PLEASE LOGIN TO KANNADANET.COM FOR REGULAR NEWS-UPDATES


 - ರಾಬಿನ್ ಜೆಫ್ರಿ ಕೃಪೆ: ದಿ ಹಿಂದೂ
ಭಾರತೀಯ ಮಾಧ್ಯಮ ಸಂಸ್ಥೆಗಳ ಸುದ್ದಿಮನೆಗಳಲ್ಲಿ 1992ರಲ್ಲಿ ಯಾವುದೇ ದಲಿತರು ಇರಲಿಲ್ಲ; ಇಂದು ಕೂಡ ಹೆಚ್ಚು ಕಡಿಮೆ ಯಾರೂ ಇಲ್ಲ.ಭಾರತೀಯರ ಸುಮಾರು 25ಶೇ. ದಷ್ಟಿರುವ ಜನರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು) ಬದುಕಿನ ಕತೆಗಳು ಹೊರ ಜಗತ್ತಿಗೆ ತಿಳಿಯು ವಂತೆಯೇ ಇಲ್ಲ. ಅವುಗಳ ಬಗ್ಗೆ ಬರೆಯಲ್ಪಟ್ಟಿರುವುದೂ ಕಡಿಮೆ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದೂ ಕಡಿಮೆ. ಅತ್ಯಂತ ನಿಕೃಷ್ಟ ಪರಿಸ್ಥಿತಿ ಮತ್ತು ಹಿಂಸೆಗೆ ಸಂಬಂಧಿಸಿದ ವರದಿಗಳನ್ನು ಹೊರತು ಪಡಿಸಿ.ಅಮೆರಿಕನ್ ಮಾಧ್ಯಮದಲ್ಲಿ ಆಫ್ರಿಕನ್-ಅಮೆರಿಕನ್ನರನ್ನು ಹಾಗೂ ಲ್ಯಾಟಿನ್ ಅಮೆರಿಕದ ವಿಷಯಗಳನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ವಿಶ್ಲೇಷಕರೊಬ್ಬರು ಹೀಗೆ ಬರೆದಿದ್ದಾರೆ: ಇಂಥ ವರು ಹೆಚ್ಚು ಪ್ರಯಾಣಿಸುವುದಿಲ್ಲ, ಹೆಚ್ಚು ತಿನ್ನುವುದಿಲ್ಲ ಹಾಗೂ ಮದುವೆಯಾಗುವುದಿಲ್ಲ. ನೀವು ಅವರ ಬಗ್ಗೆ ತಿಳಿದಿರುವುದೆಲ್ಲ ಮಾಧ್ಯಮ ಗಳಿಂದ ತಿಳಿದುಕೊಂಡದ್ದು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರು ಪತ್ರಿಕೆಗಳು ಮತ್ತು ಟೆಲಿವಿಶನ್‌ಗಳಿಂದ ಬಹುತೇಕ ಸಂಪೂರ್ಣವಾಗಿ ಮರೆಯಾಗಿರುವುದು ಅನಾಹುತವೇ? ಖಂಡಿತವಾಗಿಯೂ ಹೌದು.
ಕನಿಷ್ಠ ಮೂರು ಕಾರಣಗಳಿಗಾಗಿ ಅದು ಅನಾಹುತ.ಮೊದಲನೆಯದಾಗಿ, ಇಲ್ಲಿ ಸಂವಿಧಾನದ ಆಶಯ ಈಡೇರುವುದಿಲ್ಲ. ಸಂವಿಧಾನ ‘‘ಸಮಾನತೆ’’ ಮತ್ತು ‘‘ಸಹೋದರತೆ’’ಯ ಭರವಸೆ ನೀಡುತ್ತದೆ. ಪ್ರಜಾಪ್ರಭುತ್ವದ ನಾಲ್ಕನೆ ಸ್ತಂಭದಿಂದ ಜನಸಂಖ್ಯೆಯ ಕಾಲು ಭಾಗ ನಾಪತ್ತೆಯಾದರೆ ‘‘ಸಮಾನತೆ’’ಯಲ್ಲಿ ಏನೋ ಕೊರತೆಯಿದೆ. ಹಾಗೂ ಸಹೋದರತ್ವದ ವಿಷ ಯದಲ್ಲಿ, ಇಲ್ಲಿ ಇಲ್ಲದ ಜನರೊಡನೆ ಸಹೋದರತ್ವ ಹೇಗೆ ಮಾಡುವುದು? ಎರಡನೆಯದಾಗಿ, ಸುದ್ದಿಮನೆಗಳಲ್ಲಿ ದಲಿತರ ಉಪಸ್ಥಿತಿ ಹಾಗೂ ಆ ಮೂಲಕ ವಿವಿಧ ವಿಷಯಗಳಿಗೆ ದೊರಕುವ ಪ್ರಚಾರ ನಿರ್ಲಕ್ಷ ಹಾಗೂ ತಾರತಮ್ಯಕ್ಕೊಳಗಾದವರ ಅತೃಪ್ತಿ ಯನ್ನು ಕಡಿಮೆಗೊಳಿಸುತ್ತದೆ.
