ಕೊಪ್ಪಳ,ಮೇ.೧೨: ಗ್ರಾಮೀಣ ಪ್ರದೇಶ ಯುವಕರು ಕ್ರೀಡೆಯ ಕಡೆ ಗಮನ ಹರಿಸಿ ಮಾನಸಿಕ ಹಾಗೂ ದೈಹಿಕವಾಗಿ ಸದೃಡವಾಗಿರಲು ಕ್ರೀಡೆ ಅವಶ್ಯವಾಗಿದೆ ಎಂದು ಪ್ರ.ದರ್ಜೆ ಗುತ್ತಿಗೆದಾರರ ಸುರೇಶ ಭೂಮರೆಡ್ಡಿ ಹೇಳಿದರು.
ಅವರು ಶನಿವಾರದಂದು ತಾಲೂಕಿನ ಕಾತರಕಿ ಗ್ರಾಮದಲ್ಲಿ ಶ್ರೀಮಾರುತೇಶ್ವರ ಕ್ರೀಕೆಟ್ ಕ್ಲಬ್ ಆಯೋಜಿಸಿದ್ದ ತಾಲೂಕಾ ಮಟ್ಟದ ಕ್ರೀಕೆಟ್ ಟೂರ್ನಾಮೆಂಟ್ ಆಟಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾದ ಕ್ರೀಕೆಟ್ ಪಂದ್ಯಾಟವು ಗ್ರಾಮೀಣ ಮಟ್ಟದಲ್ಲಿಯೂ ಸಹ ಬೆಳೆದಿದ್ದು, ಹೆಚ್ಚಿನ ಯುವಕರು ಈ ಆಟಕ್ಕೆ ಮಾರು ಹೋಗಿದ್ದು, ಆದರೆ ಆಟವನ್ನು ಆಟವಾಗಿ ಆಡಬೇಕೆ, ನಗರಗಳಲ್ಲಿ ಕ್ರೀಕೆಟ್ ಪಂದ್ಯ ಜೂಜಾಟ ಆಡುವ ಮೂಲಕ ಎಷ್ಟೋ ಯುವಕರು ಹಾಳಾಗುತ್ತಿದ್ದು, ಇದು ಗ್ರಾಮೀಣ ಮಟ್ಟಕ್ಕೆ ಬರಬಾರದೆಂದು ಹೇಳಿದ ಅವರು ನಮ್ಮ ಭಾರತೀಯ ಕ್ರೀಡೆ ಹಾಕಿಯನ್ನು ಯುವಕರು ಹೆಚ್ಚಿನ ಗಮನ ಹರಿಸಿ ಅದರ ಬಗ್ಗೆ ಒಲವು ನೀಡಬೇಕು, ಅದರಲೂ ಗ್ರಾಮೀಣ ಮಟ್ಟದ ಕ್ರೀಡೆಗಳಾದ ಕಬ್ಬಡಿ, ಖೋ ಖೋ, ಕುಸ್ತಿ ಇನ್ನಿತರ ಕ್ರೀಡೆ ಉಳಿಸಿ ಬೆಳೆಸುವ ಕರ್ತವ್ಯ ನಿಮ್ಮದಾಗಿದ್ದು, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡವಾಗಲು ಕ್ರೀಡೆ ಅವಶ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಮಾಜಿ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ಕ್ರೀಕಟ್ ಆಡುವ ಮೂಲಕ ಸೈಯದ್ ಫೌಂಡೆಷನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯದ್ ರವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ. ಸದಸ್ಯ ಮಾಹಾಂತೇಶ ಪೋ ಪಾಟೀಲ್, ತಾ.ಪಂ.ಸದಸ್ಯ ಮುದೇಗೌಡ ಪೋ ಪಾಟೀಲ್, ಗ್ರಾ.ಪಂ.ಸದಸ್ಯರಾದ ಯಲನಗೌಡ ಮಾ ಪಾಟೀಲ್, ಮೈಲಪ್ಪ ದೇವರಮನಿ, ಗ್ರಾ.ಪಂ. ಉಪಾಧ್ಯಕ್ಷ ಸಿದ್ದಪ್ಪ ಹುರಿಜೋಳ, ಬಸವರಾಜ ಅಂಗಡಿ, ರಾಜು ಹುರಕಡ್ಲಿ, ದೇವಪ್ಪ ಬೈರಣ್ಣನವರ, ಮಲ್ಲಣ್ಣ ಗುಗ್ರಿ, ಮಂಜುನಾಥ ಮೇಟಿ, ಅಂದಪ್ಪ ಬೆಳವಿನಾಳ, ನೀಲಪ್ಪ ಶಾವಿ, ವೆಂಕನಗೌಡ ಪೋ ಪಾಟೀಲ್, ಹೇಮಂತಗೌಡ, ವಿಶ್ವನಾಥ ನಾಗನಗೌಡ, ಸಂಜೀವರಡ್ಡಿ ಮೇಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ದಯಾನಂದ ಪೋ ಪಾಟೀಲ್ ನೆರವೇರಿಸಿದರು. ಜಗದಯ್ಯ ಸಾಲಿಮಠ ನಿರೂಪಿಸಿ ವಂದಿಸಿದರು.
0 comments:
Post a Comment