PLEASE LOGIN TO KANNADANET.COM FOR REGULAR NEWS-UPDATES


ಹುಬ್ಬಳ್ಳಿಯಲ್ಲಿ ಸಭೆ- ನಿರ್ಧಾರ ಅಚಲ:ರೈಲ್ವೆ ಗೇಟ್- ಮೇಲ್ಸೇತುವೆ

ಕೊಪ್ಪಳ: ಈಗಾಗಲೇ ಮಂಜೂರಾಗಿರುವಂತೆ ಇಲ್ಲಿನ ರೈಲ್ವೆ ಗೇಟ್ ನಂ. 62ರಲ್ಲಿಯೇ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಬುಧವಾರ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ರೈಲ್ವೆ ಗೇಟ್ ನಂ. 64ರಲ್ಲಿ ಈ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಈಚೆಗೆ ಕೆಲ ಸಂಘಟನೆಗಳು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಸೇತುವೆ ಎಲ್ಲಿ ನಿರ್ಮಿಸಬೇಕು ಎಂಬ ವಿಷಯ ಕಗ್ಗಂಟಾಗಿತ್ತು. 
ಒಂದು ಹಂತದಲ್ಲಿ ರಾಜಕೀಯವಾಗಿ ಪ್ರತಿಷ್ಠೆಯ ವಿಷಯವಾಗಲಿದ್ದ ಈ ವಿಷಯಕ್ಕೆ ಇಂದು ನಡೆದ ಸಭೆಯಲ್ಲಿ ತೀರ್ಮಾನ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ದೂರವಾಣಿ ಮೂಲಕ `ಪ್ರಜಾವಾಣಿ`ಯೊಂದಿಗೆ ಮಾತನಾಡಿದ ಸಂಸದ ಶಿವರಾಮಗೌಡ, ರೈಲ್ವೆ ಗೇಟ್ ನಂ. 62ರಲ್ಲಿ ರೈಲ್ವೆ ಮೇಲ್ಸೇತುವೆ  (ಆರ್‌ಒಬಿ) ನಿರ್ಮಿಸುವ ಜೊತೆಗೆ ಉಳಿದ ಗೇಟ್‌ಗಳಲ್ಲಿ ಈಗಿರುವ ಮಾನವ ಚಾಲಿತ ಲೆವೆಲ್ ಕ್ರಾಸಿಂಗ್ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಲು ಸಭೆ ತೀರ್ಮಾನಿಸಿತು ಎಂದು ಹೇಳಿದರು.

ಆರ್‌ಒಬಿ ನಿರ್ಮಿಸಿದಾಗ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದಾಟಿ ರಾಷ್ಟ್ರೀಯ ಹೆದ್ದಾರಿ 63ರ ವರೆಗೆ ಫ್ಲೈಓವರ್ ನಿರ್ಮಿಸಬೇಕಾಗುತ್ತದೆ. ಈ ಉದ್ದೇಶಕ್ಕೆ ಬೇಕಾಗುವ ಜಾಗೆಗಾಗಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆಯೂ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.

ಅಲ್ಲದೇ, ಆರ್‌ಒಬಿ ನಿರ್ಮಾಣ ಈಗಾಗಲೇ 6.53 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಈಗ ಕಾಮಗಾರಿ ವೆಚ್ಚದಲ್ಲಿ ಹೆಚ್ಚಳವಾಗಲಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ತಗಲುವ ರಿಷ್ಕೃತ ವೆಚ್ಚವನ್ನು ಅಂದಾಜಿಸುವಂತೆಯೂ ರೈಲ್ವೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಜಿಲ್ಲೆ ಹಾಗೂ ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ರೈಲ್ವೆ ಕಾಮಗಾರಿಗಳು, ಒದಗಿಸಬೇಕಾದ ಸೌಲಭ್ಯಗಳ ಕುರಿತಂತೆ ಸಹ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು pvnews

Advertisement

0 comments:

Post a Comment

 
Top