PLEASE LOGIN TO KANNADANET.COM FOR REGULAR NEWS-UPDATES


 : ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಸಮ್ಮೇಳನದಲ್ಲಿ ಚಿತ್ರರಂಗದ ಕಣ್ಮಣಿ ದ್ವಾರಕೀಶ ಗೆ ೭೦ ಅಭಿನಂದನೆ
ಕೊಪ್ಪಳ. ಜೂ ೨, ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವದ ಸಮ್ಮೇಳನಾಧ್ಯಕ್ಷ ರಮೇಶ ಸುರ್ವೆಯವರನ್ನು ಶಾಲುಹೊದಿಸಿ ಆಹ್ವಾನಿಸಲಾಯಿತು.
ಈ ಕುರಿತು ಪ್ರಕಟಣೆ ನೀಡಿರುವ ಸಮ್ಮೇಳನದ ಪ್ರಧಾನ ಸಂಯೋಜಕ ಮಂಜುನಾಥ ಜಿ. ಗೊಂಡಬಾಳ ಅವರು, ಪತ್ರಕರ್ತರು, ಚಲನಚಿತ್ರ ನಿರ್ದೆಶಕರು, ಸಾಂಸ್ಕೃತಿಕ ಸಂಘಟಕ ರಮೇಶ ಸುರ್ವೆರವರು ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಚುನಾವಣೆಗಳು ಮತ್ತು ಶಾಲಾ ಕಾಲೇಜುಗಳ ಪ್ರಾರಂಭೋತ್ಸವದ ಕಾರಣಗಳಿಂದ ಜೂನ್ ೯ ಮತ್ತು ೧೦ ರ ಬದಲಾಗಿ ಜುಲೈ ೧೩, ೧೪ ಮತ್ತು ೧೫ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.
ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ಉಪಹಾರ ಮತ್ತು ಮದ್ಯಾಹ್ನದ ಊಟದ ವ್ಯವಸ್ಥೆ ಮತ್ತು ಸಮ್ಮೇಳನದ ನೆನಪಲ್ಲಿ ಸ್ಮರಣ ಸಂಚಿಕೆ ತರುವದು, ಕೆಲವು ಪುಸ್ತಕಗಳನ್ನು ಬಿಡುಗಡೆಗೊಳಿಸುವದು ಸೇರಿದಂತೆ ಮೂರು ಬಹುಭಾಷಾ ಕವಿಗೋಷ್ಠಿಗಳು, ಎರಡು ಕನ್ನಡ ಕವಿಗಳ ಗೋಷ್ಠಿಗಳು ಮತ್ತು ಎರಡು ಸಾಹಿತ್ಯ ಗೋಷ್ಠಿಗಳು ಸೇರಿದಂತೆ ನಾಲ್ಕು ಸಾಂಸ್ಕೃತಿಕ ಗೋಷ್ಠಿಗಳು ಇರುತ್ತವೆ ಮೂರು ದಿನಗಳ ಕಾಲ ಸಾಹಿತ್ಯ ಮತ್ತು ಸಾಂಸ್ಕೃತಿಕ ನಿನಾದ ಜಿಲ್ಲೆಯ ಜನರಿಗೆ ಸಿಗಲಿದೆ ಜೊತೆಗೆ ರಾಜ್ಯದ ವಿವಿಧ ಭಾಷಿಕ ಜನರಿಗೆ ಕನ್ನಡದ ಕುರಿತು ಕಾಳಜಿ ಪ್ರೀತಿ ಹುಟ್ಟಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಚಿತ್ರರಂಗದ ಕಣ್ಮಣಿ ದ್ವಾರಕೀಶ ಗೆ ೭೦ ಅಭಿನಂದನೆ : ಸಮ್ಮೇಳನದಲ್ಲಿ ಕನ್ನಡ ಚಿತ್ರರಂಗದ ಕಣ್ಮಣಿ, ಕುಳ್ಳ ಖ್ಯಾತಿಯ ನಟ, ನಿರ್ದೇಶಕ, ನಿರ್ಮಾಪಕ ಬಿ. ಎಸ್. ದ್ವಾರಕೀಶ್ ರವರಿಗೆ ಅವರು ೭೦ ವರ್ಷ ಪೂರೈಸಿದ ಸಂದರ್ಭದಲ್ಲಿ ಹಾಗೂ ಚಿತ್ರ ರಂಗದಲ್ಲಿ ೪೦ ವರ್ಷ ಸಲ್ಲಿಸಿದ ಸೇವೆಯನ್ನು ಗೌರವಿಸಲು ವಿಶ್ವಜ್ಯೋತಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ನೀಡಿ ಅಭಿನಂದಿಸಲಾಗುವದು ಎಂದು ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ. 
ಸಭೆಯಲ್ಲಿ ಮಾಜಿ ಕಸಾಪ ಅಧ್ಯಕ್ಷ ಜಿ.ಎಸ್.ಗೋನಾಳ, ಶಿವಾನಂದ ಹೊದ್ಲೂರ, ಶ್ರೀನಿವಾಸ ಚಿತ್ರಗಾರ, ವೈ. ಬಿ. ಜೂಡಿ, ಹನುಮಂತರಾವ್ ಎಂ. ಎ., ಶರಣಗೌಡ ಯದೊಡ್ಡಿ, ವಿಠ್ಠಲ ಮಾಲಿಪಾಟೀಲ, ಶಿವಮೂರ್ತಿ ಮೇಟಿ ಇತರರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕವಿಗೋಷ್ಠಿ ಗೆ ಹೆಸರು ನೊಂದಾಯಿಸಲು ಮತ್ತೊಂದು ಅವಕಾಶ : ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಛೆಯುಳ್ಳ ರಾಜ್ಯದ ಕಲಾವಿದರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ರಾಜ್ಯ ಎಲ್ಲಾ ಜಿಲ್ಲೆಗಳ ಕವಿಗಳು ತಮ್ಮ ಆಸಕ್ತಿಯನ್ನು ಜೂನ ೧೨ ರೊಳಗೆ ಹೆಸರು ನೊಂದಾಯಿಸಿಕೊಂಡು ರಾಜ್ಯಮಟ್ಟದ ಬಹುಭಾಷಾ ಕವಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವರು ವಿನಂತಿಸಿದ್ದಾರೆ. ಪಾಲ್ಗೊಂಡ ಕಲಾವಿದರಿಗೆ ಮತ್ತು ಕವಿಗಳಿಗೆ ವಿಶ್ವಜ್ಯೋತಿ ರಾಷ್ಟ್ರಮಟ್ಟದ ಪ್ರಶಸ್ತಿ ಮತ್ತು ಕರ್ನಾಟಕ ಜ್ಯೋತಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುವದು ಎಂದು ಗೊಂಡಬಾಳ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ : ೯೮೪೫೩೦೭೩೨೭, ೯೪೪೮೩೦೦೦೭೦.

Advertisement

0 comments:

Post a Comment

 
Top