PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಕವಿಯಾದವನು ಸಿದ್ದ ಮಾದರಿಗಳನ್ನು ಮೀರಿ ಬರೆಯಬೇಕು. ವಿದ್ಯಮಾನಗಳನ್ನು ಗ್ರಹಿಸುವಂತಹ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಅಲ್ಲಾಗಿರಿರಾಜ್ ಕವಿಯಾಗಿ, ಪತ್ರಕರ್ತರಾಗಿ ಯಶಸ್ವಿಯಾಗಿದ್ದಾರೆ. 'ಹಸಿಬಾಣಂತಿ ಮತ್ತು ಗಾಂಧಿ ಬಜಾರ್' ಹಲವಾರು ಕಾರಣಗಳಿಂದ ಗಮನಾರ್ಹವಾಗಿದೆ. ಅವರ ಈ ಸಂಕಲನ ವರ್ತಮಾನದೊಂದಿಗೆ ಮುಖಾಮುಖಿಯಾಗುವ ಸಂಕಲನ ಎಂದು ಬರಹಗಾರ ಪ್ರಮೋದ್ ತುರ್ವಿಹಾಳ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೧೦೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ  ಅಲ್ಲಾಗಿರಿರಾಜ್‌ರ 'ಹಸಿಬಾಣಂತಿ ಮತ್ತು ಗಾಂಧಿ ಬಜಾರ್' ಕವನಸಂಕಲನ ಕುರಿತು ಮಾತನಾಡುತ್ತಿದ್ದರು.  
ಕವಿಸಮಯದಲ್ಲಿ ಸಂಕಲನದ ವಿಮರ್ಶೆ, ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಡಾ. ಮಹಾಂತೇಶ ಮಲ್ಲನಗೌಡರ ಮಾತನಾಡಿ -ವೈಚಾರಿಕ ಹಾಗೂ ಮಾನವೀಯ ದೃಷ್ಟಿಕೋನ ಹೊಂದಿರುವಂತಹ ಈ ಸಂಕಲನ ಮೌಲ್ಯಯುತವಾದ ಕೃತಿ ಎಂದು ಹೇಳಿದರೆ ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ನಮ್ಮ ಭಾಗದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿರುವ ಅಲ್ಲಾಗಿರಿರಾಜ್ ರಿಗೆ ಕಾವ್ಯ ಸಿದ್ದಿಸಿದೆ ಎಂದರು.
ವಿಜಯಲಕ್ಷ್ಮೀ ಮಠದವರು  ಮಹಿಳೆಯ ಅಸಹಾಯಕತೆಯನ್ನು ಬಹಾಳ ಚೆನ್ನಾಗಿ ಬಿಂಬಿಸಿರುವ ಕವನಸಂಕಲನ ಇದು. ಕವಿ ಸಂವೇದನಾಶೀಲನಾಗಿರುವುದರಿಂದ ಉತ್ತಮ ಕವನಗಳು ಮೂಡಿ ಬಂದಿವೆ ಎಂದರು. ಶಿವಪ್ರಸಾದ ಹಾದಿಮನಿ ಅಲ್ಲಾಗಿರಿರಾಜ್ ರ ಈ ಕವನಸಂಕಲನ ವಿಭಿನ್ನ ಶೈಲಿಯಿಂದ ಎಲ್ಲರ ಗಮನಸೆಳೆಯುತ್ತೆ . ಇದರಲ್ಲಿಯ ವೈಚಾರಿಕ ನೆಲೆ ಬಹಳ ಪ್ರಮುಖವಾದದು ಎಂದರೆ ಜಡೆಯಪ್ಪ ಎನ್- ಹೃದಂiiಕ್ಕೆ ನೇರವಾಗಿ ಮುಟ್ಟುವ,ತಟ್ಟುವ ಕವನಗಳು ಈ ಸಂಕಲನದಲ್ಲಿವೆ. ಅಸಹಾಯಕತೆ ಕಾವ್ಯದುದ್ದಕ್ಕೂ ಕಂಡುಬಂದಿದೆ. ಮೆದಳು ಮತ್ತು ಮನಸ್ಸಿಗೆ ತೂತು ಕೊರೆಯುವ ಶಕ್ತಿ ಕವನಗಳಿಗಿದೆ ಎಂದು  ಅಭಿಪ್ರಾಯಪಟ್ಟರು. 
ಕವಿ ಅಲ್ಲಾಗಿರಿರಾಜ್ ತಮ್ಮ ಸಂಕಲನ ಹಾಗೂ ಕಾವ್ಯದ ಕುರಿತು ಮಾತನಾಡಿದರು.ಮುಂದಿನ ದಿನಗಳಲ್ಲಿ ೧೫೦ ಗಜಲ್‌ಗಳ ಸಂಕಲನ ಹೊರತರುತ್ತಿರುವುದಾಗಿ ಹೇಳಿದರು. 
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ  ವಿಜಯಲಕ್ಷ್ಮೀ ಮಠದ- ವಚನಗಳು, ಶಾಂತಾದೇವಿ ಹಿರೇಮಠ- ಯೋಧ, ಪುಷ್ಪಲತಾ ಏಳುಬಾವಿ- ಗಜಲ್, ಜಡೆಯಪ್ಪ ಎನ್- ಶಾಯಿರಿಗಳು, ಬಸವರಾಜ್ ಚೌಡಕಿ- ಬರ, ಕುರುವತ್ತಿಗೌಡ್ರ- ತಮ್ಮನ ಕೋಪ, ಕಾರಣ, ಶಿವಪ್ರಸಾದ ಹಾದಿಮನಿ-ರಾಜಕಾರಣಿ, ಕನಕಪ್ಪ ತಳವಾರ- ರಘುವಂಶ ನೀಳ್ಗವನ, ಬಸವರಾಜ ಸಂಕನಗೌಡ್ರ- ಓ ತಾಯಿ ಸರಸ್ವತಿ, ಅಲ್ಲಾಗಿರಿರಾಜ್ -ಗಜಲ್, ವೀರಣ್ಣ ಹುರಕಡ್ಲಿ- ಹುಡುಕುತ್ತಲೇ ಇದ್ದಾರೆ ಕವನಗಳ ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಯಶವಂತ್, ಕೃಷ್ಣಪ್ಪ ಸಂಗಟಿ ಮತ್ತಿತರರು ಉಪಸ್ಥಿತರಿದ್ದರು.  ಸ್ವಾಗತ ಮತ್ತು ನಿರೂಪಣೆಯನ್ನು ಎನ್.ಜಡೆಯಪ್ಪ, ವಂದನಾರ್ಪಣೆಯನ್ನು ಶಿವಪ್ರಸಾದ ಹಾದಿಮನಿ ಮಾಡಿದರು.

Advertisement

0 comments:

Post a Comment

 
Top