PLEASE LOGIN TO KANNADANET.COM FOR REGULAR NEWS-UPDATES




 ಕೊಪ್ಪಳ ವಾರ್ತಾ ಇಲಾಖೆಯಿಂದ ಗಿರಿಜನ ಉಪಯೋಜನೆ ಯೋಜನೆಯಡಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಬುಡಕಟ್ಟು ಜನಾಂಗದ ಕಲಾವಿದರ ಹಕ್ಕಿ-ಪಿಕ್ಕಿ ನೃತ್ಯ ಪ್ರದರ್ಶನ ಎಲ್ಲೆಡೆ ಜನಾಕರ್ಷಣೆ ಪಡೆಯುವಲ್ಲಿ ಯಶಸ್ವಿಯಾಗಿದೆ.  
       ಬಳ್ಳಾರಿ ಜಿಲ್ಲೆ ಕಂಪ್ಲಿ ಗ್ರಾಮದ ಜಾನಕಿ ನೇತೃತ್ವದ ಹಕ್ಕಿ-ಪಿಕ್ಕಿ ನೃತ್ಯ ಕಲಾವಿದರ ತಂಡ ಪ್ರಸ್ತುತ ಪಡಿಸುತ್ತಿರುವ  ಈ   ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಈಗಾಗಲೆ ಹುಲಿಗಿ ಗ್ರಾಮದಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದು, ಅದೇ ರೀತಿ ಅಗಳಕೇರಾ ಗ್ರಾಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್.ಜಿ. ಅವರು ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಶಾಂತಮ್ಮ ಗುತ್ತಿ, ಶಾಂತಮ್ಮ ಕೀರ್ತಿಗೌಡ, ಕಲ್ಲಮ್ಮ ಗುತ್ತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಣ್ಣ ಹುಣಸಿಹಾಳ, ಕಾರ್ಯದರ್ಶಿ ಶರಣಯ್ಯ ಹಿರೇಮಠ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  
  ಭಾಗ್ಯನಗರದಲ್ಲಿ ಏರ್ಪಡಿಸಲಾದ ಈ ಕಾರ್ಯಕ್ರಮವನ್ನು ತಾಲೂಕಾ ಪಂಚಾಯತಿ ಸದಸ್ಯ ಶ್ರೀನಿವಾಸ ಹ್ಯಾಟಿ ಅವರು ಹಲಗೆ ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಬುಡಕಟ್ಟು ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವಲ್ಲಿ ವಾರ್ತಾ ಇಲಾಖೆಯು ಹಮ್ಮಿಕೊಂಡಿರುವ ಬೇರೆ ಜಿಲ್ಲೆಗಳ ಕಲೆಗಳ ವಿನಿಮಯ ಕಾರ್ಯಕ್ರಮವು ಶ್ಲಾಘನೀಯವಾದದ್ದು. ಸ್ಥಳೀಯರು ಬೇರೆ ಸ್ಥಳಗಳ ಕಲೆಗಳನ್ನು ವೀಕ್ಷಿಸಿ ಸಂತೋಷಪಡಬಹುದಾಗಿದೆಯೆಂದರು.  ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಸಜ್ಜನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಪತ್ರಕರ್ತ ವೈ.ಬಿ. ಜೂಡಿ ಕಾರ್ಯಕ್ರಮ ನಿರ್ವಹಿಸಿದರು.  
  ಬುಡಕಟ್ಟು ಕಲಾವಿದರ ಹಕ್ಕಿ-ಪಿಕ್ಕಿ ನೃತ್ಯ ಪ್ರದರ್ಶನ ಕಾರ್ಯಕ್ರಮ ಮಾ. ೧೯ ರಂದು ಮಂಡಲಗಿರಿ, ೨೦ ರಂದು ಕುಕನೂರು ಮತ್ತು ಮಾ. ೨೧ ರಂದು ಮಂಗಳೂರು ಗ್ರಾಮದಲ್ಲಿ ನಡೆಯಲಿದೆ.

Advertisement

0 comments:

Post a Comment

 
Top