PLEASE LOGIN TO KANNADANET.COM FOR REGULAR NEWS-UPDATES


  ಪ್ರಸಕ್ತ ಸಾಲಿನ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಆದ್ಯತೆ ದೊರೆತಿಲ್ಲ,  ಈ ಭಾಗದ ಪ್ರಮುಖ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಾಗದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಸಂಸದ ಶಿವರಾಮಗೌಡ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
  ಬಹು ನಿರೀಕ್ಷಿತ ಗದಗ- ವಾಡಿ, ಕೊಪ್ಪಳ-ಆಲಮಟ್ಟಿ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗದಿರುವುದು, ವಿಷಾದದ ಸಂಗತಿಯಾಗಿದೆ.  ಈ ಹಿಂದೆ ಪ್ರಕಟಿಸಲಾದ ಕೊಪ್ಪಳಕ್ಕೆ ಆದರ್ಶ ನಿಲ್ದಾಣ, ಡಬಲ್ ಲೈನ್ ನಿರ್ಮಾಣ ಅಲ್ಲದೆ ಮುನಿರಾಬಾದ್-ಮೆಹಬೂಬ್ ನಗರ ರೈಲು ಮಾರ್ಗ ಯೋಜನೆಯ ತುರ್ತು ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ದೊರೆತಿಲ್ಲ.  ಈ ಭಾಗದ ಜನಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದಂತೆ ಯಾವುದೇ ಹೊಸ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳ ಮಂಜೂರಾತಿ ನೀಡದೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ.  ಮಧ್ಯಮ ಮತ್ತು ಬಡವರಿಗೆ ಅನುಕೂಲವಿದ್ದ ಸಾಮಾನ್ಯ ಪ್ರಯಾಣ ದರವನ್ನು ಏರಿಸಿರುವುದು ದುರದೃಷ್ಟಕರ.  ಆದರೆ ಸಂಸದರ ಬೇಡಿಕೆಯಂತೆ ಕೊಲ್ಲಾಪುರ-ಹೈದ್ರಾಬಾದ್ ರೈಲನ್ನು ವಾರ ಪೂರ್ತಿ ಓಡಿಸಲು ಹಾಗೂ ಶಿರಡಿ-ಮೈಸೂರು ರೈಲನ್ನು ಖಾಯಂ ಆಗಿ ವಾರಕ್ಕೊಮ್ಮೆ ಓಡಿಸಲು ತೆಗೆದುಕೊಂಡ ನಿರ್ಣಯ ಮತ್ತು ಹೊಸಪೇಟೆ ಹಾಗೂ ಹುಬ್ಬಳ್ಳಿ ಮದ್ಯೆ ವಿದ್ಯುತ್ ರೈಲಿನ ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ಸಂಸದ ಶಿವರಾಮಗೌಡ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ 

Advertisement

0 comments:

Post a Comment

 
Top