ಕೊಪ್ಪಳ : ಅ ೦೨: ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಇಂದಿನ ಯುವ ಪೀಳಿಗೆ ಪಾಲಿಸಬೇಕೆಂದು ಶಿಕ್ಷಕ ರಾಮರಡ್ಡೆಪ್ಪ ಕರೆ ನೀಡಿದರು. ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಬಹದ್ದೂರ್ ಶಾಸ್ತ್ರೀ ರವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಗಾಂಧಿಜೀಯವರು ಮೂರು ಕಾರಣಗಳಿಗಾಗಿ ಮಹಾತ್ಮರೆನಿಸದರು ಮೊದಲನೆಯದು ಅವರು ಅನುಸರಿಸಿ ಸ್ವಾತಂತ್ರ್ಯ ದೊರಕಿಸಿ ಕೊಟ್ಟ ಅಹಿಂಸಾ ತತ್ವ. ಎರಡನೆಯದು ಅಜಾತ ಶತ್ರು ಮೂರನೆಯದು ಗಾಂಧೀಜಿಯವರ ವ್ಯಕ್ತಿತ್ವ ವಿಶ್ವದೆಲ್ಲೆಡೆ ಪ್ರಚಾರ ಆಗಿರುವುದು. ಗಾಂಧೀಜಿಯವರು ಮರಣ ಹೊಂದಿದ ದಿನ ವಿಶ್ವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಎಲ್ಲಾ ರಾಷ್ಟ್ರಗಳ ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗಿತ್ತು, ಈ ಕರಾಣಗಳಿಗಾಗಿ ಗಾಂಧೀಜಿಯವರು ಮೇಲ್ಪಂಕ್ತಿ ನಾಯಕರಾದರೆಂದು ಹೇಳಿದರು.
ಮುಖ್ಯ ಅಥಿತಿಗಳಾದ ರಾಷ್ಟ್ರಪತಿ ಪದಕ ವಿಜೇತ ನಿವೃತ್ತ ಶಿಕ್ಷಕ ದತ್ತಾತ್ರೇಯ ನಾಯಕ ತಮ್ಮಣ್ಣನವರ ಮಾತನಾಡಿ ಗಾಂಧೀಜಿಯವ ಅಸ್ತ್ರಗಳಾದ ಸತ್ಯ, ಶಾಂತಿ ಹಾಗೂ ಅಹಿಂಸೆಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಮಕ್ಕಳು ಸಹ ಅದೇ ರೀತಿಯ ಅಸ್ತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಉಪದೇಶಿಸಿದರು.
ಅಧ್ಯಕ್ಷತೆ ವಹಿಸಿದ ಮುಖ್ಯ ಶಿಕ್ಷಕರಾದ ಕರಿಬಸಪ್ಪ ಪಲ್ಲೇದ ಅವರು ಲಾಲ ಬಹದ್ದೂರ ಶಾಸ್ತ್ರೀಯವರ ವ್ಯಕ್ತಿತ್ವ ಮತ್ತು ರಾಜಕೀಯ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಮಾರಂಭದಲ್ಲಿ ಭಾಗವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮರಮಾನಂದ ಯಾಳಗಿ ಅವರ ನೇತೃತ್ವದಲ್ಲಿ ಸರ್ವಧರ್ಮ ಸಮನ್ವಯ ಪ್ರಾರ್ಥನೆ ನಡೆಸಲಾಯಿತು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ದತ್ತರಾವ್ ಗುರುಗಳು, ಎಸ್.ಡಿ.ಎಂ.ಸಿ. ಸದಸ್ಯರಾದ ಮಲ್ಲಿಕಾರ್ಜುನ ಪ್ರಭುಶೆಟ್ಟರ್, ಶಾಲಾ ಶಿಕ್ಷಕರು ಹಾಜರಿದ್ದರು. ಹಿರಿಯ ಶಿಕ್ಷಕರಾದ ಜಯರಾಜ ಬೂಸದ ಕಾರ್ಯಕ್ರಮವನ್ನು ನಿರೂಪಿಸಿದರು, ಕೊನೆಯಲ್ಲಿ ಗೋಪಾಲರಾವ್ ಅಗಡಿ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
0 comments:
Post a Comment