ಕೊಪ್ಪಳ, ಎ.4: ಬಿಜೆಪಿಯಲ್ಲಿ ತನ್ನ ಸ್ಥಾನಮಾನವೇನೆಂಬುದರ ಅರಿವು ತನಗಿದೆ ಎಂದು ಮಾರ್ಮಿಕವಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿಯ ಎಲ್ಲ ಶಾಸಕರಂತೆ ತಾನು ಕೂಡ ಓರ್ವ ಶಾಸಕ ಎಂದು ಹೇಳುವ ಮೂಲಕ ಮತ್ತಷ್ಟು ರಾಜಕೀಯ ಕುತೂಹಲ ಮೂಡಿಸಿದ್ದಾರೆ. ಬರ ಪೀಡಿತ ಪ್ರದೇಶಗಳ ಅಧ್ಯಯನ ಕ್ಕಾಗಿ ಕೊಪ್ಪಳಕ್ಕೆ
ರಾಜ್ಯ ಪ್ರವಾಸ ನಿರತರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಕೊಪ್ಪಳದ ಸಮೀಪದ ವಡಗನಹಾಳ್‌ನಲ್ಲಿ ಗೋಶಾಲೆಯೊಂದಕ್ಕೆ ಭೇಟಿ ನೀಡಿದರು.
ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರನ ಹುದ್ದೆಯಿಂದ ಆರ್.ಪಿ. ಜಗದೀಶ್‌ರನ್ನು ಕೈಬಿಟ್ಟರುವುದಕ್ಕೆ ರಾಜಕೀಯ ಬಣ್ಣದ ಲೇಪ ಬೇಡ. ಮಾಧ್ಯಮ ಸಲಹೆಗಾರರನ್ನು ಕೈ ಬಿಡುವ ಸಂಪೂರ್ಣ ಅಧಿಕಾರ ಸಿಎಂ ಸದಾನಂದ ಗೌಡರಿಗೆ ಇದೆ ಎಂದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗು ವುದು. ಅಲ್ಲದೆ ಬರ ಪರಿಸ್ಥಿತಿ ನಿವಾರಣೆಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಗು ವುದು ಎಂದರು. ಬರ ಪೀಡಿತ ಪ್ರದೇಶಗಳ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಸರಕಾರ ಐದು ಕೋಟಿ ರೂ. ಬಿಡುಗಡೆ ಮಾಡಿ ಅಗತ್ಯ ಕುಡಿಯುವ ನೀರು, ಜಾನುವರುಗಳಿಗೆ ಮೇವು ಹಾಗೂ ಗುಳೆ ತಪ್ಪಿಸಲು ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಆನಂತರ ಇಲ್ಲಿನ ವದಗನಾಳ್ ಗ್ರಾಮಕ್ಕೆ ಭೇಟಿ ಮಾತನಾಡಿದ ಅವರು, ರಾಜ್ಯ ಸರಕಾರ ಬರ ಪೀಡಿತ ಪ್ರದೇಶಗಳಲ್ಲಿ ಉತ್ತಮ ಪರಿಹಾರ ಕಾರ್ಯ ಕೈಗೊಂಡಿದ್ದು, ಇದು ತನಗೆ ತೃಪ್ತಿ ತಂದಿದೆ. ಬರ ಪರಿಸ್ಥಿತಿಯ ಸಂದರ್ಭದಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು ಎಂದು ಬುದ್ಧಿವಾದ ಹೇಳಿದರು.
ಪ್ರವಾಸದ ಸಂದರ್ಭದಲ್ಲಿ ಅಭಿಮಾನಿಗಳಿಂದ ಹೂವಿನ ಹಾರವನ್ನು ಸ್ವೀಕರಿಸಲು ನಿರಾಕರಿಸಿದ ಯಡಿಯೂರಪ್ಪ, ರಾಜ್ಯದ ಜನತೆ ಬರದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಹಾರ-ತುರಾಯಿ, ಸನ್ಮಾನ ಸರಿಯಲ್ಲ. ಬದಲಿಗೆ ಜನತೆಯ ನೋವು ಆಲಿಸಲು ಆದ್ಯತೆ ಎಂದರು
0 comments:
Post a Comment