್ಸ" ಭೂಮಿಯ ಮೇಲೆ ಅಕ್ರಮಣ ಮಾಡುತ್ತವೆಯಂತೆ ಇದರಿಂದ ಭೂಮಿಯ ಮೇಲೆ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತವೆಯಂತೆ ಹೀಗೆ ಅಂತೆ-ಕಂತೆಗಳ, ಪುರಾಣ, ಇನ್ನೊಂದು ತಿಂಗಳಿನಲಿ ಬಿತ್ತರಿಸುತ್ತಾರೆ.
ದಯಮಾಡಿ ಮಾಧ್ಯಮದವರು ಈ ವಿಷಯಗಳನ್ನು ಜನರಿಗೆ ಭಯ ಹುಟ್ಟಿಸುವ ಹಾಗೆ ಬಿಂಬಿಸಬೇಡಿ. ಆವರಿಗೆ ತಿಳುವಳಿಕೆ ಕೊಡಿ. ಹಾಗೂ ಹಾಗೇನಾದರು ಪ್ರಕೃತಿಯಲ್ಲಿ ಬದಲಾವಣೆಗಳಾಗಿ ಭೂಕಂಪನಗಳು, ಸುನಾಮಿ, ಚಂಡಮಾರುತ, ಜಲಪ್ರಳಯ, ಬರಗಾಲ ಮುಂತಾದವುಗಳಿಂದ ಹೇಗೆ ರಕ್ಷಣೆಯಾಗಬೇಕು ಎನ್ನುವದರ ಬಗ್ಗೆ ಬಿಂಬಿಸಿದರೆ ಮನುಕುಲಕ್ಕೆ ಭಾರಿ ಸಹಾಯ ಮಾಡಿದಂತಾಗುತ್ತದೆ. ಈ ಮನುಷ್ಯನ ಕೈಯಲ್ಲಿ ಪ್ರಕೃತಿ ಸಿಕ್ಕಿಲ್ಲ. ಸಿಗುವದೂ ಇಲ್ಲ. ನಾವು ಹೇಳುವಂತೆ ನಡೆಯುವದೂ ಇಲ್ಲ ಹಾಗೇನಾದರೂ ಹಾಗಿದ್ದರೆ ಮುಂದುವರೆದ ರಾಷ್ಟ್ರಗಳು ಇಡೀ ಭೂಮಿಯನ್ನೇ ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದವು. (ಹಿಡಿದುಕೊಳ್ಳಬಹುದು)
ಇನ್ನೂ ಕೆಲವು ಚಾನಲ್‌ಗಳಲ್ಲಿ ಸೌರಜ್ವಾಲೆಯಿಂದ ಹೊರಬರುವಂತಹ ಮಾರುತಗಳ ಪರಿಣಾಮದಿಂದ ಭೂಮಿಯ ತಾಪಮಾನ ಹೆಚ್ಚಾಗಿ ಕೆಲವು ಪ್ರದೇಶಗಳಲ್ಲಿ ಜೀವಸಂಕುಲಗಳು ಕಡಿಮೆಯಾಗುತ್ತವೆ. ಮತ್ತು ಭಾರತದಲ್ಲಿ ಮಾತ್ರ ಈ ರೀತಿ ತಾಪಮಾನ ಹೆಚ್ಚಾಗುವದಿಲ್ಲ ಎಂದು ಹೇಳುತ್ತವೆ ಇದು ಸಾಧ್ಯವೇ ?
ಪ್ರೀತಿಯ ಬುದ್ಧಿವಂತ ಜೀವಿಗಳೇ ದಯಮಾಡಿ ಪ್ರಳಯದ ಬಗ್ಗೆ ತಲೆ ಕೆಡೆಸಿಕೊಳ್ಳದೇ ಭೂಮಿಯಲ್ಲಿನ ಜೀವಿಗಳ, ಜೀವ ಸಂಕುಲಗಳ ಬಗ್ಗೆ ತಿಳಿದುಕೊಳ್ಳಿ ಅವುಗಳ ಉಳಿವಿಗಾಗಿ, ರಕ್ಷಣೆಗಾಗಿ ಪಣತೊಡಿ, ಭೂಸಂಪತ್ತನ್ನು ಲೂಟಿ ಮಾಡುವದನ್ನು ತಡೆಗಟ್ಟಿ ವಾತಾವರಣವನ್ನು ಸಮತೋಲನ ಮಾಡುವಲ್ಲಿ ನಿರಂತರ ಪ್ರಯತ್ನವಿರಲಿ, "ನಾನೊಬ್ಬ ಮಾಡಿದರೆ ಅಗುವದಿಲ್ಲ" ಎನ್ನುವ ಕಲ್ಪನೆ ಬಿಟ್ಟು ನಾನೂ ಮತ್ತು ಎಲ್ಲರೂ ಮಾಡಿದರೆ ಇದು ಸಾಧ್ಯ ಎನ್ನುವದನ್ನು ಅರಿತು ನೀವು ನಿಮ್ಮ ಸುತ್ತಮುತ್ತಲಿನವರೂ ಸೇರಿ ಪರಿಸರ ರಕ್ಷಿಸಿರಿ, ಪರಿಸರವನ್ನು ಉಳಿಸಿರಿ, ಬೆಳೆಸಿರಿ, ರಕ್ಷಿಸಿರಿ "ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ" ಎನ್ನುವದನ್ನು ತಿಳಿದರೆ ಪರಿಸರವು ನಮ್ಮನ್ನು ತೂಗು ತೊಟ್ಟಿಲಿನಲ್ಲಿ ಹಾಕಿ ನಮ್ಮನ್ನು ಜೋಪಾನ ಮಾಡುತ್ತದೆ. ಇದಾವುದಕ್ಕೂ ಹೆದರಬೇಡಿ ಐive & ಐeಣ ಐive ಎನ್ನುವಂತೆ ಇರೋಣ, ಪ್ರಕೃತಿ ಮಾತೆಯನ್ನು ಪೂಜಿಸೋಣ.
