ಕೊಪ್ಪಳ : ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮದವರ ಮೇಲೆ ವಕೀಲರು ನಡೆಸಿದ ಹಲ್ಲೆ ಖಂಡಿಸಿ ಕೊಪ್ಪಳದಲ್ಲಿ ಶನಿವಾರ ಮೀಡಿಯಾ ಕ್ಲಬ್‌ನ ಸದಸ್ಯರು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೆರವಣಿಗೆಯ ಆರಂಭಕ್ಕೂ ಮುನ್ನ ನಗರದ ಮೀಡಿಯಾ ಕ್ಲಬ್‌ನಲ್ಲಿ ಪತ್ರಕರ್ತರು ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ವರದಿಗಾರ ಸೋಮರಡ್ಡಿ ಅಳವಂಡಿ, ರಾಜ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಆಘಾತಕಾರಿ. ಅದರಲ್ಲೂ ವಕೀಲರು ಪತ್ರಿಕೋದ್ಯಮವನ್ನು ಬಗ್ಗೆ ತೀರಾ ಕನಿಷ್ಟವಾಗಿ ಪರಿಗಣಿಸಿ ಕಾನೂನಿನಲ್ಲಿ ನಾವೇ ಸರ್ವಶ್ರೇಷ್ಠ ಎಂಬ ಭ್ರಮೆಯಲ್ಲಿ ಈ ರೀತಿಯ ಗೂಂಡಾಗಿರಿ ನಡೆಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿರುವವರಿಗೆ ಎಲ್ಲ ವೃತ್ತಿಗಳು ಸರ್ವಶ್ರೇಷ್ಠವೇ. ವೃತ್ತಿಯ ವಿಷಯದಲ್ಲಿ ಯಾವುದು ಹೆಚ್ಚು-ಕಡಿಮೆ ಇಲ್ಲ. ಯಾವುದೇ ಕೆಲವನ್ನು ಆತ್ಮಗೌರವದಿಂದ, ಕಾನೂನಿನ ಚೌಕಟ್ಟಿನಡಿ ಮಾಡಬೇಕು. ಯಾರು ಶ್ರೇಷ್ಠ ನೋಡೇ ಬಿಡೋಣ ಎನ್ನುವ ರೀತಿಯಲ್ಲಿ ಹಲ್ಲೆ ಮಾಡಿರುವ ವಕೀಲರು ಪತ್ರಕರ್ತರ ಸಹನೆಯನ್ನು ಕೆಣಕಿದ್ದಾರೆ. ಹಲ್ಲೆ ನಡೆಸಿರುವ ಪುಂಡ ವಕೀಲರು ತಕ್ಕ ಪರಿಣಾಮವನ್ನು ಎದುರಿಸುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತ ಭೀಮಸೇನ ಚಳಗೇರಿ ಮಾತನಾಡಿ, ಬೆಂಗಳೂರಿನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಽಗಳ ಮೇಲೆ ವಕೀಲರು ನಡೆಸಿದ ಹಲ್ಲೆ ಕುರಿತಂತೆ ಈಗಾಗಲೇ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕಾನೂನು ಕಾಪಾಡಬೇಕಾದ ವಕೀಲರೇ ಕಾನೂನನ್ನು ಕೈಗೆತ್ತಿಕೊಂಡು ಮಾಧ್ಯಮದವರ ಮೇಲೆ ನಡೆಸಿರುವ ದೌರ್ಜನ್ಯ ಖಂಡನೀಯ. ತಪ್ಪಿತಸ್ಥರ ವಿರುದ್ಧ ಸರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀಡಿಯಾ ಕ್ಲಬ್‌ನ ಸದಸ್ಯರು ನಗರದ ಹರ್ಷ ಹೋಟೇಲ್‌ನಿಂದ ಜಿಲ್ಲಾಽಕಾರಿ ಕಚೇರಿವರೆಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರಕಾರ ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆ ಉಗ್ರಸ್ವರೂಪ ಪಡೆಯುತ್ತದೆ ಎಂದು ಪತ್ರಕರ್ತರು ಎಚ್ಚರಿಸಿದರು. ಬಳಿಕ ಜಿಲ್ಲಾಽಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಎನ್.ಎನ್.ಮೂರ್ತಿ ಪ್ಯಾಟಿ, ಬಸವರಾಜ ಕರುಗಲ್, ಹುಸೇನ ಪಾಷಾ, ಗಂಗಾಧರ ಬಂಡಿಹಾಳ, ನಾಭಿರಾಜ ದಸ್ತೇನವರ್, ಮಲ್ಲಿಕಾರ್ಜುನ ಸ್ವಾಮಿ, ಮೌನೇಶ ಬಡಿಗೇರ, ದೊಡ್ಡೇಶ ಎಲಿಗಾರ, ವಾಸೀಂ ಭಾವಿಮನಿ, ಗುರುರಾಜ.ಬಿ.ಆರ್, ತಿಪ್ಪನಗೌಡ ಮಾಲೀಪಾಟೀಲ್, ಶರಣಬಸವ ಹುಲಿಹೈದರ್, ನಾಗರಾಜ ಹಿರೇಮಠ, ಎನ್.ಜಿ.ಬೆಲ್ಲದ, ಶಂಕರ ಕೊಪ್ಪದ, ಜಯಂತ್ ಸಿ.ಎಂ,, ಅಮೀತ್, ಈರಣ್ಣ, ಮಾರುತಿ ಕಟ್ಟಿಮನಿ, ಪರಮೇಶರೆಡ್ಡಿ, ಗುರುರಾಜ ಡಂಬಳ, ಪ್ರಕಾಶ ಕಂದಕೂರ ಮತ್ತಿತರರು ಇದ್ದರು.
0 comments:
Post a Comment