PLEASE LOGIN TO KANNADANET.COM FOR REGULAR NEWS-UPDATES

ರಾಜ್ಯ ಸರ್ಕಾರ ೨೦೧೨ರ ಬಜೆಟ್‌ನಲ್ಲಿ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಮನವಿ.

 
ಕೊಪ್ಪಳ ಜಿಲ್ಲೆಯಲ್ಲಿ ಬರಗಾಲದ ಪರಿಣಾಮಕ್ಕೆ ಅನೇಕರು ಗುಳೆ ಹೋಗಿದ್ದಾರೆ. ದನ ಕರುಗಳಿಗೆ ಮೇವಿನ ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ. ಅಧಿಕಾರಿಗಳು ನೀಡುವ ಸುಳ್ಳು ವರದಿಗಳನ್ನು ನಂಬದೆ ಜಿಲ್ಲೆಯ ಹಳ್ಳಿಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಉಪ ಚುನಾವಣೆಗೆಂದು ಕೊಪ್ಪಳಕ್ಕೆ ಭೇಟಿ ನೀಡಿದ್ದ ತಾವು ಅನೇಕ ಭರವಸೆಗಳನ್ನು ನೀಡಿ ಜನರಿಂದ ಅಧಿಕ ಮತಗಳನ್ನು ಪಡೆಯುವ ಮೂಲಕ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದೀರಿ, ಮಾದರಿ ಕ್ಷೇತ್ರ ಮಾಡುವದಾಗಿ ಹೇಳಿದ್ದ ತಾವು ಕೊಪ್ಪಳಕ್ಕೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೀರಿ. ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆಗಳು, ಮೆಡಿಕಲ್ ಇಂಜಿನಿಯರಿಂಗ್ ಕಾಲೇಜುಗಳು, ಪಿ.ಜಿ.ಸೆಂಟರ್, ಹಿರೇಹಳ್ಳ ಯೋಜನೆ ಎತ್ತರಿಸುವ ಕೆಲಸ, ಕೃಷ್ಣ ಬಿ.ಸ್ಕೀ, ನಗರದ ಬೈಪಾಸ ರಸ್ತೆ, ನಿವೇಶನ ಹೊಂದಿದ ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡುವ ಸಾಲದ ನಮ್ಮ ಮನೆ ಯೋಜನೆ ವಾಜಪೇಯಿ ನಗರ ಆಶ್ರಯ ಯೋಜನೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಅಂದ ಮೇಲೆ ನಿವೇಶನ ಮತ್ತು ಮನೆ ಕೊಡುವ ಯೋಜನೆಯ ಮಾತು ಎಲ್ಲಿ? ಹೊಲ ಖರೀದಿಯಲ್ಲಿ ಒಂದು ವರ್ಷವಾದರೂ ಪೂರ್ಣವಾಗಿಲ್ಲ, ಇದು ಸರ್ಕಾರದ ದೌರ್ಬಲ್ಯ.
ಕುಡಿಯವ ನೀರು ಪೂರೈಕೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಮಳೆಗಾಲದಲ್ಲಿ ನಾಲ್ಕು ದಿನಕ್ಕೂಮ್ಮೆ ನೀರು ಪೂರೈಕೆಯಾಗತಿತ್ತು. ಈಗ ಐದು-ಆರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಅದೂ ಸಹ ಒಂದು ತಾಸು ಮಾತ್ರ ನೀರು ಪೂರೈಕೆ ಮಾಡುತ್ತಿದೆ. ತಾವು ಹೇಳಿದ ಪ್ರಕಾರ ಮಾದರಿ ಕ್ಷೇತ್ರವೆಂದರೆ ಇದೇನಾ? ವಿದ್ಯುತ್ ಸಮಸ್ಯೆ ಸಹ ವಿಪರಿತವಿದ್ದು, ಯಾವ ಸಮಸ್ಯೆಗಳು ತಾವು ಬಗೆಹರಿಸಲು ಪ್ರಯತ್ನಿಸಿಲ್ಲ. ಇನ್ನೂ ಮುಂದೆ ತಾವು ಮಂಡಿಸಿಲಿರುವ ೨೦೧೨-೧೩ರ ಬಜೆಟ್‌ನಲ್ಲಿ ನಮ್ಮ ಕೊಪ್ಪಳ ಜಿಲ್ಲೆಗೆ ಮೊದಲ ಆದತೆ ನೀಡಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೊಪ್ಪಳ ತಹಶೀಲ ಕಾರ್ಯಾಲಯಾದ ಎದುರಿಗೆ ಧರಣಿ ನಡೆಸಿ ಮನವಿ ಸಲ್ಲಿಸಲಾಗಿದೆ. ತಾವು ಕೊಪ್ಪಳ ಜಿಲ್ಲೆಗೆ ಇದೇ ರೀತಿ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ ಎಂದು ಕೊಪ್ಪಳ ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಸಾಮೂಹಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇಂದು ನಡೆದ ಧರಣೆಯಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬಸವರಾಜ ಶೀಲವಂತರ್, ಭಾರತ ಕಮ್ಯೂನಿಸ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎ.ಗಫಾರ್, ಅಖಿಲ ಭಾರತ ಯುವಜನ  ಒಕ್ಕೂಟದ ಜಿಲ್ಲಾ ಸಂಚಾಲಕರಾದ ಗಾಳೆಪ್ಪ ಮುಂಗೋಲಿ, ಅಖಿಲ ಭಾರತ ಕಿಸಾನ ಸಭಾದ ಜಿಲ್ಲಾ ಸಂಚಾಲಕರಾದ ನನ್ನು ಸಾಬ ನೀಲಿ, ಆಟೋ ಯುನಿಯನ್ ಮುಖಂಡರಾದ ಮಖಬೂಲ ರಾಯಚೂರ, ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಫರೀದ್ ಎಸ್. ಮಾಳೆಕೊಪ್ಪ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ರಮೇಶ ಚಿಕೇನಕೊಪ್ಪ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖಂಡರಾದ ಶಿವಪ್ಪ ಹಡಪದ, ಬಿಸಿಯೂಟ ತಯಾರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಪುಷ್ಪಾ ಮೇಸ್ತ್ರಿ, ಪೂರ್ಣಿಮಾ, ರಸೂಲ್‌ಬೀ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೋದ್ಲೂರ್, ಅಖಿಲ ಭಾರತ ವಿಧ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಮೊಹಮ್ಮದ್ ಗೌಸ್ ನೀಲಿ ಮುಂತಾದವರು ನೇತ್ರತ್ವ ವಹಿಸಿದ್ದರು. 