ದಿನಂಕ: ೨೧.೧೨.೨೦೧೨ ರಂದು ಪ್ರಳಯವಾಗುತ್ತದೆ ಎಂದು ಎಲ್ಲಾ ಮಾಧ್ಯಮದವರು ಹಗೂ ಜೋತಿಷಿಗಳು ಹೇಳುತ್ತಿದ್ದಾರೆ. ಇದನ್ನು ನಂಬಬೇಕೆ ? ಅಥವಾ ಬಿಡಬೇಕು ಎನ್ನುವದು ಬಹಳಷ್ಟು ಜನರಿಗೆ ಗೊಂದಲವನ್ನುಂಟು ಮಾಡಿದೆ. ಒಂದೊಂದು ಮಾಧ್ಯಮಗಳು ಒಂದೊಂದು ರೀತಿಯಲ್ಲಿ ಬಿತ್ತರಿಸುತ್ತಾ ಜನರನ್ನು ಅದೈರ್ಯಗೊಳಿಸುತ್ತಿವೆ. ಪ್ರಕೃತಿಯಲ್ಲಿ ಏನಾದರೂ ಸಂಭವಿಸಿದರೆಅದಕ್ಕೆ ಕಾರಣ ಈ ವರ್ಷ ಪ್ರಳಯವಾಗುತ್ತದಂತೆ ಅದಕ್ಕೆ ಇದು ಅದರ ಮುನ್ಸೂಚನೆಯಂತೆ. ಉದಾ:- ಮೊನ್ನೆ ಒಂದೂರಿನಲ್ಲಿ ಆರು ಕಾಲುಗಳನ್ನು ಹೊಂದಿರುವ ಒಂದು ಹಸುವಿನ ಕರು ಜನ್ಮತಾಳಿರುವದು ನೋಡಿ, ಇದು ಅಂತ್ಯದ ಕಾಲ ಅದಕ್ಕೆ ಈ ರೀತಿಯಾಗಿ ಹುಟ್ಟಿದೆಯಂತೆ ಎಂದು ಹೇಳುತ್ತಾರೆ. ಹಾಗೂ ಇದೇ ರೀತಿ ಒಂದು ಬೇವಿನ ಮರದಲ್ಲಿ ಹಾಲು ಸುರಿಯುವು ಕಂಡು, ಈ ವರ್ಷ ಪ್ರಳಯವಾಗುತ್ತದೆಯಂತೆ ಅದಕ್ಕೆ ಈ ರೀತಿ ಬೇವಿನ ಗಿಡ ಹಾಲು ಸುರಿಸುತ್ತಿದೆಯಂತೆ ಎಂದು ಹೇಳಿದ್ದು ಉಂಟು. ಆದರೆ ಇವುಗಳ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳು ಮೇಲಿನ ಕ್ರಿಯೆಗಳು ಸಂಭವಿಸಲು ಕಾರಣ. ಆದರೆ ಅಂತೆ-ಕಂತೆಗಳ ಕಥೆಗಳನ್ನು ಕಟ್ಟಿ ಭಯಾನಕ ರೀತಿಯಲ್ಲಿ ಜನರಿಗೆ ಬಿತಯ್ತರಿಸುವದನ್ನು ನೋಡಿದರೆ ಇಂತಹ ಕಂಪ್ಯೂಟರ್ ಯುಗದಲ್ಲಿ ಕೂಡ ಮೌಢ್ಯತೆಗಳನ್ನು ಬೆಳೆಸುವದನ್ನು ನೋಡಿ ಪ್ರಳಯವಾಗುವದಕ್ಕೆ ಮುಂಚಿತವಾಗಿಯೇ ಜನರು ಸತ್ತು ಹೋಗಬೇಕು. ಹಾಗೆ ಮಾಧ್ಯಮದವರು ಚಿತ್ರಿಸುತ್ತಾರೆ. ಮಾಧ್ಯಮದವರೇ ದಯಮಾಡಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಭಯಾನಕ ರೀತಿಯಲ್ಲಿ ಸುದ್ದಿಯನ್ನು ಚಿತ್ರಿಸದೇ, ಸರಳ ರೀತಿಯಲ್ಲಿ ಜನರಿಗೆ ಒಂದು ವೇಳೆ ಪ್ರಳಯವಾದರೆ ಅಥವಾ ಅಂತಹ ಸಂದರ್ಭ ಬಂದರೆ ಜನರು ಹೇಗೆ ಧೈರ್ಯ ತೆಗೆದುಕೊಳ್ಳಬೇಕು, ಹೇಗೆ ಸುರಕ್ಷಿತವಾಗಿರಲು ಪ್ರಯತ್ನಿಸಬೇಕು ಎನ್ನುವ ವಿಷಯವನ್ನು ತಿಳಿಸಿದರೆ ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ.
