ಕೃಷಿ ಇಲಾಖೆಯು ಪ್ರಸಕ್ತ ಮುಂಗಾರು ಹಂಗಾಮಿಗಾಗಿ ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜವನ್ನು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸುವ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಜಂಟಿಕೃಷಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ಅವರು ತಿಳಿಸಿದ್ದಾರೆ.
ಮೂಲ ದರದಲ್ಲಿ ಬಿತ್ತನೆ ಬೀಜಕ್ಕೆ ನಿಗದಿಪಡಿಸಲಾಗಿರುವ ದರದ ಪೈಕಿ, ಸರ್ಕಾರದಿಂದ ಪ್ರತಿ ಕೆ.ಜಿ.ಗೆ ನೀಡಲಾಗುವ ರಿಯಾಯಿತಿ ದರ ವಿವರ ಇಂತಿದೆ. ಜೋಳ ಬೆಳೆಯ ಸಾರ್ವಜನಿಕ ತಳಿಯ ಪ್ರಮಾಣಿತ ಬೀಜ ಹಾಗೂ ಖಾಸಗಿ ಸಂಕರ ತಳಿಯ ನಿಜಚೀಟಿ ಬಿತ್ತನೆ ಬೀಜಕ್ಕೆ ಪ್ರತಿ ಕೆ.ಜಿ. ಗೆ ರೂ. ೨೩.೫೦ ರ ರಿಯಾಯಿತಿ ದೊರೆಯಲಿದೆ. ಅದೇ ರೀತಿ ಮೆಕ್ಕೆಜೋಳ- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೨೧, ಖಾಸಗಿ ಸಂಕರ ತಳಿ- ರೂ. ೩೨. ೫೦, ಸಜ್ಜೆ- ಸಾರ್ವಜನಿಕ ತಳಿ ಪ್ರಮಾಣಿತ ಬೀಜಕ್ಕೆ ರಿಯಾಯಿತಿ- ರೂ. ೧೪, ಖಾಸಗಿ ಸಂಕರ ತಳಿ ನಿಜಚೀಟಿ- ರೂ. ೫೨. ೫೦. ಭತ್ತ- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೯.೫೦, ನಿಜಚೀಟಿ- ರೂ. ೯. ಹೈಬ್ರಿಡ್ ಭತ್ತ- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೭೦೨, ಖಾಸಗಿ ಸಂಕರ ತಳಿ ನಿಜಚೀಟಿ- ರೂ. ೬೫. ಅಲಸಂದಿ- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೨೫. ತೊಗರಿ- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೩೨. ೫೦, ನಿಜಚೀಟಿ- ರೂ. ೩೨. ಹೆಸರು- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೪೦, ನಿಜಚೀಟಿ- ರೂ. ೩೮. ೫೦. ಉದ್ದು- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೪೫. ಶೇಂಗಾ- ಸಾರ್ವಜನಿಕ ತಳಿ ಪ್ರಮಾಣಿತ- ರೂ. ೧೨. ಸೂರ್ಯಕಾಂತಿ- ಸಾರ್ವಜನಿಕ ಸಂಕರ ತಳಿ ಪ್ರಮಾಣಿತ ಹಾಗೂ ಖಾಸಗಿ ಸಂಕರ ತಳಿ ನಿಜಚೀಟಿ- ರೂ. ೮೦. ಸೋಯಾಬಿನ್- ಸಾರ್ವಜನಿಕ ತಳಿ ಪ್ರಮಾಣಿತ ಬೀಜಕ್ಕೆ ಪ್ರತಿ ಕೆ.ಜಿ.ಗೆ ತಗಲುವ ವೆಚ್ಚದ ಪೈಕಿ ರೂ. ೧೨ ರ ರಿಯಾಯಿತಿಯನ್ನು ಇಲಾಖೆ ನೀಡಲಿದೆ.
ಎಲ್ಲ ವರ್ಗದ ರೈತರಿಗೆ ಗರಿಷ್ಠ ೫ ಎಕರೆ ಮಿತಿಯೊಳಗೆ ಅಥವಾ ಅವರ ಹಿಡುವಳಿ ಇವುಗಳಲ್ಲಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುವುದು. ಕಂದಾಯ ಇಲಾಖೆಯಿಂದ ಪಡೆದ ದೃಢೀಕರಣ ಪಟ್ಟಿಯನ್ವಯ, ಆಯಾ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜವನ್ನು ರೈತರು ಪಡೆಯಬೇಕು. ಒಂದು ವೇಳೆ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಚ್ಚಿನ ದರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಿದಲ್ಲಿ ರೈತರು ಕೂಡಲೆ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ಜಂಟಿಕೃಷಿ ನಿರ್ದೇಶಕರ ಗಮನಕ್ಕೆ ತರುವಂತೆ ಜಂಟಿಕೃಷಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
0 comments:
Post a Comment