ಸಾಧನೆಗಳನ್ನು ಗುರುತಿಸುವುದು ತಾರತಮ್ಯವನ್ನು ಹೋಗಲಾಡಿಸುತ್ತದೆ. ಅರ್ಥಪೂರ್ಣ ಬದಲಾವಣೆಗಳು ನಡೆಯದಿದ್ದರೆ ಆಕ್ರೋಶ ವಿನಾಶಕಾರಿಯಾಗಿ ಹೆಪ್ಪುಗಟ್ಟುತ್ತದೆ ಹಾಗೂ ಕೊನೆಗೆ ಈಗಾಗಲೇ ಪೂರ್ವ ಭಾರತದಲ್ಲಿ ಮಾವೋವಾದಿಗಳ ಪ್ರಭಾ ವಕ್ಕೆ ಒಳಗಾಗಿರುವ ಪ್ರದೇಶಗಳಂತೆ ವಿನಾಶಕಾರಿ ರೀತಿಯಲ್ಲಿ ಆಕ್ರೋಶ ಸ್ಫೋಟಗೊಳ್ಳುತ್ತದೆ. ತುಳಿತಕ್ಕೊಳಗಾದವರ ಸುಖ-ದುಃಖಗಳ ಕುರಿತ ನಿರಂತರ ವರದಿಗಳು ಅವರ ಸಮಸ್ಯೆಗಳ ನಿವಾರಣೆಗೆ ಹಾದಿ ಮಾಡಿಕೊಡುತ್ತವೆ ಹಾಗೂ ತಡೆಗಳನ್ನು ಸೇತುವೆಗಳನ್ನಾಗಿ ಪರಿವರ್ತಿಸುತ್ತವೆ.
ಮೂರನೆಯದಾಗಿ, ನೈಜ ಮಾಧ್ಯಮ ವ್ಯಕ್ತಿಗಳು ಜನಸಂಖ್ಯೆಯ ಕಾಲು ಭಾಗವನ್ನು ಯಾಂತ್ರಿಕ ವಾಗಿ ನಿರ್ಲಕ್ಷಿಸುವ ಪತ್ರಿಕೆ, ಮ್ಯಾಗಝಿನ್ ಅಥವಾ ಸುದ್ದಿ ಸಂಸ್ಥೆಯ ಸ್ಥಾಪನೆಯಿಂದ ಸಂತುಷ್ಟ ರಾಗುವುದಿಲ್ಲ. ಕೂದಲು ನರೆತ ಪತ್ರಿಕಾ ಸಂಪಾ ದಕರು ದಿನದ ಕೊನೆಯಲ್ಲಿ ಸ್ವ-ಸಂತುಷ್ಟ ವರದಿಗಾರರಿಗೆ ಪ್ರಶ್ನೆಯೊಂದನ್ನು ಕೇಳುತ್ತಾರೆ- ‘‘ಅಲ್ಲಿ ಇಂದು ನಿಜವಾಗಿಯೂ ಏನಾಯಿತು?’’ ಇಂಥ ಮನೋಭಾವ ಪ್ರತಿ ಸುದ್ದಿ ಮನೆಗಳಲ್ಲಿ ಪ್ರತಿಧ್ವನಿಸಬೇಕು.ಮಾಧ್ಯಮಗಳಲ್ಲಿ ದಲಿತರ ಗೈರು ಹಾಜರಾತಿ 1996ರ ಬಳಿಕ ಅಲ್ಲಲ್ಲಿ ಪ್ರಾಮುಖ್ಯತೆಗೆ ಬಂತು. ಅದು ಯಾವಾಗ ಎಂದರೆ ಸ್ವತಃ ಆಫ್ರಿಕನ್ ಅಮೆ ರಿಕನ್ ಆಗಿರುವ ‘ವಾಶಿಂಗ್ಟನ್ ಪೋಸ್ಟ್’ನ ವರದಿಗಾರ ಕೆನೆತ್ ಜೆ. ಕೂಪರ್ ಹೊಸದಿಲ್ಲಿ ಯಲ್ಲಿ ದಲಿತ ಪತ್ರಕರ್ತನೊಬ್ಬನನ್ನು ಪತ್ತೆಹಚ್ಚಲು ಯತ್ನಿಸಿದಾಗ. ಈ ಯತ್ನದಲ್ಲಿ ತನಗಾಗಿರುವರ ಸೋಲಿನ ಬಗ್ಗೆ ಕೂಪರ್ ಬರೆದರು ಹಾಗೂ ಕೂಪರ್‌ರ ಪ್ರಶ್ನೆಗಳನ್ನು ಬಿ.