: ಅರ್ಜಿ ಆಹ್ವಾನ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಮೂಲ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಅಂಕಗಳ ಆಧಾರದ ಮೇಲೆ ಆಯ್ಕೆಯಾದ ಒಟ್ಟು ೩೨೦ ಪದವಿ ವಿದ್ಯಾರ್ಥಿಗಳಿಗೆ ಮತ್ತು ೧೨೦ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು (ಒಂದು ವಿಶ್ವವಿದ್ಯಾನಿಲಯಕ್ಕೆ ಗರಿಷ್ಟ ೨೦ ಪದವಿ ಮತ್ತು ೧೦ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು). ಆಯ್ಕೆಯಾದ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ. ೭೫೦೦, ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ. ೧೨೫೦೦ ಗಳ ಶಿಷ್ಯ ವೇತನ ನೀಡಲಾಗುವುದು. ಪದವಿ ಶಿಷ್ಯವೇತನಕ್ಕಾಗಿ ದ್ವಿತೀಯ ಪಿಯುಸಿ ಯಲ್ಲಿ ಕನಿಷ್ಟ ಶೇ. ೭೦ ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದು ಬಿಎಸ್‌ಸಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಅರ್ಹರು. ಅದೇ ರೀತಿ ಸ್ನಾತಕೋತ್ತರ ಪದವಿ ಶಿಷ್ಯವೇತನಕ್ಕೆ ಪದವಿಯಲ್ಲಿ ಕನಿಷ್ಟ ಶೇ. ೭೫ ಅಂಕ ಪಡೆದು ಸಸ್ಯ, ಪ್ರಾಣಿ, ರಸಾಯನ, ಭೌತ ಮತ್ತು ಗಣಿತ ವಿಜ್ಞಾನ ಸ್ನಾತಕೋತ್ತರ ಪದವಿಯ ಯಾವುದಾದರೊಂದು ವಿಭಾಗದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಹರು. ಪದವಿಯಲ್ಲಿ ಅಕಾಡೆಮಿಯಿಂದ ಶಿಷ್ಯವೇತನ ಪಡೆದು, ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಶಿಷ್ಯವೇತನ ಮುಂದುವರೆಸಲಾಗುವುದು.
ಪದವಿ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರ ಮೂಲಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಮ್ಮ ವಿಭಾಗದ ಮುಖ್ಯಸ್ಥರ ಮೂಲಕ ಶಿಷ್ಯವೇತನಕ್ಕೆ ಅರ್ಜಿಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನಭವನ, ನಂ. ೨೪/೨ (ಬಿಡಿಎ ಕಾಂಪ್ಲೆಕ್ಸ್ ಹತ್ತಿರ), ೨೧ನೇ ಮುಖ್ಯ ರಸ್ತೆ, ಬನಶಂಕರಿ ೨ನೇ ಹಂತ, ಬೆಂಗಳೂರು- ೭೦ ಕ್ಕೆ ಕಳುಹಿಸಿಕೊಡಬೇಕು. ಅರ್ಜಿನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ತಿತಿತಿ.ಞsಣಚಿಛಿಚಿಜemಥಿ.oಡಿg ವೆಬ್‌ಸೈಟ್ ವೀಕ್ಷಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಹೆಚ್. ಹೊನ್ನೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment