PLEASE LOGIN TO KANNADANET.COM FOR REGULAR NEWS-UPDATES


 ಡಾ.ಸಿ.ಎಸ್.ದ್ವಾರಕಾನಾಥ್

ಮೈಸೂರು, ಮಾ. 20: ರಾಜ್ಯ ಸರಕಾರ ಐದು ಮತ್ತು ಎಂಟನೆ ತರಗತಿಗಳ ಸಮಾಜ ವಿಜ್ಞಾನ ಪುಸ್ತಕವನ್ನು ಶೃಂಗೇರಿ ಪೀಠದ ಸ್ವಾಮೀಜಿಗಳಿಂದ ಬರೆಸಿದೆ. ಇದರಿಂದ ಶಿಕ್ಷಣ ತಜ್ಞರೊಬ್ಬರು ರೂಪಿಸಬೇಕಾದ ಪಠ್ಯ ಪುಸ್ತಕವನ್ನು ಸ್ವಾಮೀಜಿಯೊಬ್ಬರು ಮನುವಾದೀ ಕರಣಗೊಳಿಸಲು ಬಳಸಿಕೊಂಡಿದ್ದಾರೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರದಾನಾಥ್ ಆರೋಪಿ ಸಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಮಂಗಳ ವಾರ ಬಿವಿಎಸ್ ಹಮಿ ್ಮಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಎರಡು ಪಠ್ಯ ಪುಸ್ತಕ ಆರೆಸ್ಸೆಸ್ ನಾಯಕರ ಆಣತಿಯಂತೆ ರಚನೆ ಮಾಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇತಿಹಾಸ ತಜ್ಞರು ರಚನೆ ಮಾಡಬೇಕಾದ ಪುಸ್ತಕವನ್ನು ಶೃಂಗೇರಿ ಪೀಠದ ಸ್ವಾಮೀಜಿ ಅಂತಿಮಗೊಳಿಸಿ ದ್ದಾರೆ ಎಂಬ ಸಂಗತಿಯನ್ನು ಬಹಿರಂಗ ಪಡಿಸಿದರು.
ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರಾಗಿರುವ ಮುಡಬಡಂತಾಯ ಆರೆಸ್ಸೆಸ್‌ನ ಸಕ್ರಿಯ ಸದಸ್ಯ. ಅಲ್ಲದೆ ಇಡೀ ಸಮಿತಿಯಲ್ಲಿರುವ ಸದಸ್ಯರೂ ಆರೆಸ್ಸೆಸ್‌ನ ಜತೆ ನಿಕಟವಾಗಿ ಗುರುತಿಸಿ ಕೊಂಡವರು. ಇವರೆಲ್ಲಾ ಆ ಎರಡು ತರಗತಿ ಪಠ್ಯ ಪುಸ್ತಕದ ಇತಿಹಾಸವನ್ನು ವೈದಿಕ ಸಂಸ್ಕೃತಿಗೆ ಅನ್ವಯವಾಗುವಂತೆ ರೂಪಿಸುವ ಪಿತೂರಿ ಮಾಡಿ, ದೇಶದ ಮೂಲನಿವಾಸಿಗಳ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಹೊರಚೆಡ್ಡಿ !: ಸಂಘ ಪರಿವಾರದ ಸಹೋದರ ಪಕ್ಷ ದಂತಾ ಗಿರುವ ಕಾಂಗ್ರೆಸ್ ಇದುವರೆಗೆ ಇಂತಹ ಗಂಭೀರವಾಗಿರುವ ವಿಚಾರದ ಬಗ್ಗೆ ಚಕಾರವೆತುತ್ತಿಲ್ಲ. ಇದು ಆ ಪಕ್ಷದ ಮನೋಧರ್ಮವನ್ನು ಸೂಚಿಸುತ್ತದೆ. ಇನ್ನು ಜಾ.ದಳದ ನಾಯಕರಿಗೆ ಮನುವಾದೀಕರಣ ಮಾಡುತ್ತಿರುವ ಸಂಗತಿ ಗಹನವಾದುದಲ್ಲ ಎಂದು ಅನಿಸಿದೆ. ಆದ್ದರಿಂದ ಮನುವಾದಿಗಳು ತಾವು ಆಡಿದ್ದೇ ಆಟ ಎಂಬಂತೆ ರಾಜ್ಯವನ್ನು ಸಾಂಸ್ಕೃತಿಕವಾಗಿ ತಿರುಚಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಐದು ಮತ್ತು ಎಂಟನೆ ತರಗತಿಯ ಪಠ್ಯ ಪುಸ್ತಕದಲ್ಲಿ ಹಿಂದೂ ವೌಲ್ಯಗಳನ್ನು ಪ್ರತಿಬಿಂಬಿಸುತ್ತಿದ್ದೇವೆ ಎಂದು ಸಮ ರ್ಥನೆ ಮಾಡಿಕೊಂಡಿದ್ದರೆ ಸಹಿಸಿಕೊಳ್ಳ ಬಹುದಿತ್ತು. ಆದರೆ, ವೈದಿಕ ವೌಲ್ಯ ಗಳನ್ನು ಸಂಪ್ರದಾಯಗಳನ್ನು ಅಗತ್ಯವಾಗಿ ಹೇರಲು ಪ್ರಯತ್ನ ಮಾಡುತ್ತಿದ್ದಾರೆ. ಭಾಷೆ ಅಥವಾ ಮಕ್ಕಳ ಮನೋಸ್ಥಿತಿ ಅರಿಯದ ಶೃಂಗೇರಿ ಪೀಠದ ಸ್ವಾಮೀಜಿ ಪಠ್ಯ ಪುಸ್ತಕದ ವಿಷಯವನ್ನು ಅಂತಿಮ ಗೊಳಿಸುವ ದುಸ್ಥಿತಿ ಬಂದಿರುವುದು ಖೇದ ಕರ ಎಂದರು. ಚಿಕ್ಕವಯಸ್ಸಿನಲ್ಲಿಯೇ ವಿಷ ಬೀಜ ಬಿತ್ತುವ ಮನುವಾದಿಗಳು ಮನುಷ್ಯರೇ ಅಲ್ಲ ಎಂದು ಜರಿದ ದ್ವಾರಕಾನಾಥ್, ಅವೈಜ್ಞಾನಿಕವಾದ ಪಠ್ಯ ಪುಸ್ತಕಗಳನ್ನು ಸಮರ್ಥನೆ ಮಾಡಿಕೊಳ್ಳುವ ಸಚಿವ ಕಾಗೇರಿ ತಮ್ಮ ಸಂಘ ಪರಿವಾರದ ಅಜೆಂಡಾವನ್ನು ಚಾಚೂ ತಪ್ಪದೆ ಪಾಲಿಸಲು ಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಬಹುಸಂಖ್ಯಾತ ಶೂದ್ರ ವರ್ಗಗಳು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗಿದೆ ಎಂದರು.
ಸುಳ್ಳು ಸಿದ್ಧಾಂತ: ಎರಡು ಪಠ್ಯ ಪುಸ್ತಕದಲ್ಲಿ ಬರುವ ಒಂದೇ ವಿಷಯದ ಬಗ್ಗೆ ಅನೇಕ ಸುಳ್ಳುಗಳನ್ನು ಹೇಳಲಾಗಿದೆ. ಇತಿಹಾಸ ತಿಳಿದಿರುವವರಿಗೆ ಈ ಸುಳ್ಳು ಸಿದ್ಧಾಂತ ತಕ್ಷಣ ಅರ್ಥವಾಗುತ್ತದೆ. ಇಂತಹ ಸುಳ್ಳುಗಳ ಮೂಲಕವೇ ಮಕ್ಕಳ ಮನಸ್ಸನ್ನು ಕೆರಳಿಸುವ ಮತ್ತು ಹಿಂದೂ ಎಂದರೆ ವೈದಿಕ ಮಾತ್ರ ಎಂಬ ಸಂಗತಿಯನ್ನು ರುಜುವಾತು ಮಾಡುವ ಯತ್ನ ಮಾಡಲಾಗಿದೆ ಎಂದು ದ್ವಾರಕಾನಾಥ್ ಹೇಳಿದರು.
ಮೊದಲು ಸುಟ್ಟು ಹಾಕಿ: ಬಿಜೆಪಿ ಸರಕಾರಕ್ಕೆ ಈ ದೇಶದ ಸಂಸ್ಕೃತಿ ಮತ್ತು ಘನತೆಯ ಗೌರವವಿದ್ದರೆ ಕೂಡಲೇ ಎರಡೂ ಪಠ್ಯ ಪುಸ್ತಕ ಹಿಂದಕ್ಕೆ ತೆಗೆದು ಕೊಂಡು ಸುಟ್ಟು ಹಾಕಬೇಕು ಎಂದು ಒತ್ತಾಯಿಸಿದ ದ್ವಾರಕನಾಥ್, ಆರೆಸ್ಸೆಸ್ ನಾಮಾಂಕಿತರನ್ನು ಸಮಿತಿಯಿಂದ ಕೈಬಿಟ್ಟು ಹೊಸ ಸಮಿತಿಯ ಮೂಲಕ ಪಠ್ಯ ಪುಸ್ತಕ ರಚನೆಗೆ ಮುಂದಾಗಿ ಎಂದು ಆಗ್ರಹಿಸಿದರು.
ನೀಲಿಚಿತ್ರ ಸೇರಿದಂತೆ ಅನಗತ್ಯ ವಿಚಾರಗಳನ್ನು ಚರ್ಚೆ ಮಾಡಲು ಸದನ ಬಳಸಿಕೊಳ್ಳುವ ಕಾಂಗ್ರೆಸ್ ಮತ್ತು ಜಾ.ದಳ ಮೊದಲು ಸಂಘ ಪರಿವಾರದ ಇಂತಹ ಹೊಣಗೇಡಿತನಗಳ ಕುರಿತು ಚರ್ಚೆ ನಡೆಸಲಿ. ರಾಜ್ಯದ ಲಕ್ಷಾಂತರ ಮಕ್ಕಳು ಮನಸ್ಸನ್ನು ಕೆಡಿಸುವ ಪಿತೂರಿ ಮಾಡುತ್ತಿರುವ ಬಿಜೆಪಿ ಸರಕಾರದ ಹುನ್ನಾರವನ್ನು ಬಯಲಿಗೆ ತರುವ ಕೆಲಸ ಮಾಡಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತಿಹಾಸ ಪ್ರಾಧ್ಯಾಪಕ ಕೆ.ಸದಾಶಿವ, ನಿವೃತ್ತ ಪ್ರಾದ್ಯಾಪಕ ಕೆ.ಎಸ್. ಭಗವಾನ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಂದ್ರ, ಬಿವಿಎಸ್ ಮಹಾರಾಜ ಕಾಲೇಜು ಘಟಕದ ಅಧ್ಯಕ್ಷ ಕಿರಣಕುಮಾರ್ ಇದ್ದರು.

Advertisement

0 comments:

Post a Comment

 
Top