PLEASE LOGIN TO KANNADANET.COM FOR REGULAR NEWS-UPDATES


 ನೌಕರರ ಸಂಘ ಖಂಡನೆ
  ಕೊಪ್ಪಳ ನಗರದ ಎಸ್.ಎಫ್.ಎಸ್. ಶಾಲೆಯಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಗೆ ಕೆಲವು ಸಂಘಟನೆಯವರು ಆಗಮಿಸಿ, ಅಧಿಕಾರಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
  ಕೊಪ್ಪಳ ನಗರದ ಎಸ್‌ಎಫ್‌ಎಸ್ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಗುಲಬರ್ಗಾದ ಜಂಟಿನಿರ್ದೇಶಕರು, ಕೊಪ್ಪಳದ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸುಮಾರು ೩೦ ಕ್ಕೂ ಹೆಚ್ಚು ಅಧಿಕಾರಿಗಳು ಸಭೆ ನಡೆಸುವ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಸಭೆಯ ಉದ್ದೇಶವನ್ನು ತಿಳಿಯದೆ, ಏಕಾ ಏಕಿ ಸಭೆಗೆ ನುಗ್ಗಿ, ದಾಂಧಲೆ ಎಬ್ಬಿಸಿ, ಉಪನಿರ್ದೇಶಕರನ್ನು ಕೊಠಡಿಯಲ್ಲಿ ಕೂಡಿಹಾಕಿ ಅಮಾನವೀಯವಾಗಿ ವರ್ತಿಸಿರುವುದು ವಿಷಾದನೀಯ ಸಂಗತಿಯಾಗಿದೆ.  ಸಭೆಯ ಬಗ್ಗೆ ಒಂದು ವೇಳೆ ಯಾವುದೇ ಅನುಮಾನ, ಗೊಂದಲಗಳಿದ್ದಲ್ಲಿ, ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರುವಂತಹ ಕಾರ್ಯ ಮಾಡುವುದನ್ನು ಬಿಟ್ಟು, ಸಂಘಟನೆಗಳೇ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಮಂಜಸವಲ್ಲ.  ಇಂತಹ ಘಟನೆಯು ಸರ್ಕಾರಿ ನೌಕರರಲ್ಲಿನ ಆತ್ಮ ಸ್ಥೈರ್ಯವನ್ನು ಕುಗ್ಗಿಸುತ್ತದೆಯೇ ಹೊರತು, ದಕ್ಷತೆಯನ್ನು ಹೆಚ್ಚಿಸುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ವಿಷಾದ ವ್ಯಕ್ತಪಡಿಸಿz

Advertisement

0 comments:

Post a Comment

 
Top