ಕೊಪ್ಪಳ: ಭಾರತವು ಅಭಿವೃದ್ದಿಯಾಗುತ್ತಿರುವ ರಾಷ್ಟ್ರ. ವಿದೇಶಿಯರಿಗೆ ಬಂಡವಾಳ ಹೂಡಿಕೆಗೆ ವಿಶ್ವಾಸರ್ಹ ದೇಶವಾಗಿದೆ. ಈ ದೇಶದಲ್ಲಿ ಅವಲಂಬಿತರ ಸಂಖ್ಯೆ ಕಡಿಮೆ. ದುಡಿಯುವ ವರ್ಗಕ್ಕೆ ಕೊರತೆಯೇ ಇಲ್ಲ. ಆದರೆ ಅವರಲ್ಲಿ ಶಕ್ತಿ ಮತ್ತು ಕೌಶಲ್ಯವನ್ನು ಹೆಚ್ಚಿಸಿದರೆ ರಾಷ್ಟ್ರದ ಆರ್ಥಿಕ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ. ೨೦೨೫ರ ವೇಳೆಗೆ ಜಗತ್ತಿನ ಆರ್ಥಿಕ ಶಕ್ತಿ ದಕ್ಷಿಣ ಎಷ್ಯಾದ ಕಡೆಗೆ ಅಂದರೆ ಭಾರತ ಮತ್ತು ಚೀನಾಗಳತ್ತ ವಾಲುತ್ತದೆ.೨೦೫೦ ರ ವೇಳೆಗೆ ಆರ್ಥಿಕ ಶಕ್ತಿಯಲ್ಲಿ ದೊಡ್ಡ ಎರಡನೇಯ ರಾಷ್ಟ್ರವಾಗಲಿದೆ.ಈಗಾಗಲೇ ಶಿಕ್ಚಣ,ಆರೋಗ್ಯ,ಸುರಕ್ಷೆ,ಬಡತನನಿರ್ಮೂಲನೆ,ಪರಿಸರ ಸಂರಕ್ಷಣೆ ಈ ದಿಸೆಯಲ್ಲಿ ಗಣನೀಯವಾಗಿ ಸುಧಾರಣೆ ಕಂಡಿದೆ. ಹೀಗಿದ್ದೂ ನಮ್ಮಲ್ಲಿ ಕೃಷಿಯಲ್ಲಿ ಅಲಕ್ಷಿತ ಭಾವ,ಉದ್ಯೋಗದಲ್ಲಿ ಅನಿಶ್ಚಿತೆತೆ, ಆರೋಗ್ಯ ಮತ್ತು ಶಿಕ್ಷಣದ ಪರಿಕಲ್ಪನೆ, ಮಾರ್ಗದರ್ಶನದ ಹಾಗೂ ರಾಜಕೀಯ ಇಚ್ಚಾಶಕ್ತಿಯ ಕೊರತೆ ಕಾಡುತ್ತಿದೆ. ೧೨ ನೇ ಪಂಚವಾರ್ಷಿಕ ಯೋಜನೆಯು ಇಂತಹ ಮೂಲವಸ್ತುಗಳ ಪೊರೈಕಯನ್ನು ನೀಗಿಸುವಲ್ಲಿ ಮುಂದಾಗಬೇಕೆಂದು ಡಾ.ಎಸ್.ಟಿ.ಬಾಗಲಕೋಟಿ ಕರ್ನಾಟಕವಿ.ವಿ ಪ್ರಾಧ್ಯಾಪಕರು ಮಾತನಾಡಿದರು. ಅವರು ನಗರದ ಶ್ರೀಗವಿಸಿದ್ದೇಶ್ವರ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಆರ್ಥಿಕ ಸುಧಾರಣೆಗಳು ಮತ್ತು ಸುಸ್ಥಿರ ಅಭಿವೃದ್ಧಿ- ಭಾರತದಲ್ಲಿ ಸಾಧ್ಯತೆಗಳು ಮತ್ತು ಸವಾಲುಗಳು ಎಂಬ ವಿಷಯದಡಿ ಏರ್ಪಡಿಸಿದ ರಾಷ್ಟಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಧಾನ ಭಾಷಣಕಾರರಾಗಿ ವಿಚಾರವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಶ್ರೀನಿವಾಸ ಗುಪ್ತಾ ಡಾ.ಮನಮೋಹನಸಿಂಗ್‌ರಂತಹ ಆರ್ಥಿಕ ತಜ್ಷರು ಪ್ರಧಾನಿಗಳಾಗಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರುಮಾಡುವಲ್ಲಿ ಯಶಸ್ಸಾಗಿದ್ದಾರೆ ಎಂದು ಮಾತನಾಡಿದರು. ಅಧ್ಯಕ್ಷತೆಯನ್ನು ಸಂಜಯಕೊತಬಾಳ ಟ್ರಸ್ಟ ಸದಸ್ಯರು ವಹಿಸಿಮಾತನಾಡಿದರು. ವೇದಿಕೆಯ ಮೇಲೆ ವಿರೇಶಪ್ಪ ಸೋಮಲಾಪುರ, ಪ್ರಾಚಾರ್ಯ ಎಸ್.ಎಲ್,ಮಾಲಿಪಾಟೀಲ, ಸಂಘಟನಾಕಾರ್ಯದರ್ಶಿ ಪ್ರೊ.ಎಂ.ಎಸ್.ಬಾಚಲಾಪುರ ಉಪಸ್ಥಿತರಿದ್ದರು. ಇಂದಿನಿಂದ ಎರಡು ದಿನಗಳಕಾಲ ನಡೆಯುವ ರಾಷ್ಟ್ರಮಟ್ಟದ ಈ ವಿಚಾರ ಸಂಕಿರಣದಲ್ಲಿ . ಅನೇಕಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳು ನಡೆಯುತ್ತವೆ. ಪ್ರಾಸ್ತಾವಿಕ ಪ್ರೊ.ಎಂ.ಎಸ್.ಬಾಚಲಾಪುರ, ಸ್ವಾಗತ ಎಸ್.ಎಲ್,ಮಾಲಿಪಾಟೀಲ, ಅತಿಥಿಗಳ ಪರಿಚಯ ಪ್ರೊ.ಎಸ್.ಬಿ.ಹಿರೇಮಠ, ನಿರೂಪಣೆ ಪ್ರೊ.ಎಸ್.ಬಿ.ಹಿರೇಮಠ ಮತ್ತು ಪ್ರೊ.ಶರಣಬಸಪ್ಪಬಿಳಿಎಲಿ, ವಂದನಾರ್ಪಣೆ ಅಶೋಕ ಒಜನಳ್ಳಿ ನೆರವೇರಿಸಿದರು.
Home
»
»Unlabelled
» ೨೦೫೦ ರ ವೇಳೆಗೆ ಆರ್ಥಿಕ ಶಕ್ತಿಯಲ್ಲಿ ಭಾರತ ದೊಡ್ಡ ಎರಡನೇಯ ರಾಷ್ಟ್ರವಾಗಲಿದೆ. .ಡಾ.ಎಸ್.ಟಿ.ಬಾಗಲಕೋಟಿ
Subscribe to:
Post Comments (Atom)
0 comments:
Post a Comment