ಬೆಂಗಳೂರು, ಮೇ 17: ಬಿಜೆಪಿಯನ್ನು ಬಿಡಲು ನಿರ್ಧರಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದೀಗ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿಯೇ ಖಾಸಗಿ ಕಚೇರಿಯನ್ನು ಆರಂಭಿಸಲಿರುವುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ನಾಯಕತ್ವಕ್ಕಾಗಿ ಪಕ್ಷದೊಳಗೆ ಸಮರ ನಡೆಸಿ, ರಾಜೀನಾಮೆಗೆ ಮುಂದಾಗಿದ್ದ ಅವರು, ತಾತ್ಕಾಲಿಕವಾಗಿ ತನ್ನ ನಿರ್ಧಾರವನ್ನು ಮುಂದೂಡಿದ್ದು, ಜೊತೆಗೆ ನಿನ್ನೆ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ನಾಳೆ ಅವರು ತನ್ನ ಖಾಸಗಿ ಕಚೇರಿಯನ್ನು ಆರಂಭಿಸುತ್ತಿರುವುದು ಪಕ್ಷದೊಳಗೆಯೇ ಎಲ್ಲರನ್ನು ನಿಬ್ಬೆರಗುಗೊಳಿಸಿದೆ.
ರೇಸ್‌ಕೋರ್ಸ್‌ನಲ್ಲಿರುವ ತನ್ನ ನಿವಾಸವನ್ನು ಬಿಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ತನ್ನ ಭೇಟಿಗೆ ಆಗಮಿಸುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಪಕ್ಷದ ಕಚೇರಿಯಲ್ಲಿಯೇ ಖಾಸಗಿ ಕಚೇರಿಯನ್ನು ಆರಂಭಿಸಿದ್ದೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದವರು ಹೇಳಿದರು. ತನ್ನ ಮೇಲೆ ಸಿಬಿಐ ತನಿಖೆ ನಡೆಯುತ್ತಿದ್ದು, ಕಚೇರಿಗೆ ಬಂದರೆ ಪಕ್ಷದ ಮುಖಂಡರು, ನಾಯಕರಿಗೆ ಮುಜುಗರ ಉಂಟಾಗಬಹುದು. ಅದಕ್ಕಾಗಿ ತಾನು ಖಾಸಗಿ ಕಚೇರಿ ಆರಂಭಿಸಿದ್ದೇನೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. ಮುಂದಿನ ತಿಂಗಳ ಒಂದರಿಂದ ತನ್ನ ಸ್ವಂತ ಮನೆಗೆ ತೆರಳುತ್ತಿದ್ದೇನೆ. ತನ್ನ ನಿರ್ಧಾರದಿಂದ ತನ್ನನ್ನು ಭೇಟಿಯಾಗಲು ಬರುವವರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬುದು ತನ್ನ ಉದ್ದೇಶ. ನಾಳೆಯಿಂದ ಸಚಿವರು, ಶಾಸಕರು, ಸಂಸದರು, ಹಿತೈಷಿಗಳನ್ನು ಖಾಸಗಿ ಕಚೇರಿಯಲ್ಲಿಯೇ ಭೇಟಿ ಮಾಡಲು ನಿರ್ಧರಿಸಿದ್ದೇನೆಂದು ಅವರು ತಿಳಿಸಿದರು.
ನಾಳೆ ಕಚೇರಿ ಆರಂಭಿಸಲಾಗುತ್ತಿದ್ದು, ಎಲ್ಲರಿಗೂ ಮುಕ್ತವಾಗಿ ಆಹ್ವಾನ ನೀಡಿ ದ್ದೇನೆ. ಯಾರು ಕೂಡಾ ಬರಬಹುದು ಎಂದು ಯಡಿಯೂರಪ್ಪ ಹೇಳಿದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಶುಕ್ರವಾರ ಉದ್ಘಾಟನೆಗೊಳ್ಳಲಿರುವ ತನ್ನ ನೂತನ ಕಚೇರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಭೇಟಿ ನೀಡಿದರು.
0 comments:
Post a Comment