ಎನ್. ಉನಿಯಾಲ್ ‘ಪಯನಿಯರ್’ನಲ್ಲಿ ಪ್ರಕಟಿಸಿದರು.
ಉನಿಯಾಲ್ ಬರೆಯುತ್ತಾರೆ: ‘‘ಒಮ್ಮೆಲೆ ನನಗೆ ಗೊತ್ತಾಯಿತು. ಏನೆಂದರೆ, ನಾನು ಪತ್ರಕರ್ತನಾಗಿ ಕೆಲಸ ಮಾಡಿದ 30 ವರ್ಷಗಳ ಅವಧಿಯಲ್ಲಿ ಓರ್ವ ದಲಿತ ಪತ್ರಕರ್ತನನ್ನು ನಾನೆಂದೂ ಕಂಡಿಲ್ಲ, ಒಬ್ಬನೇ ಒಬ್ಬನನ್ನೂ.’’2000ದಲ್ಲಿ ಭಾರತೀಯ ಪತ್ರಿಕಾ ಕ್ರಾಂತಿ ಬಗ್ಗೆ ನಾನು ಲೇಖನ ಬರೆದ ಬಳಿಕ ಈವರೆಗೆ ಪರಿಸ್ಥಿತಿ ಯಲ್ಲಿ ಏನೂ ಬದಲಾವಣೆಯಾಗಿಲ್ಲ. 300 ಮಾಧ್ಯಮ ನೀತಿ ನಿರೂಪಕರಲ್ಲಿ ಒಬ್ಬನೇ ಒಬ್ಬ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತನನ್ನು ಕಂಡುಹಿಡಿಯಲು ಕೂಪರ್- ಉನಿಯಾಲ್ ವಿಫಲರಾದ ಬಳಿಕದ 10 ವರ್ಷ ಗಳಲ್ಲಿ ಅಂದರೆ 2006ರಲ್ಲೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಒಂದು ವರ್ಷದ ಹಿಂದೆ ತಮಿಳು ಪತ್ರಕರ್ತ ಜೆ. ಬಾಲಸುಬ್ರಮಣ್ಯಂ ‘ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ತನ್ನ ಸ್ವಂತ ಅನುಭವ ಬರೆದಾಗಲೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.