PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ : ರಾಮದಾಸ್,ತೇಜಸ್ವಿ,ಲಂಕೇಶ್ ಇಡೀ ಸಾಹಿತ್ಯಿಕ, ರಾಜಕೀಯ ವ್ಯವಸ್ಥೆಯನ್ನೆ ಪಲ್ಲಟಗೊಳಿಸಿದಂತಹ ವ್ಯಕ್ತಿಗಳು. ಲಂಕೇಶ್ ಒಂದು ಶಕ್ತಿಯಾಗಿ ಬೆಳೆದು ಬಂದವರು. ಯಾವುದೇ ಮುಲಾಜಿಗೆ ಒಳಗಾಗದೇ ಬರೆದು, ಬದುಕಿದಂತಹ ವ್ಯಕ್ತಿ. ಅವರ ಲಂಕೇಶ್ ಪತ್ರಿಕೆ ಕರ್ನಾಟಕ ಪತ್ರಿಕೋದ್ಯಮದ ಇತಿಹಾಸವನ್ನೇ ಬದಲಿಸಿತು ಎಂದು ಹಿರಿಯ ಪತ್ರಕರ್ತ,ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ  ಪ್ರವಾಸಿ ಮಂದಿರದ ಎದುರಿನ ಈಶ್ವರ ದೇವಸ್ಥಾನದ ಅಂಗಳದಲ್ಲಿ ಹಮ್ಮಿಕೊಂಡಿದ್ದ ೯೬ನೇ ಕವಿಸಮಯ ಕಾರ‍್ಯಕ್ರಮದಲ್ಲಿ ಲಂಕೇಶ್‌ರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ "ಲಂಕೇಶರ ಕಥಾವಾಚನ" ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು. 
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮ ಛಾಪು ಮೂಡಿಸಿದ, ಚಿತ್ರರಂಗದಲ್ಲೂ ತನ್ನತನ ಮೆರೆದ ಹಾಗೂ ಪತ್ರಿಕೋದ್ಯಮದಲ್ಲಿ ಹೊಸ ದಾಖಲೆ ಬರೆದ ಲಂಕೇಶ್ ರಂತಹ ವ್ಯಕ್ತಿ ಇನ್ನೊಬ್ಬರಿಲ್ಲ. ಅವರದು ಅಗಾಧ ಪ್ರತಿಭೆ ಕೈಹಾಕಿದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ ವ್ಯಕ್ತಿ ಲಂಕೇಶ್ ಒಂದು ಪೀಳಿಗೆಯನ್ನೇ ಪ್ರಭಾವಿಸಿದವರು ಎಂದು ಹೇಳಿದರು. ನಂತರ ಲಂಕೇಶ್ ರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಇದಕ್ಕೂ ಮೊದಲು ಲಂಕೇಶ್ ರ ’ಮುಟ್ಟಿಸಿಕೊಂಡವನು’ ಕತೆಯನ್ನು ಎನ್.ಜಡೆಯಪ್ಪ ವಾಚನ ಮಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ  ಬಸವರಾಜ ಸಂಕನಗೌಡರ-ಅನ್ವೇಷಣೆ, ವೀರಣ್ಣ ಹುರಕಡ್ಲಿ-ನೇಗಿಲ ಯೋಗಿ, ಸಿರಾಜ್ ಬಿಸರಳ್ಳಿ-ಲಂಕೇಶ್, ಡಾ.ಬಸವರಾಜ (ಕುಂಪಾ) ವ್ಯಕ್ತಿತ್ವದ ಬೆಲೆ,ಗುರುರಾಜ ದೇಸಾಯಿ-ಹೇಸರಗತ್ತೆ, ಶಿವಪ್ರಸಾದ ಹಾದಿಮನಿ-ಕವನ, ಶಿವನಗೌಡ  ಹಲಗೇರಿ- ನೇಗಿಲಯೋಗಿ, ರಾಜೇಶ-ಬರಲಿ ಹೊಸ ವರುಷ ಮರಳಿ,ಡಾ.ರೇಣುಕಾ ಕರಿಗಾರ- ವೆನ್ ಐ ಮಿಸ್ಡ್, ಆದರೆ., ಅನಸೂಯಾ ಜಾಗೀರದಾರ- ಈ ಬದುಕು, ಪುಷ್ಪಲತಾ ಏಳುಬಾವಿ- ಆಸೆ, ಚಂದ್ರ, ಶಾಂತಾದೇವಿ ಹಿರೇಮಠ -ಜೀವನ ಕುರುವತ್ತಿಗೌಡ್ರ- ನೆರಳು, ಎನ್.ಜಡೆಯಪ್ಪ- ನಿನ್ನಯ ನೆನಪು, ಬಸವರಾಜ ಚೌಡ್ಕಿ- ಓಕುಳಿ, ವಿಜಯಲಕ್ಷ್ಮೀ ಮಠದ - ಪಬ್ ಸಂಸ್ಕೃತಿ, ಆಹುತಿ, ಲಲಿತಾ ಭಾವಿಕಟ್ಟಿ - ನೀಲಿ ಚಿತ್ರ ಕಥೆ,ನಟರಾಜ ಸವಡಿ-ಬಾಲಕಾರ್ಮಿಕ, ಮನಸ್ಸು, ಅಲ್ಲಮಪ್ರಭು ಬೆಟ್ಟದೂರು- ಬೆಳಕು ಬೆಳಕಾಗಿ ಉಳಿಯಲಿಲ್ಲ, ಎಸ್.ಎಂ.ಕಂಬಾಳಿಮಠ- ಮಾತು ಮನಸ್ಸು, ಪ್ರಮೋದ- ಎಲ್ಲಿಯ ನರಹರಿ  ಕವನಗಳನ್ನು ವಾಚನ ಮಾಡಿದರು.
ಕಾರ‍್ಯಕ್ರಮದಲ್ಲಿ ಹನ್ಮಂತಪ್ಪ ಅಂಡಗಿ,ರಾಜಶೇಖರ ಅಂಗಡಿ,ಕೃಷ್ಣಪ್ಪ ಸಂಗಟಿ, ಮಹೇಶ ಬಳ್ಳಾರಿ,ಶಿವಾನಂದ ಹೊದ್ಲೂರ, ಡಾ.ಮಹಾಂತೇಶ ಮಲ್ಲನಗೌಡರ,ಸುಭಾನ್ ಮತ್ತಿತರರು ಉಪಸ್ಥಿತರಿದ್ದರು. ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪಡೆದ ವಿಮಲಾ ಇನಾಂದಾರ್ ರಿಗೆ ಕವಿಸಮೂಹದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಸ್ವಾಗತವನ್ನು ಶಿವಪ್ರಸಾದ ಹಾದಿಮನಿ, ವಂದನಾರ್ಪಣೆಯನ್ನು ಬಸವರಾಜ್ ಸಂಕನಗೌಡರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಡೆಸಿಕೊಟ್ಟರು. 

Advertisement

0 comments:

Post a Comment

 
Top