PLEASE LOGIN TO KANNADANET.COM FOR REGULAR NEWS-UPDATES


,ಅ.28: ಮುಸ್ಲಿಂ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಲು ಸಾಚಾರ್ ಸಮಿತಿ ವರದಿಯ ಅನುಷ್ಠಾನ ಹಾಗೂ ಅಲ್ಪಸಂಖ್ಯಾತರಿಗೆ ಯುಪಿಎ ನೀಡಿರುವ ಚುನಾವಣಾ ಆಶ್ವಾಸನೆ ಗಳನ್ನು ಈಡೇರಿಸಲು ತಾನು ಆದ್ಯತೆ ನೀಡುವುದಾಗಿ, ರವಿವಾರ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆ.ರಹ್ಮಾನ್ ಖಾನ್ ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಭರವಸೆಯನ್ನು ನೀಡಿದರು.
''ಈವರೆಗೆ ಪರಿಹರಿಸಲು ಸಾಧ್ಯ ವಾಗಿಲ್ಲವೆಂದು ಎಲ್ಲ ಅಲ್ಪಸಂಖ್ಯಾತ ಸಮುದಾಯದವರು ಭಾವಿಸಿರುವಂತಹ ಸಮಸ್ಯೆಗಳಿಗೆ ಸ್ಪಂದಿಸಲು ತಾನು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಅವರು ತಿಳಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್‌ನ ನೇತೃತ್ವವನ್ನು ವಹಿಸ ಬೇಕೆಂದು,ರಹ್ಮಾನ್ ಖಾನ್ ಆಗ್ರಹಿ ಸಿದರು.ದೇಶದ ಬಗ್ಗೆ ದೂರದೃಷ್ಟಿಯುಳ್ಳ ನಾಯಕನಾದ ರಾಹುಲ್‌ಗಾಂಧಿ ಓರ್ವ ಯಶಸ್ವಿ ನಾಯಕರಾಗುವರೆಂಬ ಆಶಾವಾದವನ್ನು ವ್ಯಕ್ತಪಡಿಸಿದರು.
 ಸಚಿವನಾಗಿ ತನ್ನ ನೇಮಕದಿಂದಾಗಿ, ಮುಸ್ಲಿಮರಿಗೆ ಸಂಪುಟದಲ್ಲಿ ಸೂಕ್ತ ಪ್ರಾತಿ ನಿಧ್ಯ ದೊರೆತಿದೆಯೆಂಬುದಾಗಿ ತಾವು ಭಾವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿ ಸಿದ ರಹ್ಮಾನ್ ''ತಮಗೆ ಸಂಪು ಟದಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆ ತಿದೆಯೇ ಎಂಬುದನ್ನು ತಿಳಿದು ಕೊಳ್ಳುವುದು ಮುಸ್ಲಿಮರಿಗೆ ಸೇರಿದ್ದಾಗಿದೆ'' ಎಂದರು.
   ಆದರೆ ನಾನು ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಅಭ್ಯುದಯಕ್ಕಾಗಿ ಶ್ರಮಿಸುವೆ ಎಂದು ರಾಜ್ಯಸಭಾ ಸದಸ್ಯ ರಾದ ರಹ್ಮಾನ್ ಖಾನ್ ತಿಳಿಸಿ ದರು. ಸರಕಾರವು ದೇಶದ ಅಭಿವೃದ್ಧಿಗೆ ಹಾಗೂ ಜನತೆಗೆ ನೀಡಿರುವ ಭರವಸೆ ಗಳನ್ನು ಈಡೇರಿಸಲು ಸಕಾರಾತ್ಮಕವಾಗಿ ಶ್ರಮಿಸಲಿದೆಯೆಂದ ಅವರು, ಯುಪಿಎ ಸರಕಾರಕ್ಕೆ ಕಳಂಕ ಹಚ್ಚುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲವೆಂದು ಅವರು ತಿಳಿಸಿದರು.

Advertisement

0 comments:

Post a Comment

 
Top