ಕೊಪ್ಪಳ : ಸರ್ವ ಕಾಲಕ್ಕೂ ಕರ್ನಾಟಕ ಎಲ್ಲ ಭಾಷೆಗಳನ್ನು,ಜನರನ್ನು ಒಳಗೊಂಡು ವಿಶ್ವಕ್ಕೆ ಮಾದರಿಯಾಗಿ ಬೆಳೆದಿದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಕನ್ನಡಿಗರು ಸಂಕುಚಿತ ಮನೋಧರ್ಮ ತೋರುವಂತಾಗದೆ ಸಕಲ ವಿಶ್ವದ ಸಾಹಿತ್ಯ,ಬದುಕಿಗೆ ತೆರೆದುಕೊಂಡು ಮುಕ್ತವಾಗಿ ಬೆಳೆಯಬೇಕು. ವಿಶಾಲ ಮತ್ತು ವ್ಯಾಪಕವಾದ ಕಾವ್ಯ ಪ್ರೀತಿಯು ಮುಖ್ಯ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಎನ್ ಜಿಓ ಭವನದ ಮೇಲ್ಬಾಗದಲ್ಲಿ ಹಮ್ಮಿಕೊಂಡಿದ್ದ ೧೨೫ನೇ ಕವಿಸಮಯದ ಬೆಳದಿಂಗಳ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಇಂದು ಕವಿಸಮಯದಲ್ಲಿ ಕನ್ನಡ,ತೆಲುಗು,ಹಿಂದಿ,ಇಂಗ್ಲೀಷ್ ಹಾಗೂ ಉರ್ದು ಕವನಗಳನ್ನು ವಾಚನ ಮಾಡಲಾಯಿತು. ಈ ರೀತಿ ಬಹುಭಾಷೆಯ ಕಾವ್ಯಕ್ಕೆ ಗೌರವ ನೀಡುವುದರೊಂದಿಗೆ ಹೊಸ ವಿಚಾರಗಳಿಗೆ ಮುಕ್ತವಾಗಿ ತೆರೆದುಕೊಂಡರೆ ನಮ್ಮ ಸಾಹಿತ್ಯ ಮತ್ತ್ತಷ್ಟು ಶ್ರೀಮಂತವಾಗುತ್ತದೆ . ಆರ್.ಕೆ.ನಾರಾಯಣರ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಹಿಂದಿ,ಉರ್ದು,ತೆಲಗು ಹಾಗೂ ಇಂಗ್ಲೀಷ್ ಕವಿತೆಗಳನ್ನು ವಾಚನ ಮಾಡಿದ ನಂತರ ಕನ್ನಡಕ್ಕೆ ಅನುವಾದಿಸಿ ವಾಚನ ಮಾಡಲಾಯಿತು.
ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ,ಶರಣಪ್ಪ ದಾನಕೈ,ರಮೇಶ,ಕನಕಲತಾ ಶ್ರೀವಾಸ್ತವ್,ದೀಪಕ್, ಶರಣಪ್ಪ,ಯಶವಂತ ಮೇತ್ರಿ, ವಿ.ಬಿ.ರಡ್ಡೇರ್, ಚಂದ್ರು ಕನಕಗಿರಿ,ಸುದೀಂದ್ರ ರಾವ್ , ಈರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು ಎನ್.ಜಡೆಯಪ್ಪ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
0 comments:
Post a Comment