PLEASE LOGIN TO KANNADANET.COM FOR REGULAR NEWS-UPDATES


 ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಎಸಗಿದ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ, ಹಿರೇಅರಳಿಹಳ್ಳಿ ಹಾಗೂ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿಗಳನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಅಮಾನತುಗೊಳಿಸಿದ್ದಾರೆ.

ಪ್ರಕರಣ-೧ : ಯರೇಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೧೧-೧೨ನೇ ಸಾಲಿನ ಉದ್ಯೋಗಖಾತ್ರಿ ಯೋಜನೆಯಲ್ಲಿ ನಿಯಮಬಾಹಿರವಾಗಿ ಸುಮಾರು ೮೦ ಕಾಮಗಾರಿಗಳ ಒಟ್ಟು ರೂ. ೧. ೪೩ ಕೋಟಿ ರೂ.ಗಳ ಖರ್ಚು, ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಬಿ.ಆರ್. ತಮ್ಮಣ್ಣ ಅವರನ್ನು ಅಮಾನತುಗೊಳಿಸಲಾಗಿದೆ.  ೨೦೧೧-೧೨ನೇ ಸಾಲಿನ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಯಲಬುರ್ಗಾ ತಾಲೂಕು ಪಂಚಾಯತಿಯ ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕರಿಗೆ ಸೂಚಿಸಲಾಗಿತ್ತು.  ಇವರು ಸಲ್ಲಿಸಿರುವ ವರದಿಯಂತೆ, ಸುಮಾರು ೮೦ ಕಾಮಗಾರಿಗಳ ೧. ೪೩ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ಈ ಕಾಮಗಾರಿಗಳ ಅಂದಾಜು ಪತ್ರಿಕೆ, ಆಡಳಿತಾತ್ಮಕ ಮಂಜೂರಾತಿ ಮತ್ತು ತಾಂತ್ರಿಕ ಮಂಜೂರಾತಿ ಬಗ್ಗೆ ಯಾವುದೇ ಕಡತ ಲಭ್ಯವಿರುವುದಿಲ್ಲ ಅಲ್ಲದೆ ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರಿಜಿಸ್ಟರ್‌ಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ, ಒಂದೇ ಕುಟುಂಬಕ್ಕೆ ೪ ರಿಂದ ೫ ಉದ್ಯೋಗ ಚೀಟಿ ವಿತರಣೆ, ಉದ್ಯೋಗ ಚೀಟಿ ನವೀಕರಿಸದಿರುವುದು, ಎಂ.ಐ.ಎಸ್. ನಲ್ಲಿ ಸಾಮಗ್ರಿ ಬಿಲ್ಲುಗಳನ್ನು ಅಳವಡಿಸದೆ ಸಂದಾಯ ಮಾಡಲಾಗಿದೆ.  ಪ್ರಮುಖವಾಗಿ ನಿಯಮ ಉಲ್ಲಂಘಿಸಿ ಉದ್ಯೋಗಖಾತ್ರಿ ಯೋಜನೆಯ ೮೦ ಕಾಮಗಾರಿಗಳ ೧. ೪೩ ಕೋಟಿ ರೂ.ಗಳ ಖರ್ಚು, ವೆಚ್ಚದಲ್ಲಿ ಲೋಪವೆಸಗಿದ್ದಾರೆ ಎಂದು ಲೆಕ್ಕ ಪರಿಶೋಧಕರು ನೀಡಿದ ವರದಿಯನ್ನು ಯಲಬುರ್ಗಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿಗೆ ಸಲ್ಲಿಸಿದ್ದರು, ಇವರ ವರದಿಯನ್ವಯ ಉದ್ಯೋಗಖಾತ್ರಿ ಯೋಜನೆಯಲ್ಲಿ ಹಣ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಗ್ರಾ.ಪಂ. ಕಾರ್ಯದರ್ಶಿ ಬಿ.ಆರ್. ತಮ್ಮಣ್ಣ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪ್ರಕರಣ-೨ : ಹಿರೇಅರಳಿಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿರುವ ಸುಶೀಲಬಾಯಿ ಹೊನ್ನಳ್ಳಿ ಅವರನ್ನು ಉದ್ಯೋಗಖಾತ್ರಿ ಯೋಜನೆಯಲ್ಲಿ ನಿಯಮ ಉಲ್ಲಂಘನೆ ಹಾಗೂ ಕರ್ತವ್ಯ ಲೋಪ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.  