PLEASE LOGIN TO KANNADANET.COM FOR REGULAR NEWS-UPDATES


- ಸಂಸದ ಶಿವರಾಮಗೌಡ
 ಕೊಪ್ಪಳದ ಕೇಂದ್ರೀಯ ವಿದ್ಯಾಲಯದಲ್ಲಿ ೨೦೧೨-೧೩ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಕ್ಕೆ ನವದೆಹಲಿಯ ಕೇಂದ್ರೀಯ ವಿದ್ಯಾಲಯ ಘಟಕ ಅನುಮತಿ ನೀಡಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
  ಕೊಪ್ಪಳದ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸುವಲ್ಲಿ ಉಂಟಾದ ವಿಳಂಬಕ್ಕಾಗಿ ೨೦೧೨-೧೩ನೇ ಸಾಲಿಗೆ ಪ್ರವೇಶವನ್ನು ನವದೆಹಲಿಯ ಕೇಂದ್ರೀಯ ವಿದ್ಯಾಲಯ ಘಟಕದ ಅಧಿಕಾರಿಗಳು ತಡೆಹಿಡಿದಿದ್ದರು, ಆದರೆ ಇದೀಗ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಹಾಗೂ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ಸಹಕಾರದಿಂದ ಕೇಂದ್ರೀಯ ವಿದ್ಯಾಲಯದ ಕಟ್ಟಡಕ್ಕಾಗಿ ಬಹದ್ದೂರಬಂಡಿ ಗ್ರಾಮ ಬಳಿ ೧೦ ಎಕರೆ ಭೂಮಿ ಅಂತಿಮಗೊಳಿಸಿ, ಇದರ ಖರೀದಿಗಾಗಿ ಸರ್ಕಾರ ೫೫ ಲಕ್ಷ ರೂ.ಗಳ ಮಂಜೂರಾತಿ ನೀಡಿರುವುದರಿಂದ, ನವದೆಹಲಿಯ ಕೇಂದ್ರೀಯ ವಿದ್ಯಾಲಯ ಘಟಕದ ಜಂಟಿ ಆಯುಕ್ತರು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪ್ರವೇಶ ಪ್ರಾರಂಭಿಸಲು ಅನುಮತಿ ನೀಡಿದ್ದಾರೆ.  ಪ್ರತಿ ವರ್ಷದಂತೆ ಈ ವರ್ಷವೂ ಈ ವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ.  ಇದೀಗ ಕೇಂದ್ರೀಯ ವಿದ್ಯಾಲಯಕ್ಕಾಗಿ ಭೂಮಿ ಮಂಜೂರಾತಿಯಾಗಿರುವುದರಿಂದ, ಕೊಪ್ಪಳದ ಕೇಂದ್ರೀಯ ವಿದ್ಯಾಲಯ ಬೇರೆಡೆಗೆ ಸ್ಥಳಾಂತರಗೊಳ್ಳುವುದಾಗಲಿ ಅಥವಾ ರದ್ದಾಗುವ ಯಾವುದೇ ಪ್ರಸಂಗ ಉದ್ಭವಿಸುವುದಿಲ್ಲ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ  

Advertisement

0 comments:

Post a Comment

 
Top