ಕೊಪ್ಪಳ: ಪ್ರತಿಯೊಬ್ಬ ಮನುಷ್ಯ ತನ್ನ ದುಡಿಮೆಯ ಆದಾಯದಲ್ಲಿ ಬಡವರಿಗೆ ಅಲ್ಪ ದಾನ ಮಾಡಬೇಕು ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸಯ್ಯದ್ ಹೇಳಿದರು.
ಅವರು ನಗರದ ತಮ್ಮ ನೂತನ ಗೃಹದಲ್ಲಿ ಏರ್ಪಡಿಸಿದ್ದ ಇಫ್ತಾರ್‌ಕೂಟ ಹಾಗೂ ಮೌಲ್ವಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಇಸ್ಲಾಂ ಧರ್ಮಗ್ರಂಥ ಖುರಾನ್‌ನಲ್ಲಿ ತಿಳಿಸಿರುವಂತೆ ಪ್ರತಿಯೊಬ್ಬವ್ಯಕ್ತಿ ತನ್ನ ದುಡಿಮೆಯ ಆದಾಯದಲ್ಲಿ ಶೇ೨.೫ ಸ್ವಲ್ಪವಾದರೂ ಬಡವರಿಗೆ ಜಕಾತ್‌ಕೊಡಬೇಕು, ದಾನ ಧರ್ಮ ಮಾಡಬೇಕು ಹಾಗೂ ಎಲ್ಲರೊಂದಿಗೂ ಸೌಹಾರ್ದತೆಯಿಂದ ಬಾಳಬೇಕು ಎಂದುತಿಳಿಸಿದೆ ಎಂದರು. ಎಲ್ಲ ಧರ್ಮಿಯರು ತಮ್ಮ ಧರ್ಮವನ್ನ ಗೌರವಿಸಬೇಕು ಎಂದು ಹೇಳಿದರು.
ಪ್ರತಿ ವರ್ಷ ನಮ್ಮ ಸಂಸ್ಥೆಯಿಂದ ಈ ರೀತಿಯ ಹಲವು ಕಾರ್ಯಕ್ರಮಗಳನ್ನ ನಮ್ಮ ಸಂಸ್ಥೆ ಮಾಡಿಕೊಂಡು ಬರುತ್ತಿದೆ, ಇದೇರೀತಿ ಮುಂದುವರೆಸಿಕೋಂಡು ಹೋಗುವಲ್ಲಿ ದೇವರು ನನಗೆ ಆಶೀರ್ವಾದ ಮಾಡಲೆಂದು ಪ್ರಾರ್ಥಿಸಿ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಷಯ ತಿಳಿಸಿದರು.
ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡಿದ ಟಣಕನಕಲ್ ವೀರೇಶ್ವರ ಸ್ವಾಮೀಜಿ, ಕೆಎಂ ಸಯ್ಯದ್ ಬರಗಾಲದಲ್ಲಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಅರಿತು ನಮ್ಮ ತಾಲೂಕಿನ ವಿವಿಧ ಹಳ್ಳಿಗಳಿಗೆ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದಾರೆ. ರಂಜಾನ್ ತಿಂಗಳಿನಲ್ಲಿಯೇ ಶ್ರಾವಣ ಮಾಸ ಬಂದು ಬಾವೈಕ್ಯ ವೃದ್ದಿಯಾಗಿದೆ ಎಂದರು. ಪತ್ರಕರ್ತ ಸಾದೀಕ್‌ಅಲಿ ಮಾತನಾಡಿದರು.
ಈ ಸಂದರ್ಭದಲ್ಲಿ ರೋಜ್ದಾರ್ ಬಾಂದವರಿಗೆ ಹಾಗೂ ಮೌಲ್ವಿಗಳಿಗೆ ಸನ್ಮಾನ ಮಾಡಲಾಯಿತು. ಕೆಎಂ ಸಯ್ಯದ್ ಅಧ್ಯಕ್ಷತೆ ವಹಿಸಿದ್ದರು,
ಬಿಎಸ್‌ಆರ್ ಮುಖಂಡ ಟಿ.ರತ್ನಾಕರ್, ವಕೀಲರು ಪೀರಾಸಾಬ್ ಹೊಸಳ್ಳಿ, ಉದ್ಯಮಿ ಶಾಬುದ್ದಿನ್‌ಸಾಬ್ ನೂರ್‍ಬಾಷಾ, ಮಹಮ್ಮದ್ ಅನ್ವರ್ ಉಸೇನ್ ಶಿಕ್ಷಕರು, ಸಾದೀಕ್‌ಅಲಿ ಪತ್ರಕರ್ತ, ಶಾಮೀದ್‌ಸಾಬ್ ಕಿಲ್ಲೇದಾರ್, ಎಸ್ ಎಚ್ ಉಮರಿ, ಅಬ್ದುಲ್‌ಮಾಜಿದ್ ಸಿದ್ದಿಕಿ, ಎಂಡಿ ಗೌಸ್‌ಸಾಬ್, ರಾಜೇಶ್ ಯಾವಗಲ್, ವಸೀಮ್ ಹುಲಗೇರಿ, ಬಾಷಾ ಹಿರೇಮನಿ, ಸದ್ದಾಂ ಮುಖದುಮಿಯಾ, ಬಕ್ಷಿ, ಗವಿಸಿದ್ದಪ್ಪ ಹಂಡಿ, ಗವಿಸಿದ್ದಪ್ಪ ಪೇಂಟರ್ ಹಾಗೂ ಇತರರು ಪಾಲ್ಗೊಂಡಿದ್ದರು.
0 comments:
Post a Comment