PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ :- ಕೇಂದ್ರ ಸರ್ಕಾರವು ಒಂದು ವರ್ಷದಲ್ಲಿ ಸುಮಾರು ೫-೬ ಬಾರಿ ಪೆಟ್ರೋಲ್ ಹಾಗೂ ಡಿಸೆಲ್ ದರ ಏರಿಸಿದ್ದು  ಕ.ರ.ವೇ.ಕೊಪ್ಪಳ ತಾಲೂಕ ಘಟಕ ಖಂಡಿಸುತ್ತದೆ. ಜನಸಾಮಾನ್ಯರ ಮೇಲೆ ಕೇಂಧ್ರ ಸರ್ಕಾರ ಗಾಯದ ಮೇಲೆ ಬರೆ ಹಾಕುತ್ತಿದೆ. ಇದಲ್ಲದೇ ಕೇಂದ್ರ ಸರ್ಕಾರ ಡಿಸೇಲ್ ಹಾಗೂ ಗ್ಯಾಸ್, ಸೀಮೆ ಎಣ್ಣೆ,  ದರವನ್ನು ಹೆಚ್ಚಿಸಲು ಚಿಂತನೆ ನೆಡೆಸಿದೆ, ರಾಜ್ಯದ ಜನತೆ ಬರಗಾಲ ಪರಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ಬೆಲೆ ಏರಿಕೆ  ಖಂಡನಾರ್ಹ ಈ ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತಕೊಂಡು ಪೆಟ್ರೋಲ್ ದರ ಹಾಗೂ ಅಗತ್ಯ ವಸ್ತುಗಳ ದರವನ್ನು ಕಡಿತರ ಗೊಳಿಸಬೇಕು ರಾಜ್ಯ ಸರಕಾರವೂ ಕೂಡಾ ಆಮದು ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿತಗೊಳಿಸಬೇಕು  ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲೆಯಾದ್ಯಾಂತ ಬೀದಿಗಿಳಿದು ತೀವ್ರ ಗತಿಯಲ್ಲಿ  ಹೋರಾಟ ಮಾಡಲಾಗುವುದು. 
ಇದನ್ನು ವಿರೋಧಿಸಿ ಸೈಕಲ್ ಜಾಥಾವನ್ನು ಮಹತ್ಮಾ ಗಾಂಧಿಜಿ ವೃತ್ತದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮುಖಾಂತರ ಹಾಗೂ ಅಶೋಕ ವೃತ್ತದ ಮುಖಾಂತರ ತಹಶಿಲ್ದಾರ ಇವರ ಮುಖಾಂತರ ಮಾನ್ಯ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನ ನವದೆಹಲಿ ಇವರಲ್ಲಿ ಮನವಿ ಸಲ್ಲಿಸಲಾಯಿತು. 
  ಹೋರಾಟದ ನೇತೃತ್ವವನ್ನು ಗವಿಸಿದ್ದಪ್ಪ ಕರ್ಕಿಹಳ್ಳಿ,  ಜಿಲ್ಲಾ ವಕ್ತಾರರು, ಶಿವನಗೌಡ.ವಿ.ಪಾಟೀಲ ಹಲಗೇರಿ ತಾಲೂಕ ಅಧ್ಯಕ್ಷರು, ಬಿ.ಗಿರಿಶಾನಂದ ಜ್ಞಾನಸುಂದರ ಅಧ್ಯಕ್ಷರು ತಾಲೂಕ ವಿಧ್ಯಾರ್ಥಿ ಘಟಕ,  ಹನುಮಂತ ಬೆಸ್ತರ ತಾಲೂಕ ಸಂಘಟನಾ ಕಾರ್ಯದರ್ಶಿ ನೇತೃತ್ವವನ್ನು ವಹಿಸಿದ್ದರು. ಖಾಸಿಂಸಾಬ, ಪರುಶರಾಮ ಮಡಿವಾಳರ, ಮಲ್ಲಪ್ಪ, ನೂರಪಾಷ್,  ಮಾರುತಿ ಹಡಪದ, ಭಿಮಪ್ಪ ಕಿತ್ತನೂರ,  ಮಲ್ಲು ಹೂಗಾರ, ವೀರನಗೌಡ.ಎಸ್.ಪಾಟೀಲ ಇನ್ನೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲಗ್ಗೊಂಡಿದ್ದರು. 

Advertisement

0 comments:

Post a Comment

 
Top