ಕೊಪ್ಪಳ, ೨೭- ವಿಜ್ಙಾನ ಸರ್ವಕಾಲಿಕ ಸತ್ಯ, ಮೂಢನಂಬಿಕೆಗಳಿಂದ ಹೊರಬಂದು ಗ್ರಾಮೀಣ ಜನರು ವೈಜ್ಙಾಕ ಮನೋಭಾವ ರೂಢಿಸಿಕೊಳ್ಳುವದು ಅಗತ್ಯವಾಗಿದೆ ಎಂದು ವಿಜ್ಙಾನ ಲೇಖಕ, ಕಾಳಿದಾಸ ಪ್ರೌಢಶಾಲೆ ಶಿಕ್ಷಕ ಡಿ.ರಾಮಣ್ಣ ಆಲ್ಮರ್‍ಸಿಕೇರಿ ಅಭಿಪ್ರಾಯಪಟ್ಟಿದ್ದಾರೆ.
ಅವರು ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉಪನ್ಯಾಸ ಡುತ್ತಿದ್ದರು.
ದೇವರು, ಧರ್ಮಗಳನ್ನು ಭಾರತೀಯ ಸಮಾಜದ ವ್ಯವಸ್ಥೆ ಕೆಡಿಸಲು ಬಳಸಿಕೊಳ್ಲುತ್ತಿದ್ದೇವೆ.ಆದರೆ ಸ್ವಾಮಿ ವಿವೇಕಾನಂದರು ದೇವರು,ಧರ್ಮ ಹಾಗೂ ವೈಚಾರಿಕ ಪ್ರಜ್ಞೆಯನ್ನು ವಿಶ್ವಕ್ಕೆ ಸಮರ್ಥವಾಗಿ ಸಾರಿ ಹೇಳಿದ್ದಾರೆ.ಮಾಟ-ಮಮತ್ರಗಳನ್ನು ಒಪ್ಪುವ ಜನ ದುರ್ಬಲ ಮನಸ್ಥಿತಿಯವರಾಗಿರುತ್ತಾರೆ.ದೇವರು-ಧರ್ಮಗಳನ್ನು ಅರಿಯುವಾಗ ತೆರೆದ ಮನಸ್ಸು ಹಾಗೂ ವೈಚಾರಿಕ ದೃಷ್ಟಿಕೋನ ಎರಡೂ ಬೇಕು. ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಲಾಭಕ್ಕೋಸ್ಕರ ಮೂಢನಂಬಿಕೆಗಳನ್ನು ಪ್ರಚೋದಿಸುವಂತಹ ಅವೈಜ್ಙಾಕ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವದು ದುರಂತದ ಸಂಗತಿಯಾಗಿದೆ ಎಂದರು.ವಿದ್ಯಾರ್ಥಿಗಳು ಹೊಸ ಆಲೋಚನೆ , ವೈಜ್ಞಾಕ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕರೆ ಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೊಸಪೇಟೆ ಆಕಾಶವಾಣಿ ಕೇಂದ್ರದ ಪ್ರಸಾರ ರ್ವಾಹಕ ಮಂಜುನಾಥ ಡಿ.ಡೊಳ್ಳಿನ ಮಾತನಾಡಿ,ವಿದ್ಯಾರ್ಥಿಗಳು ಶಿಬಿರದಿಂದ ಸುಂದರ ನೆನಪುಗಳನ್ನು ಹೊತ್ತೊಯ್ಯಬೇಕು.ಶಿಬಿರದಿಂದ ಕಲಿತಿದ್ದನ್ನು ಇತರರಿಗೂ ಕಲಿಸಬೇಕು,ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಗಳು ಮಾತ್ರ ನಮ್ಮನ್ನು ಮಾನಸಿಕ ಒತ್ತಡಗಳಿಂದ ಮುಕ್ತರನ್ನಾಗಿಸುವವು. ಸಾವಿರಾರು ವರ್ಷಗಳಿಂದ ಸಮಾಜದ ಕೆಳಸ್ತರದ ಜನವರ್ಗಗಳನ್ನು ಶಿಕ್ಷಣದಿಂದ ವ್ಯವಸ್ಥಿತವಾಗಿ ದೂರವಿಡಲಾಯಿತು,ಇದರಿಂದಾಗಿಯೇ ಮೂಢನಂಬಿಕೆಗಳು,ಗೊಡ್ಡು ಸಂಪ್ರದಾಯಗಳು ಬೆಳೆದು ಬಂದವು.ದೇವರು-ದೆವ್ವ ಎಂಬ ಹೆಸರಿನಲ್ಲಿ ಅವರನ್ನು ಶೋಷಿಸಲಾಯಿತು. ಸರಿಯಾದ ