PLEASE LOGIN TO KANNADANET.COM FOR REGULAR NEWS-UPDATES


ಆಯುಷ್ ಇಲಾಖೆಯಿಂ
  ಆಯುಷ್ ಇಲಾಖೆಯು ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆ. ೨೨ ರಿಂದ ೨೭ ರವರೆಗೆ ೦೬ ದಿನಗಳ ಕಾಲ ಕೊಪ್ಪಳ ತಾಲೂಕಿನ ಶಾಲಾ ಶಿಕ್ಷಕರಿಗೆ ಯೋಗ ಮತ್ತು ಆರೋಗ್ಯ ಪ್ರಶಿಕ್ಷಣ ತರಬೇತಿ ಕಾರ್ಯಾಗಾರವನ್ನು ಕೊಪ್ಪಳದ ಶ್ರೀ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.
  ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ಆ. ೨೨ ರಂದು ಬೆಳಿಗ್ಗೆ ೯-೩೦ ಗಂಟೆಗೆ ನಡೆಯಲಿದ್ದು, ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಶಾಸಕ ಸಂಗಣ್ಣ ಕರಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ಸಂಸದ ಶಿವರಾಮಗೌಡ, ಶಾಸಕರುಗಳಾದ ಪರಣ್ಣ ಮುನವಳ್ಳಿ, ಈಶಣ್ಣ ಗುಳಗಣ್ಣವರ್, ಶಿವರಾಮ ತಂಗಡಗಿ, ಅಮರೇಗೌಡ ಬಯ್ಯಾಪುರ, ಹಾಲಪ್ಪ ಆಚಾರ್, ಶಶಿಲ್ ನಮೋಶಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಸೇರಿದಂತೆ ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಡಿಡಿಪಿಐ ಜಿ.ಹೆಚ್. ವೀರಣ್ಣ, ಡಿಹೆಚ್‌ಓ ಡಾ. ಮಹಾದೇವಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಆಯುಷ್ ಇಲಾಖೆ ನಿರ್ದೇಶಕ ಗಾ.ನಂ. ಶ್ರೀಕಂಠಯ್ಯ, ಉಪನಿರ್ದೇಶಕರು (ಯೋಗ) ಡಾ. ಸತೀಶ್, ಉಪನಿರ್ದೇಶಕರು (ಆಯುವೇದ) ಡಾ. ಆರ್. ಸರಸ್ವತಿ, ಉಪನಿರ್ದೇಶಕರು (ಯುನಾನಿ) ಡಾ. ರಫಿಯಾ ಬೇಗಂ, ಯೋಗ ಸಲಹೆಗಾರರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
  ತರಬೇತಿ ಶಿಬಿರದ ಅಂಗವಾಗಿ ಆರು ದಿನಗಳ ಕಾಲ ಬೆಳಿಗ್ಗೆ ೬ ರಿಂದ ೮ ರವರೆಗೆ ಜಯರೇವಣ್ಣ, ಡಾ. ಸುಮಂಗಲಾ ಮತ್ತು ಡಾ. ಶಶಿಧರ್ ಅವರಿಂದ ಶಿಕ್ಷಕರಿಗೆ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ಕಾರ್ಯಕ್ರಮ ನಡೆಯಲಿದೆ.  ಆ. ೨೨ ರಂದು ಆಯುಷ್ ಇಲಾಖೆ ಪರಿಚಯ, ಯೋಗ ಕಾರ್ಯಕ್ರಮದ ಪಕ್ಷಿನೋಟ, ಹುಸೇನ್ ಷರೀಫ್‌ರಿಂದ ಕಲಿಕಾ ತರಗತಿ ಪ್ರಕ್ರಿಯೆ, ಎಸ್.ಎಸ್. ಹಿರೇಮಠ ಅವರಿಂದ ಯೋಗದ ಪರಿಚಯ ಮತ್ತು ಮಾರ್ಗಗಳು.  ಆ. ೨೩ ರಂದು ಡಾ. ಪ್ರಭು ನಾಗಲಾಪುರರಿಂದ ಯೋಗ ಮತ್ತು ಮಾನಸಿಕ ಆರೋಗ್ಯ, ಜಯರೇವಣ್ಣ ರಿಂದ ಪ್ರಾಯೋಗಿಕ ಯೋಗಶಿಕ್ಷಣ, ಡಾ. ಅಶೋಕ್ ಪಾಟೀಲರಿಂದ ಯೋಗ, ಆಹಾರ ಮತ್ತು ಆರೋಗ್ಯ, ಡಾ. ಸುಮಂಗಲಾ ಅವರು ಮಕ್ಕಳಲ್ಲಿ ಬರುವ ರೋಗಗಳು ಮತ್ತು ಚಿಕಿತ್ಸಾತ್ಮ ಯೋಗಾಸನ ಕುರಿತು ಉಪನ್ಯಾಸ ನೀಡುವರು.  ಅದೇ ರೀತಿ ೨೪ ರಂದು ಹದಿಹರೆಯದ ಮಕ್ಕಳ ಸಮಸ್ಯೆ ಮತ್ತು ಪರಿಹಾರ, ಷಟ್‌ಕ್ರಿಯೆ ಮತ್ತು ಷಟ್‌ಚಕ್ರಗಳ ಪರಿಚಯ, ಶಿಥಲೀಕರಣ ವ್ಯಾಯಾಮ, ಸೂರ್ಯನಮಸ್ಕಾರ, ಆಸನಗಳ ಮಹತ್ವ.  ೨೫ ರಂದು ಮನೋಸಾಮಾಜಿಕ ಸಮಸ್ಯೆ ಮತ್ತು ನಿವಾರಣೆ, ಮಕ್ಕಳು ಮತ್ತು ಪೋಷಕರ ಕೌನ್ಸಿಲಿಂಗ್, ಚಿಕಿತ್ಸಾತ್ಮ ಯೋಗಾಸನ.  ೨೬ ರಂದು ಶಿಕ್ಷೆ ರಹಿತ ಶಿಕ್ಷಣ, ಮನೆ ಮದ್ದು, ಪ್ರಾಣಾಯಾಮ ಮತ್ತು ಧ್ಯಾನ.  ೨೭ ರಂದು ಪ್ರಕೃತಿ ಚಿಕಿತ್ಸೆ, ಸಾಪಲ್ಯ ಪರೀಕ್ಷೆ ನಂತರ ಸಮಾರೋಪ ಸಮಾರಂಭ ಜರುಗಲಿದೆ.

Advertisement

0 comments:

Post a Comment

 
Top