ಈಗ ಬಾಸ್ಟನ್‌ನಲ್ಲಿ ಮಾಧ್ಯಮ ಸಲಹೆಗಾರ ಹಾಗೂ ಸಂಪಾದಕರಾಗಿರುವ ಕೆನೆತ್ ಕೂಪರ್ ತನ್ನ ವೃತ್ತಿ ಜೀವನ ಆರಂಭವನ್ನು ಆಫ್ರಿಕನ್- ಅಮೆರಿಕನ್ ದೈನಿಕ ‘ಸೇಂಟ್ ಲೂಯಿಸ್ ಅಮೆ ರಿಕನ್’ನೊಂದಿಗೆ ಮಾಡಿದರು. ಆ ಪತ್ರಿಕೆ ವಾಣಿ ಜ್ಯಿಕವಾಗಿ ಯಶಸ್ವಿಯೂ ಆಗಿತ್ತು. ಗತ ಕಾಲದ ಆಫ್ರಿಕನ್-ಅಮೆರಿಕನ್ ಮತ್ತು ಇಂದಿನ ದಲಿತರ ಗೋಳಿನಲ್ಲಿ ಸಾಮ್ಯತೆ ಇರುವುದಾದರೆ, ಅಮೆರಿ ಕದ ‘ಎಬನಿ’ ಅಥವಾ ‘ಎಸೆನ್ಸ್’ ಮ್ಯಾಗಝಿನ್ ಗಳು ಅಥವಾ ಹಳೆಯ ‘ಸೇಂಟ್ ಲೂಯಿಸ್ ಅಮೆರಿಕನ್’ ಅಥವಾ ‘ಡಿಫೆಂಡರ್’ ನಂಥ ದಲಿತ ಚಿಂತನೆಗಳ ಮಾಧ್ಯಮಗಳು ಯಾಕಿಲ್ಲ?
ಇದಕ್ಕೆ ಉತ್ತರವೂ ಸರಳ. 1920ರ ದಶಕ ದಲ್ಲೂ ಅಮೆರಿಕದಲ್ಲಿ ಕರಿಯರು ಹೊಂದಿದ್ದ ಸವಲತ್ತುಗಳು ದಲಿತರಿಗೆ ಸಿಗುತ್ತಿಲ್ಲ. ಮುಖ್ಯವಾಗಿ ಮಧ್ಯಮ ವರ್ಗದ ಕರಿಯ ಅಂಗಡಿ ಮಾಲಕರು ಹಾಗೂ ವೃತ್ತಿಪರರು. ಅವರು ಪತ್ರಿಕೆಗೆ ಜಾಹೀರಾತು ನೀಡು ತ್ತಿದ್ದರು ಹಾಗೂ ಬಂಡವಾಳವನ್ನೂ ಹೂಡುತ್ತಿದ್ದರು. ಕರಿಯರು ಕೇವಲ ಒಂದು ಭಾಷೆಯಲ್ಲಿ ಕೆಲಸ ಮಾಡಿ ದರು- ಅದು ಇಂಗ್ಲಿಷ್. ಅವರಿಗೆ ಚರ್ಚ್‌ಗಳು ಮತ್ತು ಪಾಸ್ಟರ್‌ಗಳ ಜಾಲ ವಿತ್ತು. ಪಾಸ್ಟರ್‌ಗಳು ಗೌರವಾನ್ವಿತ ನಾಯಕರು, ಶಿಕ್ಷಣ ಮತ್ತು ಸಂಪರ್ಕ ಗಳನ್ನು ಒದಗಿಸಿದರು. ಅಂಥ ಹಲವರ ಪೈಕಿ ಮಾರ್ಟಿನ್ ಲೂತರ್ ಕಿಂಗ್ ಒಬ್ಬರು. ಅಮೆರಿಕದ ಕರಿಯರು ಹೆಚ್ಚು ವಿಭಜನೆಗೊಂಡಿರಲಿಲ್ಲ. ಆಫ್ರಿಕನ್-ಅಮೆರಿಕನ್ನ ರಲ್ಲಿ ಜಾತಿ ಒಂದು ಸಮಸ್ಯೆಯಾಗಿರಲಿಲ್ಲ.ಮಾಧ್ಯಮದಲ್ಲಿ ದಲಿತರ ಉಪಸ್ಥಿತಿಗೆ ಏನು ಮಾಡಬಹುದು? ಎರಡು ಸಲಹೆಗಳಿವೆ.
