ಪೋಸ್ಕೊ ಕಂಪನಿಯು ಈಗಾಗಲೇ ಗದಗ ಜಿಲ್ಲೆಯಲ್ಲಿ ಕಾರ್ಖಾನೆ ಸ್ಥಾಪನೆಗೆ ಮುಂದಾಗಿತ್ತು. ಗದಗ ಜಿಲ್ಲೆಯ ರೈತರು ಹಾಗೂ ಅನ್ನದಾನೇಶ್ವರ ಮಹಾಸ್ವಾಮಿಗಳು ಹಾಗೂ ತೊಂಟದಾರ್ಯ ಮಹಾಸ್ವಾಮಿಗಳು ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟದದಿಂದ ಮುಖಭಂಗವಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ, ತಳಕಲ್, ತಳಬಾಳ, ನಿಂಗಾಪೂರ, ಬನ್ನಿಕೊಪ್ಪ, ಮನ್ನಾಪೂರ, ಗ್ರಾಮಗಳ ಫಲವತ್ತಾದ ೪ ಸಾವಿರ ಎಕರೆ ಭೂಮಿಯನ್ನು ರೈತರ ಗಮನಕ್ಕೆ ತರದೆ ವಸಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದು ಸರ್ಕಾರ ಕೂಡ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ವಶಪಡಿಸಿಕೊಂಡು ಬಹುರಾಷ್ಟ್ರಿಯ ಕಂಪನಿಗೆ ನೆಲ. ಜಲ ಸಂಪತ್ತನ್ನು ನೀಡಿದ್ದು.
ಈಗಾಗಲೇ ಕೊಪ್ಪಳ ಜಿಲ್ಲೆಯ ೧೦೦ ಕ್ಕೂ ಹೆಚ್ಚು ಎಮ್.ಎನ್.ಸಿ. ಕಂಪನಿಗಳು ಸ್ಥಾಪನೆಗೊಂಡು ರೈತರನ್ನು ಬಿದಿಗೆ ಬರುವ ಹಾಗೆ ಮಾಡಿದೆ. ಇಲ್ಲಿನ ರಾಜಕಾರಣಿಗಳು ತಮ್ಮ ಹಿತಾಸಕ್ತಿಗೆ ರೈತರನ್ನು ಬಲಿಕೊಡುತ್ತಿರುವುದನ್ನು ನೊಡಿದರೆ ಮುಂದಿನ ದಿನಗಳಲ್ಲಿ ಎಲ್ಲರು ಅನ್ನಕ್ಕಾಗಿ ಪರಿತಪಿಸುವಂತಾಗುವುದರಲ್ಲಿ ಸಂದೇಹವೇ ಇಲ್ಲ ಈಗಾಗಲೇ ಇರುವ ಅಲ್ಪಸ್ವಲ್ಪ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರ ಬೆಳೆಗಳ ಮೇಲೆ ಕಾರ್ಖಾನೆಗಳಿಂದ ರಾಶಾಯನಿಕ ಮಿಶ್ರಿತ ಭೂಮಿ ದೂಳಿನಿಂದ ಬೆಳೆಬರಲಾರದ ಪರಿಸ್ಥಿತಿಯಿಂದ ರೈತರು ಗುಳೆ ಹೊರಟಿದ್ದಾರೆ. ಹಾಗೂ ಕಾರ್ಖಾನೆಗಳಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಇಂತಹ ಪರಸ್ಥಿತಿ ಯಲಬುರ್ಗಾ ತಾಲೂಕಿನ ರೈತರಿಗೂ ಪರಸ್ಥಿತಿ ಬರುವುದು ಬೇಡ, ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಪೋಸ್ಕೊಗೆ ಭೂಮಿ ಕೊಡಬಾರದಂದೆ ಇದರ ವಿರುದ್ದ ಎಲ್ಲಾ ರೈತರು ಪ್ರಗತಿಪರ ಚಿಂತಕರು ಪೋಸ್ಕವನ್ನು ಇಲ್ಲಿಂದ ಓಡಿಸಿ ರೈತರು ನೆಮ್ಮದಿಯಿಂದ ಜೀವನ ಮಾಡಲು ಸಹಕರಿಸೋಣ ಎಂದು ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ಮ್ಯಾಗಳಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಮೈಲಪ್ಪ ಬಿಸರಳ್ಳಿ, ತಾಲೂಕ ಸಂಚಾಲಕರಾದ ಹೇಮರಾಜ ವಿರಾಪೂರ, ಮಲ್ಲಿಕಾರ್ಜುನ ಪೂಜಾರ, ಕಮಲಾಕ್ಷಿ ದೊಡ್ಡಮನಿ, ದುರ್ಗಮ್ಮ.ಹೆಚ್.
0 comments:
Post a Comment