PLEASE LOGIN TO KANNADANET.COM FOR REGULAR NEWS-UPDATES


; ಅಹಮದಾಬಾದ್ ನ್ಯಾಯಾಲಯ ತೀರ್ಪು

ಅಹಮದಾಬಾದ್, ಆ.29: ಗುಜರಾತ್‌ನ ನರೋಡಾ ಪಾಟಿಯಾದಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದ್ದು, 32 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿದೆ ಹಾಗೂ 29 ಮಂದಿಯನ್ನು ನಿರ್ದೋಷಿಗಳೆಂದು ಘೋಷಿಸಿ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಭಜರಂಗದಳದ ಮಾಜಿ ಮುಖ್ಯಸ್ಥ ಬಾಬು ಭಜರಂಗಿ, ಬಿಜೆಪಿಯ ಮಾಜಿ ಮಂತ್ರಿ ಮಾಯಾ ಕೊಡನಾನಿ ಸೇರಿದಂತೆ 32 ಮಂದಿಯನ್ನು ತಪ್ಪಿತಸ್ಥರೆಂದು ಅಹಮದಾಬಾದ್ ನ್ಯಾಯಾಲಯ ಘೋಷಿಸಿದೆ. ಉಳಿದ 29 ಮಂದಿಯನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
2002 ಗುಜರಾತ್‌ನ ನರೋಡಾ ಪಾಟಿಯಾದಲ್ಲಿ ಸಂಭವಿಸಿದ ಹತ್ಯಾಕಾಂಡದಲ್ಲಿ 95 ಜನರನ್ನು ಹತ್ಯೆಗೈಯಲಾಗಿತ್ತು. ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತಂಡ ಈ ಪ್ರಕರಣದ ತನಿಖೆ ನಡೆಸಿತ್ತು. ಗುಂಪಿನ ದಾಳಿಯಿಂದ ತನ್ನ ಕುಟುಂಬದ ಎಂಟು ಜನರನ್ನು ಕಣ್ಣೆದುರೇ ಕಳೆದುಕೊಂಡ ಶಕೀಲಾ ಬನೋ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು.

Advertisement

0 comments:

Post a Comment

 
Top