ಕಿನ್ನಾಳ : ೩೭೧ನೇ ಕಲಂ ತಿದ್ದುಪಡಿಯಿಂದ ನಮ್ಮ ಭಾಗದ ಅಭಿವೃದ್ದಿ ಸಾಧ್ಯ.ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮ ಹೈದ್ರಾಬಾದ್ ಕರ್ನಾಟಕಕ್ಕೆ ಯಾವತ್ತೂ ಮಲತಾಯಿ ಧೋರಣೆ ತೋರುತ್ತಲೇ ಬಂದಿವೆ ಅಲ್ಲದೇ ನಮ್ಮ ಚುನಾಯಿತ ಪ್ರತಿನಿಧಿಗಳೂ ಸಹ ಇದರ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುತ್ತಲೇ ಬಂದಿದ್ದಾರೆ ಹೀಗಾಗಿ ನಮ್ಮ ಭಾಗ ಹಿಂದುಳಿದಿದೆ. ೩೭೧ನೇ ಕಲಂ ತಿದ್ದುಪಡಿ ಮಾಡಲೇಬೇಕು. ಅದಕ್ಕಾಗಿ ಎಂತಹ ಹೋರಾಟಕ್ಕೂ ಸಿದ್ದ.ಸಮಯ ಬಂದರೆ ಹೋರಾಟಕ್ಕಾಗಿ ಸಾಯಲು ಸಿದ್ದ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂತೋಷ ದೇಶಪಾಂಡೆ ಹೇಳಿದರು. ಅವರು ಕಿನ್ನಾಳ ಗ್ರಾಮದಲ್ಲಿ ಕಿನ್ನಾಳ ಗ್ರಾಮ ಪಂಚಾಯತ್ , ವಿವಿಧ ಶಾಲಾ,ಕಾಲೇಜುಗಳು ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜಾಗೃತಿ ಜಾಥಾವನ್ನುದ್ದೇಶಿ ಮಾತನಾಡುತ್ತಿದ್ದರು.
ಶಿವಕುಮಾರ ಕುಕನೂರ ಹಾಗೂ ಸೇವಾ ಸಂಸ್ಥೆಯ ರಾಜಾಬಕ್ಷಿ ಹೈದ್ರಾಬಾದ್ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಇದಕ್ಕೂ ಮೊದಲು ಕುವೆಂಪು ದಶಮಾನೋತ್ಸವ ಶಾಲಾ ಆವರಣದಿಂದ ಹೊರಟ ರ‍್ಯಾಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಕಾಮನಕಟ್ಟೆಯ ಬಳಿ ಬೃಹತ್ ಸಭೆಯಲ್ಲಿ ಮುಕ್ತಾಯಗೊಂಡಿತು. ನಡೆದ ಬೃಹತ್ ರ‍್ಯಾಲಿಯಲ್ಲಿ ಕಿನ್ನಾಳ ಗ್ರಾಮದ ಎಲ್ಲಾ ಶಾಲಾ,ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಂಪಮ್ಮ ಎಲಿಗಾರ, ಉಪಾಧ್ಯಕ್ಷರಾದ ಪಂಪಣ್ಣ ಮಂಡಾಳುಂಡಿ ಸೇರಿದಂತೆ ಸಕಲ ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಸಂಘಟನೆಗಳವರು, ಶಾಲಾ ಶಿಕ್ಷಕ/ಶಿಕ್ಷಕಿಯರು, ಮುಖ್ಯೋಪಾಧ್ಯಾಯರು. ಪ್ರಿನ್ಸಿಪಾಲರು ಭಾಗಹಿಸಿದ್ದರು.
0 comments:
Post a Comment