PLEASE LOGIN TO KANNADANET.COM FOR REGULAR NEWS-UPDATES


   ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದೂವರೆ ಕೋಟಿ ರೂಪಾಯಿಗಳ ದತ್ತಿಯಿಂದ ಅರಳು ಪ್ರಶಸ್ತಿಗಳನ್ನು ನೀಡಲು ೨೦೧೨-೧೩ನೇ ಸಾಲಿಗಾಗಿ ಅರ್ಹ ಯುವ ಬರಹಗಾರರಿಂದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
  ಆ.೧೫ ೨೦೧೨ ಕ್ಕೆ ೨೫ ವರ್ಷ ಮೀರಿರದ ಕನ್ನಡ ಯುವ ಬರಹಗಾರರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ವಲಯಗಳ ಸಿಬ್ಬಂದಿಗಳೂ ಸೇರಿದಂತೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. (ಜನ್ಮ ದಿನಾಂಕದ ಅಧಿಕೃತ ದಾಖಲೆ ಲಗತ್ತಿಸಬೇಕು) ಕವನ, ಸಣ್ಣಕಥೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ, ಪರಿಸರ, ವಿನೋದ ಸಾಹಿತ್ಯ, ಅನುವಾದ, ಮಕ್ಕಳ ಸಾಹಿತ್ಯ, ವಿಮರ್ಶೆ/ಸಂಶೋಧನೆ. ಈ ಹತ್ತು ಸಾಹಿತ್ಯ ಪ್ರಕಾರಗಳಲ್ಲಿ ಕನ್ನಡದಲ್ಲಿ ರಚಿಸಿದ ಪುಸ್ತಕಗಳನ್ನು ಸ್ಪರ್ಧೆಗೆ ಕಳುಹಿಸಬಹುದು, ೨೦೧೧ನೇ ಜನೇವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಪುಸ್ತಕಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು, ಪ್ರತಿ ಒಂದು ಪ್ರಕಾರಕ್ಕೆ ಪುಸ್ತಕದ ಮೂರು ಪ್ರತಿಗಳನ್ನು ಕಳುಹಿಸಬೇಕು, ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ, ಆಯ್ಕೆಯಾದ ಪುಸ್ತಕಗಳ ಕರ್ತೃಗಳಿಗೆ ರೂ.೧೦,೦೦೦=೦೦ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಒಂದಕ್ಕಿಂತ ಹೆಚ್ಚು ಕೃತಿಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗಿದೆ.
ಆಸಕ್ತ  ಯುವ ಬರಹಗಾರರು ತಮ್ಮ ಪುಸ್ತಕಗಳನ್ನು ಸೆಪ್ಟೆಂಬರ್ ೩೦ ರೊಳಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೧೮ ಇವರಿಗೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೦-೨೬೬೨೩೫೮೪ ನ್ನು ಸಂಪರ್ಕಿಸಬಹುದಾಗಿದೆ 

Advertisement

0 comments:

Post a Comment

 
Top