PLEASE LOGIN TO KANNADANET.COM FOR REGULAR NEWS-UPDATES


  ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಮಕ್ಕಳ ರಕ್ಷಣಾ ಘಟಕ ಶನಿವಾರ ಕೊಪ್ಪಳ ನಗರದ ವಿವಿಧೆಡೆ ಜಂಟಿ ಕಾರ್ಯಾಚರಣೆ ನಡೆಸಿ, ನಾಲ್ವರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ರಕ್ಷಿಸಿದೆ.

  ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಎಫ್‌ಸಿಐ ಗೋದಾಮು ಹತ್ತಿರ ಚಿಂದಿ ಆಯುತ್ತಿದ್ದ ೧೦ ವರ್ಷ ವಯಸ್ಸಿನ ದುರ್ಗಮ್ಮ ತಂದೆ ಬಸವರಾಜ ಭಜಂತ್ರಿ, ೬ ವರ್ಷ ವಯಸ್ಸಿನ ನಾಗಮ್ಮ ತಂದೆ ಬಸವರಾಜ ಭಜಂತ್ರಿ, ೮ ವರ್ಷ ವಯಸ್ಸಿನ ಮಾರುತಿ ತಂದೆ ಬಸಪ್ಪ ಅಲ್ಲದೆ ನಗರದ ಗದಗ ರಸ್ತೆಯಲ್ಲಿರುವ ಆರ್‌ಡಿಸಿಸಿ ಬ್ಯಾಂಕ್ಯ ಮುಂಭಾಗದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ೯ ವರ್ಷ ವಯಸ್ಸಿನ ರವಿ ತಂದೆ ಸಿದ್ಲಿಂಗಪ್ಪ ಗೌಳಿಕೇರಿ ಸೇರಿದಂತೆ ನಾಲ್ವರು ಬಾಲಕರನ್ನು ಪತ್ತೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಎಂ. ಅವರ ಮುಂದೆ ಹಾಜರು ಪಡಿಸಲಾಯಿತು.  ನಂತರ ಬಾಲಕೀಯರ ಬಾಲಮಂದಿರ ಹಾಗೂ ಬಾಲಕರ ಬಾಲಮಂದಿರದಲ್ಲಿ ರಕ್ಷಣೆಗಾಗಿ ಸೇರಿಸಲಾಗಿದೆ.  ಪೋಷಕರ ಒಪ್ಪಿಗೆ ಪಡೆದು ಹಾಗೂ ಶಾಲಾ ದಾಖಲಾತಿ ಪರಿಶೀಲಿಸಿ ಜಿಲ್ಲಾ ಬಾಲಕಾರ್ಮಿಕ ವಿಶೇಷ ಶಾಲೆಗೆ ದಾಖಲಿಸುವ ಉದ್ದೇಶ ಹೊಂದಲಾಗಿದೆ.  ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್ರ, ಕ್ಷೇತ್ರಾಧಿಕಾರಿಗಳಾದ ವೀರಣ್ಣ ಕುಂಬಾರ, ಮಾರುತಿ ಎನ್. ಅಕೌಂಟೆಂಟ್ ಮಂಜುನಾಥ ವಣಗೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ, ಮಹಮದ್ ಹುಸೇನ್ ಪೀರಾ, ತಾಹೇರ್ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top