PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಸೆ.೨೯ ಅತ್ಯಧಿಕ ಜನ ಸಂಚಾರವುಳ್ಳ ಹಾಗೂ ನಗರದ ಕೇಂದ್ರ ಭಾಗದಲ್ಲಿರುವ ಕಿನ್ನಾಳ ರಸ್ತೆಯಲ್ಲಿನ ರೇಲ್ವೇ ಲೆವೆಲ್ ಕ್ರಾಸಿಂಗ್ ನಂಬರ್ ೬೪ ರಲ್ಲಿಯೂ ಸೇತುವೆ ನಿರ್ಮಿಸಲು ಬದ್ಧವಿದ್ದು , ಬರುವ ಅಕ್ಟೋಬರ್ ೪ ರಂದು ಗುಲ್ಬರ್ಗಾದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಗೆ ಮುನ್ನ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ಸಂಸದ ಶಿವರಾಮನಗೌಡ ಭರವಸೆ ನೀಡಿದ್ದಾರೆ.
ಕೊಪ್ಪಳ-ಕಿನ್ನಾಳ ರೇಲ್ವೇ ಸೇತುವೆ ಹೋರಾಟ ಸಮಿತಿಯು ಜಿಲ್ಲಾ ಆಡಳಿತ ಭವನದ ಎದುರು,ಕಿನ್ನಾಳ ರಸ್ತೆಯಲ್ಲಿ ರೇಲ್ವೇ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿದ ಸಂಸದ ಶಿವರಾಮನಗೌಡ ಚಳವಳಿ ನಿರತರ ಸಮಸ್ಯೆಗಳನ್ನು  ಆಲಿಸಿ ನಂತರ ಮಾತನಾಡುತ್ತ ಈ ವಿಷಯ ತಿಳಿಸಿದರು.
ಕೊಪ್ಪಳ ನಗರವು ಕಿನ್ನಾಳ ರಸ್ತೆಗೆ ಹೊದಿಕೊಂಡಂತೆ ಉತ್ತರ ದಿಕ್ಕಿನಲ್ಲಿಯೇ ವೇಗವಾಗಿ ಅಭಿವೃದ್ಧಿಹೊಂದುತ್ತಿದೆ,  ಈ ಮಾರ್ಗವನ್ನು ಅವಲಂಬಿಸಿಯೇ ಸುಮಾರು ೩೦ಕ್ಕೂ ಹೆಚ್ಚು ಹಳ್ಳಿಗಳು ಪ್ರತಿನಿತ್ಯ ಕೊಪ್ಪಳ ನಗರಕ್ಕೆ ಸಂಪರ್ಕ ಹೊಂದಿವೆ. ಇದೇ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ಕಬರಸ್ತಾನ್ , ಭಾರತೀಯ ಆಹಾರ ನಿಗಮ,ಹಿರೇಹಳ್ಳ ಜಲಾಶಯ ಮತ್ತಿತರ ಪ್ರಮುಖ ಸ್ಥಳಗಳಿವೆ ಈ ಕಾರಣದಿಂದಾಗಿಯೇ ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ರೇಲ್ವೇ ಇಲಾಖೆಯ ಸಭೆಯಲ್ಲಿ ಕೊಪ್ಪಳ ನಗರದ ಯಾವುದೇ ರೇಲ್ವೇ ಗೇಟುಗಳನ್ನು ಮುಚ್ಚಬಾರದೆಂದು ಸ್ಪಷ್ಟವಾಗಿ ಸೂಚಿಸಿದ್ದೇನೆ.ರಾಜ್ಯ ಸರಕಾರ,ಸ್ಥಳೀಯ ಸಂಸ್ಥೆಗಳು,ಹೆಚ್.ಕೆ.ಡಿ.ಬಿ. ಮೊದಲಾದ ಮೂಲಗಳಿಂದ ಹಣ ತ್ವರಿತವಾಗಿ ಹಣ ಒದಗಿಸಿದರೆ.೬೪ ಮತ್ತು ೬೬ ನೇ ರೇಲ್ವೇ ಗೇಟುಗಳಲ್ಲಿ ಸೇತುವೆ, ೬೩ ನೇ ಗೇಟಿನಲ್ಲಿ ಪಾದಚಾರಿ ಸೇತುವೆ ನಿರ್ಮಾಣಕ್ಕೆ ರೇಲ್ವೇ ಇಲಾಖೆಯಿಂದ ತಾಂತ್ರಿಕ ಒಪ್ಪಿಗೆ ಕೊಡಿಸುವದಾಗಿ ಹೇಳಿದರಲ್ಲದೇ,ಬರುವ ಅಕ್ಟೋಬರ್ ೪ ರಂದು ಗುಲ್ಬರ್ಗಾದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅನುಮೋದನೆ ನೀಡಲು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರೊಂದಿಗೆ ಚರ್ಚಿಸುವದಾಗಿ ಭರವಸೆ ನೀಡಿದರು.

Advertisement

0 comments:

Post a Comment

 
Top