ಆದರೆ ಅವೆರಡೂ ಉತ್ತರವಲ್ಲ, ಆದರೆ ಎರಡೂ ಪರಿಶೀಲನೆಗೆ ಯೋಗ್ಯ.ಅಮೆರಿಕನ್ ಸೊಸಾಯಿಟಿ ಆಫ್ ನ್ಯೂಸ್ ಎಡಿಟರ್ಸ್‌ (ಎಎಸ್‌ಎನ್‌ಇ) 1978ರಿಂದ ನಡೆಸಿಕೊಂಡು ಬರುವಂತೆ, ಎಡಿಟರ್ಸ್‌ ಗಿಲ್ಡ್ ಕೂಡ ಸುದ್ದಿಮನೆ ವೈವಿ ಧ್ಯದ ಬಗ್ಗೆ ವಾರ್ಷಿಕ ಸಮೀಕ್ಷೆ ನಡೆಸ ಬಹುದು. 1978ರಲ್ಲಿ ಬಿಳಿಯರಲ್ಲದವರು ಅಮೆರಿಕನ್ ಜನಸಂಖ್ಯೆಯ 30 ಶೇ.ದಷ್ಟಿದ್ದರೂ, ಸುದ್ದಿಮನೆಗಳಲ್ಲಿ ಅವರ ಪ್ರಮಾಣ 4 ಶೆ. ದಷ್ಟಿತ್ತು. 2000ದ ವೇಳೆಗೆ ಈ ಪ್ರಮಾಣವನ್ನು 20 ಶೇ.ಕ್ಕೆ ಏರಿಸುವುದು ಉದ್ದೇಶವಾಗಿತ್ತು. ಆದರೆ ಗುರಿ ತಪ್ಪಿತು. 2011ರಲ್ಲಿ ಅಮೆರಿಕನ್ ಸುದ್ದಿ ಮನೆಗಳಲ್ಲಿ ಬಿಳಿಯರಲ್ಲದವರ ಸಂಖ್ಯೆ ಸುಮಾರು 13ಶೇ. ಆಗಿತ್ತು. ಅದೇ ವೇಳೆ, ಅಮೆರಿಕನ್ ಜನಸಂಖ್ಯೆಯಲ್ಲಿ ಅವರ ಪ್ರಮಾಣ 36 ಶೇ. ಆಗಿತ್ತು. (ಬಿಳಿಯರಲ್ಲದವರೆಂದರೆ ಆಫ್ರಿಕನ್ ಅಮೆರಿಕನ್ನರು, ಲ್ಯಾಟಿನೊಗಳು, ಮೂಲ ಅಮೆರಿಕನ್ನರು ಮತ್ತು ಏಶ್ಯನ್ನರು.).ನೂತನ ಎಎಸ್‌ಎನ್‌ಇ ಗುರಿಯನ್ನು 2020ಕ್ಕೆ ನಿಗದಿಪಡಿಸಲಾಗಿದೆ.
ಭಾರತದಲ್ಲಿ ಇಂಥ ಗುರಿಯನ್ನು ಇಟ್ಟುಕೊಳ್ಳುವುದು ಕಷ್ಟ. (ಇದು ಗುರಿ, ನೆನಪಿಡಿ, ಮೀಸಲಾತಿ ಅಥವಾ ಕೋಟ ಅಲ್ಲ). ಇಲ್ಲಿ ಜಾತಿ ಎನ್ನುವುದು ಬಲಿಷ್ಠವಾಗಿದೆ ಹಾಗೂ ಸೂಕ್ಷ್ಮವಾಗಿದೆ. ಆದರೆ, ಇಲ್ಲಿ ಪ್ರಮುಖ ಸಂಘಟನೆಗಳು ಮುಂದಾಗಿ ವೈವಿಧ್ಯತೆಯ ವಾರ್ಷಿಕ ವರದಿಗಳನ್ನು ಸಿದ್ಧಪಡಿಸಿ ದರೆ ಹಾಗೂ ಆ ವರದಿಗಳಲ್ಲಿ ಮಹಿಳೆಯರು ಮತ್ತು ಮುಸ್ಲಿಮರನ್ನೂ ಸೇರ್ಪಡೆಗೊಳಿಸಿದರೆ ಅದು ಸಂಬಂಧಪಟ್ಟವರಲ್ಲಿ ಮುಜುಗರ ಉಂಟು ಮಾಡುತ್ತದೆ. ಇದನ್ನು ಮಾಡಲು ಹೆಚ್ಚಿನ ಸಂಘಟನೆಗಳು ಮುಂದಕ್ಕೆ ಬರಲಿಕ್ಕಿಲ್ಲ, ಮುಂದೆ ಬಂದರೂ ಅಪಹಾಸ್ಯಕ್ಕೊಳಗಾಗಬಹುದು.