PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ ಜಿಲ್ಲಾ ಪಂಚಾಯತಿಯ ಎರಡನೆ ಅವಧಿಗಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಸೆ. ೨೮ ರಂದು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
  ಗುಲಬರ್ಗಾ ಪ್ರಾದೇಶಿಕ ಆಯುಕ್ತರ ನಿಗಾದಲ್ಲಿ ಚುನಾವಣೆ ನಡೆಯಲಿದ್ದು, ಜಿಲ್ಲಾ ಪಂಚಾಯತಿಯ ಎರಡನೆ ಅವಧಿಗಾಗಿ ಅಧ್ಯಕ್ಷರ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷರ ಹುದ್ದೆಯನ್ನು ಅನುಸೂಚಿತ ಪಂಗಡ (ಮಹಿಳೆ) ವರ್ಗಕ್ಕೆ ಮೀಸಲಿರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.  ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಸಂಬಂಧಪಟ್ಟ ವರ್ಗಕ್ಕೆ ಅರ್ಹರಾದ ಒಬ್ಬ ಚುನಾಯಿತ ಸದಸ್ಯರ ಹೆಸರನ್ನು ಸೂಚಿಸುವ ನಾಮಪತ್ರವನ್ನು ಬೇರೊಬ್ಬ ಚುನಾಯಿತ ಸದಸ್ಯರು ಸೆ. ೨೮ ರಂದು ಮಧ್ಯಾಹ್ನ ೧ ಗಂಟೆಯ ಒಳಗಾಗಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಿಗೆ ಸಲ್ಲಿಸಬಹುದಾಗಿದೆ.  ನಂತರ ಅಗತ್ಯಬಿದ್ದಲ್ಲಿ ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಕಚೇರಿ  ತಿಳಿಸಿದೆ.


ಆರೋಗ್ಯ ತ್ಯಾಜ್ಯ ನಿರ್ವಹಣೆ ಕುರಿತ ಪುಸ್ತಕ ಬಿಡುಗಡೆ
ಆರೋಗ್ಯ ತ್ಯಾಜ್ಯವನ್ನು ಕಾನೂನು ಪ್ರಕಾರ ಸರಿಯಾಗಿ ನಿರ್ವಹಣೆ ಮಾಡುವುದು, ಆಸ್ಪತ್ರೆಗಳು ತ್ಯಾಜ್ಯ ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ತ್ಯಾಜ್ಯ ನಿರ್ವಹಣಾ ಅಧಿಕಾರಿ ಡಾ. ಜಿಬಾನ್ ಸಿಂಗ್ ಅವರು ಪ್ರಕಟಿಸಿರುವ ಅಟeಚಿಟಿಟiಟಿess is ಓexಣ ಣo ಉoಜಟiಟಿess ಪುಸ್ತಕವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ ಅವರು ಬಿಡುಗಡೆ ಮಾಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ ಅವರು, ಭಯೋತ್ಪಾದನೆ ಮತ್ತು ಪರಿಸರ ಮಾಲಿನ್ಯ ಇವು ನಮ್ಮ ದೇಶದಲ್ಲಿ ದಿನ ನಿತ್ಯ ನಡೆಯುತ್ತಿರುವ ಜ್ವಲಂತ ಸಮಸ್ಯೆಯಾಗಿದ್ದು, ಪರಿಸರ ಮಾಲಿನ್ಯವನ್ನು ಹೊರತುಪಡಿಸಿ ಇನ್ನುಳಿದಂತಹ ಸಮಸ್ಯೆಗಳು ಅಜ್ಞಾನದ ಪರಿಣಾಮಗಳಿಂದ ಉಂಟಾಗುತ್ತದೆ.  ಪ್ರತಿನಿತ್ಯ ನಮ್ಮ ದೇಹವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಕಾಳಜಿ ವಹಿಸಿದ ರೀತಿಯಲ್ಲಿಯೇ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಬೇಕು.  ಆರೋಗ್ಯ ತ್ಯಾಜ್ಯ ವಸ್ತುಗಳಿಂದ ಆಗುವಂತಹ ಪರಿಸರ ಮಾಲಿನ್ಯ ಮತ್ತು ಆರೋಗ್ಯ ಹಾನಿಕಾರಕಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ತ್ಯಾಜ್ಯ ನಿರ್ವಹಣಾಧಿಕಾರಿಯಾಗಿರುವ ಡಾ. ಮೋಇರಾಂಗ್ ಥೇಮ್ ಜಿಬಾನ್ ಸಿಂಗ್ ಅವರ ಪ್ರಯತ್ನ ಶ್ಲಾಘನೀಯ ಎಂದರು.
  ಪುಸ್ತಕ ಪ್ರಕಟಿಸಿದ  ಜಿಲ್ಲಾ ಆರೋಗ್ಯ ತ್ಯಾಜ್ಯ ನಿರ್ವಹಣಾಧಿಕಾರಿ ಡಾ. ಮೋಇರಾಂಗ್ ಥೇಮ್ ಜಿಬಾನ್ ಸಿಂಗ್ ಮಾತನಾಡಿ, ವೈದ್ಯರನ್ನು ಜನರು  ದೇವರು ಎಂದು ನಂಬುತ್ತಾರೆ.  ಆದರೆ ಆರೋಗ್ಯ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೇ ಹೋದರೆ, ಜನರ ಈ ನಂಬಿಕೆಗೆ ಪೆಟ್ಟು ಬೀಳಲಿದೆ.  ಜನರ ಜೀವ ಉಳಿಸುವುದಕ್ಕೋಸ್ಕರ, ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಆರೋಗ್ಯ ತ್ಯಾಜ್ಯವನ್ನು ಕಾನೂನು ರೀತ್ಯ ಸಮರ್ಪಕವಾಗಿ ನಿರ್ವಹಣೆ ಮಾಡುವುದು ಆಯಾ ಆಸ್ಪತ್ರೆ, ವೈದ್ಯರ ಕರ್ತವ್ಯವಾಗಿದೆ.  ಈ ನಿಟ್ಟಿನಲ್ಲಿ ಅವರು ಅರಿವು ಹೊಂದುವುದು ಅಗತ್ಯವಾಗಿದೆ.  ರೋಗ ಮುಕ್ತ ಸಮಾಜ ನಿರ್ಮಾಣದಲ್ಲಿ ಆರೋಗ್ಯ ತ್ಯಾಜ್ಯ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ.  ಕೊಪ್ಪಳ ಜಿಲ್ಲೆಯನ್ನು ಆರೋಗ್ಯ ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸಲಾಗುವುದು ಎಂದರು.
  ಕಾರ್ಯಕ್ರಮದಲ್ಲಿ ಡಾ. ರಮೇಶ್ ಮೂಲಿಮನಿ, ಡಾ. ಎಸ್.ಕೆ. ದೇಸಾಯಿ, ಸೇರಿದಂತೆ ಹಲವಾರು ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top