PLEASE LOGIN TO KANNADANET.COM FOR REGULAR NEWS-UPDATES


 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ಕೊಪ್ಪಳ-ಬೆಂಗಳೂರು ಮಾರ್ಗದಲ್ಲಿ ನೂತನ ಕರೋನಾ ಸ್ಲೀಪರ್ ಬಸ್ ಅನ್ನು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಉದ್ಘಾಟಿಸಿದರು.
  ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೊಪ್ಪಳ-ಬೆಂಗಳೂರು ಮಾರ್ಗದ ನೂತನ ಕರೋನಾ ಸ್ಲೀಪರ್ ಬಸ್‌ಗೆ ಪೂಜೆ ನೆರವೇರಿಸುವುದರ ಮೂಲಕ ಪ್ರಾರಂಭಿಸಿದ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಾರಂಭಿಸಿರುವ ಈ ಬಸ್ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಸುಖಮಯ ಪ್ರಯಾಣವನ್ನು ಕಲ್ಪಿಸಲಿದ್ದು, ಸಾರ್ವಜನಿಕರು ಬಸ್‌ನ ಸೇವೆಯನ್ನು ಪಡೆಯಬಹುದಾಗಿದೆ ಎಂದರು.
  ಸಾರಿಗೆ ಸಂಸ್ಥೆಯ ಸಂಚಾರ ನಿಯಂತ್ರಣ ಅಧಿಕಾರಿ ವಿವೇಕ್ ಅವರು ಮಾತನಾಡಿ ಈ ನೂತನ ಕರೋನಾ ಸ್ಲೀಪರ್ ಬಸ್ ಕೊಪ್ಪಳ ನಗರದ ಬಸ್ ನಿಲ್ದಾಣದಿಂದ ಪ್ರತಿ ದಿನ ರಾತ್ರಿ ೧೦ ಗಂಟೆಗೆ ಹೊರಡಲಿದ್ದು, ಅದೇ ರೀತಿ ಬೆಂಗಳೂರಿನಿಂದ ಪ್ರತಿ ದಿನ ರಾತ್ರಿ ೯-೫೦ ಕ್ಕೆ ಹೊರಡಲಿದೆ.  ಪ್ರಯಾಣ ದರ ಕೊಪ್ಪಳದಿಂದ ಬೆಂಗಳೂರಿಗೆ ರೂ. ೬೩೮, ಹೊಸಪೇಟೆಯಿಂದ ರೂ. ೫೬೭ ನಿಗದಿಪಡಿಸಲಾಗಿದೆ ಎಂದರು.
  ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top