೨೦೧೨ರ ರಾಜ್ಯ ಬಜೆಟ್‌ನಲ್ಲಿ ಈಡೇರಿಸಬೇಕಾದ ಬೇಡಿಕೆಗಳು :
ಸಿಂಗಟಾಲೂರ ಏತ ನೀರಾವರಿ ಯೋಜನೆ ಸಮರ್ಪಕ ಜಾರಿಗೆ ಬರಲಿ.
ಕೃಷ್ಣ ಬಿ.ಸ್ಕೀಂ ತೀವ್ರವಾಗಿ ಜಾರಿಯಾಗಬೇಕು.
ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು, ಪಿ.ಜಿ.ಸೆಂಟರ್, ಆರಂಭಿಸಲು ಬಜೆಟ್‌ನಲ್ಲಿ ಸೇರಿಸಬೇಕು.
ಬೈಪಾಸ ರಸ್ತೆಗೆ ತುರ್ತು ಕ್ರಮ ಕೈಗೊಳ್ಳಬೇಕು.
ನಿವೇಶನ ಹೊಂದಿದವರಿಗೆ ನಮ್ಮ ಮನೆ ವಾಜಪೇಯಿ ನಗರ ಆಶ್ರಯ ಯೋಜನೆ ತಕ್ಷಣ ಜಾರಿಗೆ ಬರಬೇಕು.
ನಗರದಲ್ಲಿ ಪ್ರತಿದಿನ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
ಬರಪೀಡಿತ ಪ್ರದೇಶಗಳ ರೈತರ ಸಾಲ ಮನ್ನ ಮಾಡಿ ವಿಶೇಷ ಪರಿಹಾರ ಪ್ಯಾಕೇಜ ಘೋಷಿಸಬೇಕು.
ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನ ಹಾಗೂ ಒತ್ತುವರಿ ನೆಪದಲ್ಲಿ ಬಡರೈತರ ತೆರವು ಕ್ರಮಗಳನ್ನು ಕೈಬಿಟ್ಟು ಕಾರ್ಯ ಸಾಧುವಾದ ವೈಜ್ಙಾನಿಕ ನೀತಿ ಅನುಸರಿಸಬೇಕು.
ಕೇರಳ, ಮಹಾರಾಷ್ಟ್ರಾದಲ್ಲಿರುವಂತಹ ರೈತರ ಪೆನ್‌ಶನ್ ಜಾರಿಗೆ ತಂದು ೬೦ ವರ್ಷ ಮೀರಿದ ಎಲ್ಲಾ ರೈತರಿಗೂ ತಲಾ ೨ ಸಾವಿರ ಮಾಸಿಕ ಪೆನ್‌ಶನ್ ನೀಡಬೇಕು.
ಅಸಂಘಟಿತ ಕಾರ್ಮಿಕರೆಲ್ಲರಿಗೂ ಜೀವನಾವಶ್ಯಕ್ಕಾಗಿ ಕನಿಷ್ಠ ವೇತನ ಮಾಸಿಕ ೧೦ ಸಾವಿರ ನಿಗಧಿಪಡಿಸಬೇಕು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸರ್ಕಾರ ಹೆಚ್ಚಿನ ಸಂಖ್ಯೆಯ ನಿವೇಶನ, ವಸತಿ ಯೋಜನೆಗೆ ಹೆಚ್ಚಿನ ಅನುದಾನಗಳನ್ನು ಆದ್ಯತೆ ಮೇಲೆ ನೀಡಬೇಕು.
ರಾಜ್ಯದ ವಿದ್ಯುತ್ ಅಭಾವ ನೀಗಿಸಲು ಆಧ್ಯತೆ ಮೇಲೆ ತುರ್ತು ಕಾರ್ಯಯೋಜನೆ ರೂಪಿಸಿ, ವಿದ್ಯುತ್ ಸೋರಿಕೆ, ಕಳ್ಳತನ ದುರ್ಬಳಕೆಗೆ ಕಡಿವಾಣ ಹಾಕಿ ಉತ್ಪಾದನೆ ಹೆಚ್ಚಿಸುವ ಶಾಶ್ವತ ಯೋಜನೆ ಹಮ್ಮಿಕೊಳ್ಳಬೇಕು, ಪರ್ಯಾಯ ಇಂಧನಕ್ಕೆ ಆಧ್ಯತೆ ನೀಡಬೇಕು.
