PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಸರಳ ಪ್ರಾಸದಿಂದ ರಚಿತವಾಗಿರುವ ಕವನಗಳು ಮಕ್ಕಳನ್ನು ತಲುಪುತ್ತವೆ. ದೇಶಭಕ್ತಿ,ಪ್ರೇರಣೆ ನೀಡುವಂತಹ ಕವನಗಳನ್ನು ರಚಿಸಿರುವ ಪುಷ್ಪಲತಾ ರಾಜಶೇಖರ ಏಳುಬಾವಿ  ಮಕ್ಕಳ ಮನಗೆಲ್ಲುವ ಕವಿಯತ್ರಿ ಎಂದು ಹಿರಿಯ ಕವಿ ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೧೮ನೇ ಕವಿಸಮಯದಲ್ಲಿ ಪುಷ್ಪಲತಾ ಏಳುಬಾವಿಯವರ  "ಕುಣಿದು ಕುಣಿದು ಬಾ ನವಿಲೆ" ಮಕ್ಕಳ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 
ಮಕ್ಕಳ ಸಾಹಿತ್ಯಕ್ಕೆ ಕೊಪ್ಪಳ ಜಿಲ್ಲೆಯ ಕೊಡುಗೆ ಹೆಚ್ಚಾಗುತ್ತಿದೆ. ಈ ಸಾಲಿನಲ್ಲಿ ಪುಷ್ಪಲತಾ ಏಳುಬಾವಿಯವರೂ ಸೇರುತ್ತಾರೆ. ಸರಳ,ನೇರ ಹಾಗೂ ಸೀಮಿತ ಚೌಕಟ್ಟಿನ ಕವನಗಳು ಮಕ್ಕಳ ಮನ ಗೆಲ್ಲುತ್ತವೆ. ಮಕ್ಕಳ ಸಾಹಿತ್ಯದಲ್ಲಿ ಲಯ,ಗತಿ ಮುಖ್ಯ. ಮೌಲ್ಯಗಳನ್ನು ಎತ್ತಿಹಿಡಿಯುವ, ನೀತಿಕತೆಗಳಂತಹ ಕಥನಕಾವ್ಯಗಳು ಚೆನ್ನಾಗಿ ಮೂಡಿಬಂದಿವೆ ಎಂದು ಹೇಳಿದರು.
ಶಾಂತಾದೇವಿ ಹಿರೇಮಠ, ವಿಜಯಲಕ್ಷ್ಮೀ ಮಠದ,ಶ್ರೀನಿವಾಸ ಚಿತ್ರಗಾರ,ಶಿವಪ್ರಸಾದ ಹಾದಿಮನಿ,ಎನ್.ಜಡೆಯಪ್ಪ ಸಂಕಲನ ಕುರಿತು ಮಾತನಾಡಿದರು. ಮುದ್ರಣ ದೋಷಗಳನ್ನು ಹೊರತುಪಡಿಸಿ ಕವನಸಂಕಲನ ಚಿತ್ರಗಗಳೊಂದಿಗೆ ಸರಳವಾಗಿ,ಉತ್ತಮವಾಗಿ ಬಂದಿದೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಕೃತಿಗಳು ಬರಲಿ ಎಂದು ಅಭಿಪ್ರಾಯ ಪಟ್ಟರು.
ಕಾರ್‍ಯಕ್ರಮದಲ್ಲಿ ರಾಜಶೇಖರ ಏಳುಬಾವಿ, ಹನುಮಂತಪ್ಪ ಅಂಡಗಿ,ಶಿವಾನಂದ ಹೊದ್ಲೂರ, ಟಿ.ಜೆ.ಚಂದ್ರಶೇಖರ ,ಶಾಂತು ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಶಿವಪ್ರಸಾದ ಹಾದಿಮನಿ, ವಂದನಾರ್ಪಣೆಯನ್ನು  ಬಸವರಾಜ್ ಸಂಕನಗೌಡರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 

Advertisement

0 comments:

Post a Comment

 
Top