ಸುಶೀಲಾಬಾಯಿ ಅವರು ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಎಂ.ಐ.ಎಸ್. ಅನ್ನು ದುರುಪಯೋಗಪಡಿಸಿಕೊಂಡು, ಅನಧಿಕೃತವಾಗಿ ಡಾಟಾ ಎಂಟ್ರಿ ಮಾಡಿರುತ್ತಾರೆ.  ಇದಕ್ಕೆ ಸಂಬಂಧಪಟ್ಟಂತೆ ವಿವರಣೆ ನೀಡುವಂತೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದರೂ, ಯಾವುದೇ ಉತ್ತರ ನೀಡಿರುವುದಿಲ್ಲ.  ಉದ್ಯೋಗಖಾತ್ರಿ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ ೧೦೦ ದಿವಸಗಳ ಉದ್ಯೋಗ ಒದಗಿಸಲು ಅವಕಾಶವಿದ್ದು, ಇವರು ಈ ಗ್ರಾ.ಪಂ. ವ್ಯಾಪ್ತಿಯ ಸುಮಾರು ೮೦ ಕುಟುಂಬಗಳಿಗೆ ನೂರು ದಿನಕ್ಕಿಂತ ಹೆಚ್ಚಿನ ಉದ್ಯೋಗವನ್ನು ನಿಯಮ ಉಲ್ಲಂಘಿಸಿ ನೀಡಿದ್ದಾರೆ.  ಯಾವುದೇ ಸಭೆಗಳಿಗೆ ಹಾಜರಾಗದೆ, ಕರ್ತವ್ಯಲೋಪವೆಸಗಿರುವುದು ಕಂಡುಬಂದಿರುವುದರಿಂದ, ಕಾರ್ಯದರ್ಶಿ ಸುಶೀಲಬಾಯಿ ಹೊನ್ನಳ್ಳಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪ್ರಕರಣ-೩ : ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೧೧-೧೨ನೇ ಸಾಲಿನ ೧೩ನೇ ಹಣಕಾಸು ಯೋಜನೆಯ ಅನುದಾನ ೪. ೫೨ ಲಕ್ಷ ರೂ.ಗಳನ್ನು ನಿಯಮಬಾಹಿರವಾಗಿ ಖರ್ಚು ಮಾಡಿದ್ದಲ್ಲದೆ, ಖರ್ಚು-ವೆಚ್ಚಗಳ ಯಾವುದೇ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದ ಆರೋಪದ ಮೇಲೆ ಕಾರ್ಯದರ್ಶಿ ಶರಣಬಸಯ್ಯಸ್ವಾಮಿ ಮಳೀಮಠ ಅವರನ್ನು ಅಮಾನತುಗೊಳಿಸಲಾಗಿದೆ.  ಶರಣಬಸಯ್ಯಸ್ವಾಮಿ ಅವರು ಸರ್ಕಾರದಿಂದ ಗ್ರಾಮ ಪಂಚಾಯತಿಗೆ ನೇರವಾಗಿ ಬಂದ ೨೦೧೧-೧೨ನೇ ಸಾಲಿನ ೧೩ನೇ ಹಣಕಾಸು ಯೋಜನೆಯ ೪. ೫೨ ಲಕ್ಷ ರೂ.ಗಳ ಅನುದಾನಕ್ಕೆ ಸೂಕ್ತ ಕ್ರಿಯಾ ಯೋಜನೆಯನ್ನು ತಯಾರಿಸಿ, ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೆ, ತಮಗಿಷ್ಟ ಬಂದ ರೀತಿ ಖರ್ಚು ಮಾಡಲಾಗಿದೆ.  ಅಲ್ಲದೆ ಖರ್ಚು-ವೆಚ್ಚದ ಬಗ್ಗೆ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ,  ನಗದು ಪುಸ್ತಕ ನಿರ್ವಹಣೆ ಮಾಡಿರುವುದಿಲ್ಲ, ೨೦೧೧-೧೨ನೇ ಸಾಲಿಗೆ ಬಿಡುಗಡೆಯಾದ ಅನುದಾನದ ಪೂರ್ಣ ಖರ್ಚಿನ ನಂತರವೂ, ಸುಮಾರು ೫೧೮೦೦ ರೂ.ಗಳ ನಾಲ್ಕು ಚೆಕ್ ನೀಡಿ, ಕರ್ತವ್ಯ ಲೋಪವೆಸಗಿದ್ದಾರೆ.  ಈ ಹಿನ್ನೆಲೆಯಲ್ಲಿ ಇವರ ಕರ್ತವ್ಯಲೋಪ ಆರೋಪದ ಮೇಲೆ ಗ್ರಾ.ಪಂ. ಕಾರ್ಯದರ್ಶಿ ಶರಣಬಸಯ್ಯಸ್ವಾಮಿ ಮಳೀಮಠ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊ

Advertisement

0 comments:

Post a Comment

 
Top