PLEASE LOGIN TO KANNADANET.COM FOR REGULAR NEWS-UPDATES


  ಜಿಲ್ಲೆಯ ಯಾವುದೇ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದೆಯೇ?  ಹಾಗಿದ್ದಲ್ಲಿ, ತಡ ಮಾಡಬೇಡಿ, ಸಾರ್ವಜನಿಕರು ಕೂಡಲೆ ಜಿಲ್ಲಾ ಮಟ್ಟದ ಅಥವಾ ಆಯಾ ತಾಲೂಕು ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಿದಲ್ಲಿ, ಸಮಸ್ಯೆಯ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಮ್ ಅವರು ತಿಳಿಸಿದ್ದಾರೆ.
  ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರು ಸರಬರಾಜಿನ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಮತ್ತು ಆಯಾ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಸಹಾಯವಾಣಿ ಪ್ರಾರಂಭಿಸಿ ದೂರು ಸ್ವೀಕೃತಿಗೆ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.  ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿಂತೆ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಈ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.  ಸಾರ್ವಜನಿಕರಿಂದ ಸ್ವೀಕೃತವಾಗುವ ದೂರುಗಳನ್ನು ದಾಖಲಿಸಿಕೊಂಡು ಅವುಗಳ ಪರಿಹಾರಕ್ಕಾಗಿ ತುರ್ತು ಕ್ರಮ ಜರುಗಿಸಲಾಗುವುದು.  ಸಹಾಯವಾಣಿಯು ಭಾನುವಾರವೂ ಸೇರಿದಂತೆ ಪ್ರತಿದಿನ ಬೆಳಿಗ್ಗೆ ೦೬ ಗಂಟೆಯಿಂದ ರಾತ್ರಿ ೦೮ ರವರೆಗೆ ಕಾರ್ಯ ನಿರ್ವಹಿಸಲಿದ್ದು, ಪ್ರತಿ ಸಹಾಯವಾಣಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಸಹಾಯವಾಣಿ ಕರೆ ದೂರವಾಣಿ ಸಂಖ್ಯೆಗಳ ವಿವರ ಇಂತಿದೆ.  ಜಿಲ್ಲಾ ಮಟ್ಟದ ಸಹಾಯವಾಣಿಯ ದೂರವಾಣಿ ಸಂಖ್ಯೆ ಕೊಪ್ಪಳ: ೦೮೫೩೯-೨೨೧೨೦೭.  ಅದೇ ರೀತಿ ತಾಲೂಕು ಮಟ್ಟದಲ್ಲಿನ ಸಹಾಯವಾಣಿ ವಿವರ ಇಂತಿದೆ. ಕೊಪ್ಪಳ- ೦೮೫೩೯-೨೨೦೩೯೯, ಯಲಬುರ್ಗಾ- ೦೮೫೩೪-೨೨೦೧೩೬, ಕುಷ್ಟಗಿ- ೦೮೫೩೬- ೨೬೭೦೨೮ ಹಾಗೂ ಗಂಗಾವತಿ- ೦೮೫೩೩-೨೩೦೨೩೦.
  ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದಲ್ಲಿ, ಕೂಡಲೆ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಮ್ ಅವರು ತಿಳಿಸಿದ್ದಾರೆ.

ಸಹಾಯವಾಣಿ ದೂರವಾಣಿ ಸಂಖ್ಯೆ   
ಜಿಲ್ಲಾ ಮಟ್ಟದ ಸಹಾಯವಾಣಿ, ಕೊಪ್ಪಳ ೦೮೫೩೯-೨೨೧೨೦೭   
ಕೊಪ್ಪಳ ತಾಲೂಕು ೦೮೫೩೯-೨೨೦೩೯೯   
ಯಲಬುರ್ಗಾ ತಾಲೂಕು ೦೮೫೩೪- ೨೨೦೧೩೬   
ಕುಷ್ಟಗಿ ತಾಲೂಕು ೦೮೫೩೬-೨೬೭೦೨೮   
ಗಂಗಾವತಿ ತಾಲೂಕು ೦೮೫೩೩- ೨೩೦೨೩೦  

Advertisement

0 comments:

Post a Comment

 
Top