ಕೊಪ್ಪಳ: ದಲಿತ ಬಂಡಾಯ ಸಾಹಿತ್ಯವೆಂಬುದು ಐತಿಹಾಸಿಕ ಉತ್ಪಾದನೆ ಹಾಗೂ ಐತಿಹಾಸಿಕ ಪ್ರಕ್ರಿಯೆ. ಅದೊಂದು ಮನೋಧರ್ಮ.ಅದರ ಹಿಂದೆ ಸಾಮಾಜಿಕ ನ್ಯಾಯ, ನೈತಿಕತೆ, ಒತ್ತಡಗಳು ಎಂಬ ಅಂಶಗಳು ಕೂಡಿಕೊಂಡಿರುತ್ತವೆ. ದಲಿತ ಬಂಡಾಯ ಸಾಹಿತ್ಯವನ್ನು ಓದುವಾಗ ವಸ್ತುವಿನ ಸ್ವರೂಪ,ಆಶಯ,ಭಾಷಿಕ ಶೈಲಿ ನಿರೂಪಣೆ,ಕಲಾತ್ಮಕತೆ ಮೊದಲಾದ ಸ್ವರೂಪ ಈ ಎಲ್ಲ ಅಂಶಗಳನ್ನು ಹೊಂದಿರುತ್ತದೆ. ಜೊತೆಗೆ ಈ ಸಾಹಿತ್ಯವು ಸಮಕಾಲೀನ ವಿಷಯ ಸಮಕಾಲೀನ ಸಮಸ್ಯಗಳಿಗೆ ಸ್ಪಂದಿಸುತ್ತಾ ಬಂದಿರುತ್ತದೆ. ಈ ಸಾಹಿತ್ಯಕ್ಕೆ ಸಮಾಜ ಬದಲಾವಣೆ ಮಾಡುವ ಶಕ್ತಿ ಇರುತ್ತದೆ. ಅಸಮಾನತೆ,ಶೋಷಣೆ,ಹಸಿವು,ತುಳಿತಕ್ಕೆ ಒಳಗಾದವರ ನೋವಿಗೆ ಧ್ವನಿ ಕೊಡುವ ಆ ಮೂಲಕ ಸಾಮಾಜಿಕ ನ್ಯಾಯ ನಿರೂಪಣೆ ಮಾಡುವಂತಹ ಸತ್ವ ದಲಿತ ಬಂಡಾಯ ಸಾಹಿತ್ಯ ಹಾಗೂ ಸಂಘಟನೆಗೆ ಇದೆ ಎಂದು ಕನ್ನಡ ವಿ.ವಿ ಪ್ರಾಧ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಅವರು ನಗರದ ಶ್ರಿಗವಿಸಿದ್ಧೇಶ್ವರ ಪದವಿಮಹಾವಿದ್ಯಾಲಯದಲ್ಲಿ ಆಯೀಜಿಸಿದ ರಾಜ್ಯಮಟ್ಟದ ದಲಿತ ಬಮಡಾಯ ಸಾಹಿತ್ಯದ ಸ್ವರೂಪ ಈ ವಿಚಾರ ಸಂಕಿರಣದಲ್ಲಿ ಮಾರ್ಮಿಕವಾಗಿ ಮಾತನಾಡಿದರು.ಇದಕ್ಕು ಮುನ್ನ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎಂ.ವಿ.ಪಾಟೀಲ ಈ ವಿಚಾರಸಂಕಿರಣ ಉದ್ಘಾಟಿಸಿ ಈನೆಲವು ಸಾಹಿತ್ಯ,ಸಂಸ್ಕೃತಿ,ಸಂಗೀತ ಈಕಲೆಗಳ ತವರುಮನೆಯಾಗಿದೆ ಎಂದು ಮಾತನಾಡುತ್ತಾ ಈ ಭಾಗವು ಶೈಕ್ಷಣಿಕವಾಗಿ,ಆರ್ಥಿಕವಾಗಿ ಹಿಂದುಳಿದಿದೆ ಎಂಬ ವಿಷಾದವನ್ನು ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಡಾ.ಬಸವರಾಜ ಪೂಜಾರ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಲ್.ಮಾಲಿಪಾಟೀಲ ವಹಿಸಿ ಮಾತನಾಡಿದರು. ಇದಾದ ನಂತರ ನಾಡಿನ ಪ್ರಮುಖ ಉಪನ್ಯಾಸಕರು ತಮ್ಮ ಉಪನ್ಯಾಸವನ್ನು ಮಂಡಿಸಿದರು. ಸಂಜೆ ಸಮಾರೋಪ ಕಾರ್ಯಕ್ರಮ ಜರುಗಿತು. ಸ್ವಾಗತ ಡಾ.ಪಿ.ವಿ.ಪೂಜಾರ,ಪ್ರಾಸ್ತಾವಿಕ ಡಾ.ಬಸವರಾಜ ಪೂಜಾರ,ನಿರೂಪಣೆ ಶರಣಬಸಪ್ಪ, ವಂದನಾರ್ಪಣೆ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ನೆರವೇರಿಸಿದರು.
Home
»
»Unlabelled
» ದಲಿತ ಸಾಹಿತ್ಯಕ್ಕೆ ಸಮಾಜ ಬದಲಾವಣೆ ಮಾಡುವ ಶಕ್ತಿ ಇರುತ್ತದೆ. ಡಾ.ಬಿ.ಎಂ.ಪುಟ್ಟಯ್ಯ
Subscribe to:
Post Comments (Atom)
0 comments:
Post a Comment