ಸರ್ ದಯಮಾಡಿ ಪ್ರಳವಾಗುವದಿಲ್ಲ. ಇಂತಹ ಅನೇಕ ದಿನಗಳು ಹಿಂದೆ ಹೋಗಿವೆ. ಹಾಗೆ ದಿನಗಳು ಮುಂದೆ ಬರುತ್ತಾ ಇರುತ್ತವೆ. ಉದಾಹರಣೆಯಾಗಿ ೨೦೧೧ ರ ಮಾರ್ಚನಲ್ಲಿ ಹೋಳಿ ಹುಣ್ಣಿಮೆಯ ದಿನ "ಸುಪರ್ ಮೂನ್" ಕಾಣಿಸಿಕೊಂಡಾಗ ಅಂದು ಪ್ರಳಯವಾಗುತ್ತದೆ ಎನ್ನುವ ಸುದ್ದಿಯನ್ನು ತಿಳಿದು ಅನೇಕ ಸ್ಥಳಗಳಲ್ಲಿ ಬೆಳಗಾಗುವವರೆಗೂ ಚಂದ್ರನನ್ನು ನೋಡುತ್ತಾ ಭಜನೆಯನ್ನು ಮಾಡುತ್ತಾ ದಿನಗಳನ್ನು ಕಳೆದ ಉದಾಹರಣೆಯನ್ನು ನಾನು ಸ್ವತಹಃ ಕಂಡಿದ್ದುಂಟು "ಸೂಪರ್ ಮೂನ್" ಒಂದು ವೈಜ್ಞಾನಿಕ ಕ್ರಿಯೆ, ಚಂದ್ರ ಭೂಮಿಯ ಹತ್ತಿರಕ್ಕೆ ಬಂದಾಗ ಪೂರ್ಣ ದುಂಡಾಗಿ ಮತ್ತು ದೊಡ್ಡದಾಗಿ ಕಾಣಿಸುತ್ತದೆ ಅದನ್ನೇ "ಸುಪರ್ ಮೂನ್" ಎನ್ನುತ್ತೇವೆ. ಇದನ್ನೇ ಒಂದು ಭಯಾನಕ ಧ್ವನಿಯಲ್ಲಿ ಮಾಧ್ಯಮದವರು ಬಿಂಬಿಸಿ ಇನ್ನೇನು ಪ್ರಳಯವಾಗೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಬಿಂಬಿಸಿದ್ದರು. ಇದು ಮಾಧ್ಯಮದವರು ಬಿಟ್ಟ ಹೋಳಿಹುಣ್ಣಿಮೆಯ ದಿನದ "ಬರೀ ಹೋಳು" ಎನ್ನುವ ಸುದ್ದಿ.
ಪ್ರೀತಿಯ ಓದುಗರೇ ಪ್ರಳಯವಾಗುವದು ಕನಸಿನ ಮಾತು ಪ್ರಳಯದ ಬದಲಾಗಿ ಪ್ರಕೃತಿಯಲ್ಲಿ ಹವಾಮಾನದ ವೈಪರೀತ್ಯಗಳಿಂದ ಹಾಗೂ ಮಾನವನ ದುರಾಸೆಗಳಿಂದ ಭೂಮಿಯ ಮೇಲೆ ಜಲಪ್ರಳಯ ಬರಗಾಲ ಸುನಾಮಿ, ಭೂಕಂಪನ, ಜ್ವಾಲಾಮುಖಿಗಳು, ಭಯಾನಕ ರೋಗಗಳು, ಕಲಹ, ದೇಶ-ವಿದೇಶಗಳ ಕದನ ಮುಂತಾದವುಗಳಿಂದ ಜೀವಿಗಳಿಗೆ ಕೆಲವು ಪ್ರದೇಶಗಳಲ್ಲಿ ಮಾತ್ರ ತೊಂದರೆಯಾಗುತ್ತದೆ. ಪ್ರಳಯವಂತೂ ಆಗುವದಿಲ್ಲ. ನೆಮ್ಮದಿಯಿಂದ ಬದುಕಿ ನಿಷ್ಠೆಯಿಂದ ಬಾಳಿ...
* ಜೈ ಪ್ರಕೃತಿ ಮಾತೆ. *
ಅ.ಆ.ಕರಡಿ (ಶಿಕ್ಷಕರು ಶ್ರೀ ಗವಿಸಿದ್ದೇಶ್ವೆರ ಪ್ರೌಢ ಶಾಲೆ ಕೊಪ್ಪಳ. ೯೨೪೨೧೮೧೩೨೨.

0 comments:
Post a Comment