PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ೨೮- ಗಂಗಾವತಿ ವಕ್ಫ್ ಆಸ್ತಿ ಅತಿಕ್ರಮಣ ಆರೋಪ ನಿರಾದಾರವಾಗಿದ್ದು, ಆರೋಪ ರಾಜಕೀಯ ಪ್ರೇರಿತ ಮುಸ್ಲಿಂ ಮುಖಂಡರ ಮೇಲೆ ಬಿಜೆಪಿ ಗುಚಿ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ನಗರದಲ್ಲಿ ಬುಧವಾರದಂದು ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡತ್ತಿದ್ದರು.
ಬಿಜೆಪಿ ಪಕ್ಷದಲ್ಲಿರುವ ಮುಸ್ಲಿಂ ಸಮಾಜದಿಂದ ಉಚ್ಚಾಸಲ್ಪಟ್ಟ ಗೂಂಡಾಗಳು ಹಾಗೂ ಅನ್ವರ ಮಾನಪ್ಪಾಡಿ ಯಂತಹ ಅಯೋಗದಿಂದ ಮುಸ್ಲಿಂ ಸಮಾಜ ಗೌರವಿಸು ವಂತಹ ವಕ್ಫ್ ಆಸ್ತಿಯ ವಿಷಯ ವಾಗಿ ಅನಾವಶ್ಯಕವಾಗಿ ಪ್ರಭಾವಿ ಮುಖಂಡನಾದ ನನ್ನ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆದಿದೆ ಎಂದರು.
ಗಂಗಾವತಿಯಲ್ಲಿರುವ ಮಸಿದಿ ೨ ಎಕರೆ ಜಮೀನಿ ನಲ್ಲಿರುವ ಕಟ್ಟಡ ಅನ್ಸಾರಿ ಎಜ್ಯುಕೇಶನ್ ಮತ್ತು ಚಾರಿ ಟೇಬಲ್ ಟ್ರಸ್ಟ್‌ಗೆ ಬಾಡಿಗೆ ನೀಡಲು ೫-೩-೦೭ ರಂದು ನಿರ್ಣಯ ಕೈಗೊಂಡಿದ್ದು, ನಾವು ಹಲವಾರು ಕರಾರಿನ ಮೇಲೆ ಜಮೀನು ಬಾಡಿಗೆ ಪಡೆದಿದ್ದೇವೆ ವಿನಹ ಅತಿಕ್ರಮಣ ಮಾಡಿಲ್ಲ ವೆಂದು ಸ್ಪಷ್ಟಪಡಿಸಿದರು.
ಸಿಎಂಗೂ ಗೊತ್ತಿಲ್ಲ : ವಕ್ಫ್ ಕಾನೂನು ಮುಖ್ಯಮಂತ್ರಿ ಸದಾ ನಂದಗೌಡರಿಗಾಗಲಿ ಅಥವಾ ಆ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲ, ಅನ್ವರ ಮಾನಪ್ಪಾಡಿ ಅಯೋಗದ ಅಧ್ಯಕ್ಷರು ಆದರೆ ಇಲಾಖೆ ಕುರಿತು ತನಿಖೆ ಹೇಗೆ ನಡೆಸಿದರು ಎಂದು ಪ್ರಶ್ನಿಸಿದರು.
ಚರ್ಚಿಸಿ : ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದು, ವರದಿ ಕುರಿತು ಸಮಗ್ರವಾಗಿ ಸದನದಲ್ಲಿ ಚರ್ಚಿಸಿ ಎಂದು ಆಗ್ರಹಿಸಿದ ಇವರು ಅತಿಕ್ರಮಣ ತನಿಖೆಗೆ ಸಮಿತಿ ರಚಿಸಿ ನಿಷ್ಠಾವಂತ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಅಥವಾ ಸಿಬಿಐಗೆ ಒಪ್ಪಿಸಿ ಎಂದು ಆಗ್ರಹಿಸಿದರು.
ಹಣ ನೀಡಿದ್ದೇವೆ : ಜಿಲ್ಲೆಯ ವಕ್ಫ್ ಆಸ್ತಿ ಮುಸೀದಿ ಖಬರ್‌ಸ್ಥಾನ ದರ್ಗಾ ಜೀರ್ಣೋ ದ್ಧಾರಕ್ಕೆ ಅನ್ಸಾರಿ ಕುಟುಂಬ ಸಾಕಷ್ಟು ಹಣ ನೀಡಿದೆ ನಮಗೆ ವಕ್ಫ್ ಆಸ್ತಿ ಕಬಳಿಸುವಂತಹ ಅನಿವಾರ್ಯವಿಲ್ಲವೆಂಬುದನ್ನು ಮಾನಪ್ಪಾಡಿ ಅರಿತುಕೊಳ್ಳಲಿ ಎಂದರು.
ಕುತಂತ್ರ : ವಕ್ಫ್ ಆಸ್ತಿ ಹೆಸರಿ ನಲ್ಲಿ ಸುಳ್ಳು ವರದಿ ರಚಿಸಿರುವ ಬಿಜೆಪಿ ಸರ್ಕಾರ ಕೀಳು ಮಟ್ಟದ ಕುತಂತ್ರ ರಾಜಕೀಯ ಮಾಡುತ್ತಿದೆ. ಇಂತಹ ಕೀಳು ಮಟ್ಟ ಇಳಿದು ಮುಸ್ಲಿಂ ಸಮಾಜದವರ ಮೇಲೆ ದೌರ್ಜನ್ಯಕ್ಕೆ ಯತ್ನಸುತ್ತಿದ್ದು, ಮುಸ್ಲಿಂ ಮರು ಪವಿತ್ರ ಸ್ಥಾನ ನೀಡುವ ವಕ್ಫ್ ಆಸ್ತಿ ಕಬಳಿಕೆಗೆ ಮುಂದಾಗುವುದಿಲ್ಲವೆಂದು ಹೇಳಿದರು.
ದೂರು : ನಮ್ಮ ಮೇಲೆ ಸುಳ್ಳು ಆರೋಪ ಮಾಡಿರುವ ಅನ್ವರ ಮಾನಪ್ಪಾಡೆ ವಿರುದ್ಧ ಕಾನೂನುತ್ಮಿಕ ಹೋರಾಟ ನಡೆಸುವುದಾಗಿ ತಿಳಿಸಿದ ಅವರು ಮಾನಪ್ಪಾಡಿ ಮತ್ತು ಕೊಪ್ಪಳ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಅಧ್ಯಕ್ಷ ಸೈಯದ್‌ಗೆ ತಲೆ ಕೆಟ್ಟಿದೆ ಎಂದು ಲೇವಡಿ ಮಾಡಿದರು.

Advertisement

0 comments:

Post a Comment

 
Top