ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ, ಪುರಸಭೆ, ನಗರಸಭೆಗಳಲ್ಲಿ ಶೇ.೨೨.೭೫ ರ ಅನುದಾನದಲ್ಲಿ ಶೇ. ೧೦ ರಷ್ಟು ಅನುದಾನವನ್ನು ವಿದ್ಯಾರ್ಥಿಗಳಿಗಾಗಿ ಪುಸ್ತಕ ಖರೀದಿಸಬಹುದಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಶೇ.೨೨.೭೫ ರ ಅನುದಾನವನ್ನು ಕಡ್ಡಾಯವಾಗಿ ಕುಡಿಯುವ ನೀರು, ಚರಂಡಿ ನಿರ್ಮಾಣ ಹಾಗೂ ರಸ್ತೆ ಇವುಗಳಿಗೆ ಮೀಸಲಿರಿಸಿ ಪುಸ್ತಕಗಳನ್ನು ಕೊಡಿಸಬಾರದೆಂದು ಈ ಹಿಂದೆ ನಿರ್ಣಯಿಸಲಾಗಿತ್ತು. ಈ ನಿರ್ಣಯದನ್ವಯ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ತೊಂದರೆ ಉಂಟಾಗುವ ಹಿನ್ನಲೆಯಲ್ಲಿ, ವಿವಿಧ ಮುಖಂಡರುಗಳು, ಸಂಘಟನೆಗಳು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದನ್ವಯ, ಜಿಲ್ಲಾಧಿಕಾರಿಗಳು ಶೇ.೨೨.೭೫ ರ ಒಟ್ಟು ಅನುದಾನದಲ್ಲಿ ಶೇ.೧೦ ರಷ್ಟು ಅನುದಾನವನ್ನು ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಖರೀದಿಸಲು ನೀಡಬೇಕೆಂದು ತಿಳಿಸಿರುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲೆಯ ಎಲ್ಲ ಗ್ರಾ.ಪಂ., ಪುರಸಭೆ, ನಗರಸಭೆಗಳಲ್ಲಿ ತಕ್ಷಣದಿಂದ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎಸ್.ಹೆಚ್.ಅಂಗಡಿ ಅವರು ತಿಳಿಸಿದ್ದಾರೆ.
0 comments:
Post a Comment