ಕೊಪ್ಪಳ,ಏ.೦೪ : ಯುವಕರು ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಅವರ ಆದರ್ಶಗಳನ್ನು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದರೆ ಜೀವನ ಸಾರ್ಥಕ ಎಂದು ಸೈಯದ್ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯದ್ ಹೇಳಿದರು.
ಅವರು ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದ ಉಮಾಕಾಂತ ಮಾದಿನೂರರವರ ಮನೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ವರ್ಷಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭೂಮಿಯ ಮೇಲೆ ಮನುಜ ಮತ ಒಂದೇ ಎಲ್ಲರೂ ಒಟ್ಟಾಗಿ ಒಳ್ಳೆಯ ಭಾವನೆಗಳಿಂದ ಬಾಳಬೇಕು, ಹಿಂದಿನ ಯುವಕರು ದುಷ್ಟಚಟಗಳಿಗೆ ಬಲಿಯಾಗದೆ ವಿವೇಕಾನಂದ, ಲಾಲ್ ಬಹದ್ದೂರುಶಾಸ್ತ್ರಿ, ಅಬ್ದುಲ್ ಕಲಾಂ ಇನ್ನೂ ಮುಂತಾದ ದಿಗ್ಗಜರ ಆದರ್ಶವನ್ನು ಪಾಲನೆ ಮಾಡುವ ಮೂಲಕ ಗ್ರಾಮೀಣ ಪ್ರದೇಶ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು, ಇಂತಹ ಕಾರ್ಯವನ್ನು ಮಾಡುವಾಗ ದೃಢ ಸಂಕಲ್ಪ ಮತ್ತು ಸಚ್ಚಾರಿತ್ರತೆಯಿಂದ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳೊಣ್ಣ ಎಂದು ತಮ್ಮ ಮನದಾಳದ ಭಾವನೆಗಳನ್ನು ಯುವಕರಲ್ಲಿ ಹಂಚಿಕೊಂಡರು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ರಾಮಕೃಷ್ಣ ವಿವೆಕಾನಂದ ಆಶ್ರಮ ಚೈತನ್ಯಾನಂದ ಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಶರಣಪ್ಪ ಸಜ್ಜನ್, ಯಂಕಪ್ಪ ಕ್ಯಾಶಪ್ಪನವರು ಹಾಗೂ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಉಮಾಕಾಂತ ಮಾದಿನೂರು ಅಪಾರ ಯುವಕರು ಪಾಲ್ಗೊಂಡಿದ್ದರು.
0 comments:
Post a Comment