ವೈಜ್ಙಾನಿಕವಾಗಿ ಬಿ.ಪಿ.ಎಲ್. ಫಲಾನುಭವಿಗಳ ಪಟ್ಟಿ ಪರಿಷ್ಕರಿಸಿ ಅರ್ಹರೆಲ್ಲರಿಗೂ ಪಡಿತರ ಚೀಟಿ ನೀಡಿ ಆಹಾರ ವಸ್ತು ವಿತರಿಸಬೇಕು.
ಸುಪ್ರೀಂಕೋರ್ಟ್ ಉನ್ನತಾಧಿಕಾರಿ ಸಮಿತಿಯ ಶಿಫಾರಸ್ಸಿನಂತೆ ಅಕ್ರಮ ಗಣಿಗಾರಿಕೆಯಿಂದ ಉಂಟಾದ ಪರಿಸರ ನಾಶ ಮತ್ತು ಸಾಗಾಣಿಕೆ ಮಾಡಿದ ಎಲ್ಲಾ ರಸ್ತೆಗಳ ದುರಸ್ತಿ ವೆಚ್ಚಗಳನ್ನು ಗಣಿ ಮಾಲಿಕರಿಂದ ದಂಡ ರೂಪದಲ್ಲಿ ಭರಿಸಿ ಮತ್ತು ಅದಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು.
ಅಕ್ರಮ ಗಣಿಗಾರಿಕೆ ಬಗ್ಗೆ ನ್ಯಾ: ಸಂತೋಷ ಹೆಗ್ಡೆ ನೀಡಿರುವ ಲೋಕಾಯುಕ್ತ ವರದಿ ಜಾರಿಗೆ ತಂದು ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಬೇಕು.
ರಾಜ್ಯ ಸರ್ಕಾರ ಕೂಡಲೇ ಲೋಕಾಯುಕ್ತ ಹುದ್ದೆಗೆ ಸಮರ್ಥ, ಕಳಂಕರಹಿತ ನ್ಯಾಯಾಧೀಶರೊಬ್ಬರ ನೇಮಕಕ್ಕೆ ಮುಂದಾಗಬೇಕು ಮತ್ತು ಲೋಕಾಯುಕ್ತ ಸಂಸ್ಥೆ ಮತ್ತು ವಿಶೇಷ ನ್ಯಾಯಾಲಯದಲ್ಲಿ ಖಾಲಿ ಇರುವ ಎಲ್ಲಾ ಹಂತದ ಹುದ್ದೆಗಳನ್ನು ಭರ್ತಿ ಮಾಡಬೇಕು.
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದ್ದು ಇದರ ಬಗ್ಗೆ ಸರ್ಕಾರ ಕ್ರಮಕೈಗೊಳ್ಳದಿರುವುದು ಜನವಿರೋಧಿ ಕ್ರಮವಾಗಿದೆ. ಸರ್ಕಾರದ ಬಜೆಟ್‌ನಲ್ಲಿ ಆಸ್ಪತ್ರೆಗಳ ಅಭಿವೃದ್ಧಿ, ಔಷಧಿಗಳ ಖರೀದಿ ಮತ್ತು ವೈದ್ಯರ ನೇಮಕಾತಿಗೆ ವಿಶೇಷ ಆದ್ಯತೆ ನೀಡಿ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಲು ಆಗ್ರಹಿಸುತ್ತೇವೆ.
 

Advertisement

0 comments:

Post a Comment

 
Top