ಭಾರತೀಯ ಪಿರಮಿಡ್‌ನಲ್ಲಿ ತಳದಲ್ಲಿರುವ ಜನರ ಪೈಕಿ ಮಧ್ಯಮ ವರ್ಗ ನಿಧಾನವಾಗಿ ಬೆಳೆಯುತ್ತಿದೆ. ತಳದಲ್ಲಿರುವ ಹೆಚ್ಚಿನವರ ಪೈಕಿ ದಲಿತರು. ತಳದಲ್ಲಿರುವವರಿಗೆ ಜಗತ್ತನ್ನು ತಮ್ಮ ದೃಷ್ಟಿಯಿಂದ ನೋಡುವ-ಕೆಳಗಿನಿಂದ ಮೇಲೆ ನೋಡುವ ಪತ್ರಿಕೆಗಳು ಬೇಕು.
ಭಾರತೀಯ ಪಿರಮಿಡ್‌ನ ತಳದಲ್ಲಿರುವ ಮಧ್ಯಮ ವರ್ಗಕ್ಕೆ ‘ಎಬನಿ’ ಅಥವಾ ‘ಎಸೆನ್ಸ್’ನಂಥ ಮೊದಲ ದರ್ಜೆಯ ಪತ್ರಿಕೆಗಳು ಬೇಕು.ನಿರ್ಲಕ್ಷಕ್ಕೊಳಗಾದ ಸಮುದಾಯದ ಕುರಿತ ಸುದ್ದಿಗಳನ್ನು ನಿರ್ಲಕ್ಷಕ್ಕೊಳಗಾದ ಸಮುದಾಯ ಗುರುತಿಸುವ ರೀತಿಯಲ್ಲಿ ಪ್ರಕಟಿಸುವ ಕೆಳಗಿನಿಂದ ಮೇಲಕ್ಕೆ ನೋಡುವ ಆಕರ್ಷಕ ಮ್ಯಾಗಝಿನ್‌ನ ಅಗತ್ಯವಿದೆ. ಅದರ ಪತ್ರಿಕೋದ್ಯಮ ಎಷ್ಟು ಪ್ರಭಾವಿಯಾಗಿರಬೇಕೆಂದರೆ ಇತರರೂ ಕೂಡ ಅದನ್ನು ಅದರ ಶ್ರೇಷ್ಠತೆಗಾಗಿ ಹಾಗೂ ವಿಭಿನ್ನತೆಗಾಗಿ ಓದುವಂತಿರಬೇಕು. ‘ನವಾಯಣ’ ಎಂಬ ಪತ್ರಿಕೆ ಸಣ್ಣ ರೀತಿಯಲ್ಲಿ ಖರ್ಚು ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಇದನ್ನು ಮಾಡಲು ಪ್ರಯತ್ನಿಸುತ್ತಿದೆ. ಇಂಥ ಪತ್ರಿಕೆಗಳನ್ನು ಟ್ರಸ್ಟ್ ನಡೆಸಬೇಕು ಹಾಗೂ ಅದರ ಬಂಡವಾಳದ ಒಂದು ಭಾಗ ದಲಿತ ಮಧ್ಯಮ ವರ್ಗದಿಂದಲೇ ಬರಬೇಕು. ಆದರೆ, ಟ್ರಸ್ಟ್‌ನ ನಿಧಿಯನ್ನು ಎಲ್ಲ ಹಿನ್ನೆಲೆಯ ಜನರು ಸದ್ಭಾವನೆಯಿಂದ ನೀಡುವ ದೇಣಿಗೆಗಳು ಮತ್ತು ಸರಕಾರ ಒಮ್ಮೆ ನೀಡುವ ದೇಣಿಗೆಗಳಿಂದ ತುಂಬಿಸಿಕೊಳ್ಳಬೇಕು. 100 ಕೋಟಿ ರೂ. ಒಂದು ನೈಜ ಗುರಿಯಾಗಿರಬೇಕು.

