ಕೊಪ್ಪಳ : ವಿಶ್ವಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಜಂಟೀಯಾಗಿ ನೀಡುವ ಮಾಧ್ಯಮ ಫೆಲೋಶಿಪ್‌ಗೆ ಭಾಜನರಾಗಿರುವ ಕೊಪ್ಪಳದ ಉದಯವಾಣಿ ವರದಿಗಾರ ಬಸವರಾಜ ಕರುಗಲ್ ಹಾಗೂ ಹೊಸಪೇಟೆ ಆಕಾಶವಾಣಿ ಕೇಂದ್ರದ ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ್ ಸೇರಿದಂತೆ ೫ ಜನರಿಗೆ ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಫೆಲೋಶಿಪ್ ಪುರಸ್ಕಾರ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ದಿ ಹಿಂದು ಆಂಗ್ಲ ದಿನಪತ್ರಿಕೆಯ ಸ್ಥಾನಿಕ ಸಂಪಾದಕಿ ಪಾರ್ವತಿ ಮೆನನ್ ಅವರು ಯುನಿಸೆಫ್ ಹಾಗೂ ಕೆಸಿಆರ್‌ಓ ಮಾಧ್ಯಮ ಫೆಲೋಶಿಪ್‌ನ ೨೦ ಸಾವಿರ ರು.ಗಳ ನಗದು ಹಾಗೂ ಪುರಸ್ಕಾರ ಪತ್ರವನ್ನು ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾರ್ವತಿ ಮೆನನ್ ಅವರು, ಪತ್ರಕರ್ತ ಎನಿಸಿಕೊಂಡವರು ಕೇವಲ ವರದಿಗಾರಿಕೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು. ಅನೇಕ ಸನ್ನಿವೇಶಗಳಲ್ಲಿ ಸ್ವತಃ ಚಳವಳಿಗಾರರಾಗಿಯೂ ಕೆಲಸ ಮಾಡುವ ಮನಸ್ಥಿತಿ ಹೊಂದಿರಬೇಕು ಎಂದು ಸಲಹೆ ನೀಡಿದರು.
ಕೆಸಿಆರ್‌ಓನ ಡಾ.ವಾಸುದೇವಶರ್ಮಾ, ಕ್ರಿಸ್ತ ಜಯಂತಿ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಎಸ್.ಚಂದ್ರಶೇಖರ, ಲಕ್ಷ್ಮೀ ಗುರುರಾಜ, ಡಾ.ಪದ್ಮಿನಿ, ನಾಗಸಿಂಹ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿವಮೊಗ್ಗದ ಡಾ.ಕೆ.ಎಸ್.ಪವಿತ್ರ, ಪುತ್ತೂರಿನ ಮೌನೇಶ ವಿಶ್ವಕರ್ಮ ಹಾಗೂ ಧಾರವಾಡದ ನಾಗರಾಜ ಕಿರಣಗಿ ಅವರಿಗು ಮಾಧ್ಯಮ ಪೆಲೋಶಿಫ್ ಪುರಸ್ಕಾರ ಪ್ರದಾನ ಮಾಡಲಾಯಿತು.
0 comments:
Post a Comment