ಕೊಪ್ಪಳ: ೦೬.೦೫.೨೦೧೨ರಂದು ಜರುಗಿದ ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಅಂಗವಿಕಲ ಅಂಧ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲು ಅವಕಾಶ ನೀಡದ ಹುಬ್ಬಳ್ಳಿ ರೈಲ್ವೆ ವಿಭಾಗದ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತು ಪಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲರ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕ ಆಗ್ರಹಿಸಿದೆ.
ಯಾವುದೇ ಪರೀಕ್ಷಯಿರಬಹುದು ಅಂಗವಿಕಲ ಅಂಧ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲು ಒಬ್ಬರನ್ನು ಸಹಾಯಕರನ್ನಾಗಿ ತೆಗೆದುಕೊಳ್ಳಲು ಅದೇಶವಿದೆ.ಆದರೆ ರೈಲ್ವೆ ಇಲಾಖೆಯ ಅಧಿಕಾರಿಗಳು ಅಂಧರು ಯಾವುದೇ ಸಹಾಯಕರನ್ನು ಪಡೆಯದೆ ಪರೀಕ್ಷೆಯನ್ನು ಬರೆಯಲು ತಿಳಿಸಿರುವುದು ಅಮಾನವಿಯ ಸಂಗತಿ. ಜಗತ್ತಿನ ಹಗಲು-ರಾತ್ರಿ ಪರಿಚಯವಿಲ್ಲದವರೂ ಅದು ಹೇಗೆ ಯಾರ ಸಹಾಯವಿಲ್ಲದೆ ಪರೀಕ್ಷೆ ಬರೆಯಲು ಸಾದ್ಯ? ಪರೀಕ್ಷೆಯನ್ನು ಬರೆಯಲು ಅನುಮತಿ ನೀಡದ ಹುಬ್ಬಳ್ಳಿ ರೈಲ್ವೇ ವಿಭಾಗದ ಅಧಿಕಾರಿಯನ್ನ ಸಂಬಂಧ ಪಟ್ಟ ರೈಲ್ವೇ ಸಚಿವರು ಅಮಾನತ್ತುಗೂಳ್ಳಿಸಿ, ಇಂತಹ ಪ್ರಕರಣಗಳು ಮರುಕಳಿಸದಂದೆ ಎಚ್ಚರವಹಿಸಬೇಕೇಂದು ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ, ಕೊಪ್ಪಳ ತಾಲೂಕ ಗೌರವ ಅದ್ಯಕ್ಷರಾದ ಭರಮಪ್ಪ ಕಟ್ಟಿಮನಿ, ಖಂಜಾಚಿ ಅಂದಪ್ಪ ಭೊಳರಡ್ಡಿ, ಯಲಬುರ್ಗಾ ಕಾರ್ಯದರ್ಶಿ ಮಹೇಶ ಆರೇರ, ಕುಷ್ಟಗಿ ತಾಲೂಕ ಅದ್ಯಕ್ಷರಾದ ಸಿದ್ರಾಮಪ್ಪ ಅಮರಾವತಿ,ಕಾರ್ಯದರ್ಶಿ ಅಶೋಕ ಕಟ್ಟಿಮನಿ ಆಗ್ರಹಿಸಿದ್ದಾರೆ.
0 comments:
Post a Comment