ಟೆಲಿವಿಶನ್ ಕತೆ ಏನು?

1967ರಲ್ಲಿ ನಾನು ಮೊದಲ ಬಾರಿಗೆ ಭಾರತಕ್ಕೆ ಬರುವ ಮೊದಲು ಸುಮಾರು ಒಂದೂವರೆ ವರ್ಷ ಕಾಲ ಪಶ್ಚಿಮ ಕೆನಡದ ಚಿಕ್ಕ ಪಟ್ಟಣದ ಪತ್ರಿಕೆಯೊಂದಕ್ಕೆ ಪ್ರತಿ ದಿನ ಟೆಲಿವಿಶನ್ ಅಂಕಣವೊಂದನ್ನು ಬರೆಯುತ್ತಿದ್ದೆ. ನಾನು ಅಮೆರಿಕ ಮತ್ತು ಕೆನಡದ ಟೆಲಿವಿಶನ್‌ಗಳನ್ನು ತುಂಬಾ ನೋಡಿದೆ.ಟಿವಿಯಲ್ಲಿ ಕಪ್ಪು ಜನರು ಇರಲಿಲ್ಲ.1970ರಲ್ಲಿ ನಾನು ಉತ್ತರ ಅಮೆರಿಕಕ್ಕೆ ಮರಳಿದಾಗ ಫ್ಲಿಪ್ ವಿಲ್ಸ್‌ನ್ ಎಂಬ ಆಫ್ರಿಕನ್ ಅಮೆರಿಕನ್ ಹಾಸ್ಯ ನಟ ಟಿವಿಯಲ್ಲಿ ಪ್ರಸಿದ್ಧರಾಗಿದ್ದರು.ನಾಟಕೀಯ ಬದಲಾವಣೆಯೊಂದು ಅಲ್ಲಿ ನಡೆದಿತ್ತು. ಈಗ 38 ವರ್ಷಗಳ ಬಳಿಕ ಅಮೆರಿಕವು ಓರ್ವ ಕಪ್ಪು ಅಧ್ಯಕ್ಷನನ್ನು ಆರಿಸಿದೆ.ಪ್ರಮುಖ ಭಾರತೀಯ ಟಿವಿ ಚಾನೆಲ್‌ನಲ್ಲಿ ಯಾರಾದರೂ ದಲಿತರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆಯೇ ಅಥವಾ ಟಿವಿಯಲ್ಲಿ ನಿಯಮಿತವಾಗಿ ಬರುತ್ತಿದ್ದಾರೆಯೇ? ಇಲ್ಲ ಎಂದು ನನಗೆ ಗೊತ್ತಿರುವವರು ಹೇಳುತ್ತಿದ್ದಾರೆ.
ಭಾರತದಲ್ಲಿ ‘ಸಮಾನತೆ’ ಮತ್ತು ‘ಸಹೋದರತೆ’ಯನ್ನು ಸಾಧಿಸುವುದು ಇದಕ್ಕಾಗಿ ಅಮೆರಿಕದಲ್ಲಿ ಕರಿಯರು ನಡೆಸಿದ ಹೋರಾಟಕ್ಕಿಂತಲೂ ಕಷ್ಟವಾಗಿರಬಹುದು.ಅಲ್ಲಿ ವಿಭಜನೆ ಹೆಚ್ಚಾಗಿದೆ, ಸಂಪನ್ಮೂಲಗಳು ಕಡಿಮೆಯಿವೆ ಹಾಗೂ ಬೃಹತ್ ಪ್ರಮಾಣದಲ್ಲಿ ತಾರತಮ್ಯಗಳಿವೆ.

Advertisement

0 comments:

Post a Comment

 
Top