PLEASE LOGIN TO KANNADANET.COM FOR REGULAR NEWS-UPDATES


 
ವೈಚಾರಿಕತೆ ತಳಹದಿ ಸಮಾಜ ನಿರ್ಮಿಸಿ ತೋರಿಸಿದವರು ಬಸವಾದಿ ಶರಣರು ಎಂದು ಸಿಂಧನೂರು ಬಸವಕೇಂದ್ರದ ಮುಖಂಡ ವೀರಭದ್ರಪ್ಪ ಕುರಕುಂದಿ ಹೇಳಿದರು.

ವಿಶ್ವಗುರು ಬಸವೇಶ್ವರ ಚಾರೀಟೇಬಲ್ ಟ್ರಸ್ಟನ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ನಡೆದ ನಿಜಸುಖಿ ಹಡಪದ ಅಪ್ಪಣ್ಣ ಹಾಗೂ ನಿಜಮುಕ್ತೆ ಲಿಂಗಮ್ಮನವರ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಭದ್ರಪ್ಪ ಕುರಕುಂದಿ ಹೇಳಿದರು ಕಂಪ್ಯೂಟರ ಕ್ರಾಂತಿ ತಂತ್ರಜ್ಞಾನದ ತುತ್ತ ತುದಿಯಲ್ಲಿ ಇದ್ದರೂ ಸಹ ನಮ್ಮ ಮನೆಯಲ್ಲಿ ಒಂದು ಮಗು ಜನಿಸಿದರೆ ಅದರ ಹೆಸರನ್ನು ಇಡಲು ಜೋತಿಷ್ಯಗಳನ್ನು ಕೇಳುವ ಪರಿಸ್ಥಿತಿಯಲ್ಲಿದ್ದೆವೆ. ನಮ್ಮ ಮಗುವಿಗೆ ಹೆಸರಿಡಲು ನಾವು ಸ್ವತಂತ್ರರಾಗಿಲ್ಲ. ಏಕೆಂದರೆ ನಮ್ಮ ಮೇಲೆ ಸಂಪ್ರದಾಯ, ಅಂಧಶ್ರದ್ದೆ, ಮೂಢನಂಬಿಕೆಗಳು ತಂತ್ರಜ್ಞಾನದ ಪ್ರಭಾವದ ಅಷ್ಟೇ ಬೀಗುವಾಗಿದೆ. ಆದರೆ ೯೦೦ ವರ್ಷಗಳ ಹಿಂದಿಯೇ ಬಸವಣ್ಣನವರು ಒಂದು ದೊಡ್ಡ ಪಡೆಯನ್ನು ಸೃಷ್ಠಿಸಿ ಅದರ ಮೂಲಕ ವೈಚಾರಿಕ, ವೈಜ್ಞಾನಿಕ ತಳಹದಿ ಸಮಾಜ ನಿರ್ಮಿಸಿ ನಮಗೆ ತೋರಿಸಿ ಹೋಗಿದ್ದಾರೆ. ಆದ್ದರಿಂದ ನಾವು ವಚನಗಳನ್ನು ಅಧ್ಯಯನ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾದ್ಯ ಎಂದರು.

ಬಸವ ಧರ್ಮದ ಪರಿಕಲ್ಪನೆ ಹಾಗೂ ಸಿದ್ದಾಂತಕ್ಕೆ ಬಹಳಷ್ಟು ಜನರ ಕೊಡುಗೆ ಇದೆ. ಅದರಲ್ಲಿ ಹಡಪದ ಅಪ್ಪಣ್ಣ ಮತ್ತು ನಿಜಮುಕ್ತೆ ಲಿಂಗಮ್ಮನವರ ಕೊಡುಗೆ ಸಹ ಅನನ್ಯವಾದುದು ಎಂದು ಹೇಳಿದರು.

ಹಡಪದ ಅಪ್ಪಣ್ಣ ಸಮಾಜದ ಮಾಜಿ ಅಧ್ಯಕ್ಷ ಶರಣಪ್ಪ ದದೇಗಲ್, ಅಧ್ಯಕ್ಷ ಮಂಜುನಾಥ, ಟ್ರಸ್ಟನ ಅಧ್ಯಕ್ಷ ಬಸವರಾಜಪ್ಪ ಮೇರವಣಿಗೆ, ಟ್ರಸ್ಟನ ಗೌರವಾಧ್ಯಕ್ಷ ಪಂಪಾಪತಿ ಹೊನ್ನಳ್ಳಿ ವೇದಿಕೆಯಲ್ಲಿದ್ದರು.

ಶಿವಕುಮಾರ ಕುಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮೇಶ ಕಲ್ಮಂಗಿ ನೀರೂಪಿಸಿದರು. ಅಮರೇಶ ಮುಂಡರಗಿ ಸ್ವಾಗತಿಸಿದರು. ರಾಜೇಶ ಸಸಿಮಠ ವಂದಿಸಿದರು.







Advertisement

0 comments:

Post a Comment

 
Top