PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ:  ಶ್ರೀ ಗವಿಮಠದ ೧೭ ನೇ ಪೀಠಾಧಿಪತಿಗಳಾದ ಲಿಂ.ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೯ ನೇಯ ಪುಣ್ಯ ಸ್ಮರಣೋತ್ಸವವನ್ನು ದಿನಾಂಕ ೧೬ ರಂದು ಆಚರಿಸಲಾಗುತ್ತದೆ.  ಅಂದು ಬೆಳಿಗ್ಗೆ ೭.೩೦ ಕ್ಕೆ ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರದೇವಸ್ಥಾನದಿಂದ ಶ್ರೀಗವಿಮಠದ ವರೆಗೆ ಪಾದಯಾತ್ರೆ ಕಾರ್ಯಕ್ರಮ ಜರುಗುವದು. ಅದೇ ದಿನ ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೫ ಗಂಟೆಯವರೆಗೆ ನಾಡಿನ ಹೆಸರಾಂತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಶ್ರೀಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆಸಲಾಗುವದು.  ಸಾಯಂಕಾಲ ೬.೩೦ ಕ್ಕೆ ಶ್ರೀಮಠದ ಕೈಲಾಸಮಂಟಪದಲ್ಲಿ ಗುರುಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ವೇದಿಕೆಯಲ್ಲಿ ಶ್ರೀ ಶ್ರೀ ಶ್ರೀ೨೦೦೮ ಜಗದ್ಗುರು ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಪಂಚಮಸಾಲಿಪೀಠಹರಿಹರ-ಡಾವಣಗೇರೆ, ಶ್ರೀಮ.ನಿ.ಪ್ರ.ಡಾ.ಕೊಟ್ಟೂರೇಶ್ವರ ಮಹಾಸ್ವಾಮಿಗಳು ಕಲ್ಮಠ ಗಂಗಾವತಿ, ಶ್ರೀಷ.ಬ್ರ.ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಣದೂರು  ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಡಾ.ಶಂಕರ ಬಿದರಿ ರಾಜ್ಯ ಪೋಲಿಸ್ ಮಹಾನಿದೇಶಕರು ಬೆಂಗಳೂರು ಹಾಗೂ ಪ್ರೊ. ಐ.ಜಿ.ಸನದಿ ಮಾಜಿ ಸಂಸದರು ಹುಬ್ಬಳ್ಳಿ ಆಗಮಿಸಲಿದ್ದಾರೆ. ಕು. ಮಾಲಾಶ್ರೀ ಕಣವಿ ಆಕಾಶವಾಣಿ ಕಲಾವಿದರು ಗುಲಬುರ್ಗಾ ಇವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ. ಕೊಪ್ಪಳ ನಾಡಿನ ಜನತೆ ಈ ಗುರುಸ್ಮರಣೋತ್ಸವದಲ್ಲಿ ಭಾಗಿಯಾಗಿ ಲಿಂ.ಶ್ರೀಗಳಾದ ಶಿವಶಾಂತವೀರ ಶಿವಯೋಗಿಗಳ ಕೃಪೆಗೆ ಪಾತ್ರರಾಗಬೇಕೆಂದು ಹಾಗೇಯೇ ಕೊಪ್ಪಳ ಜಿಲ್ಲೆಯ ಜನತೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ 


Advertisement

0 comments:

Post a Comment

 
Top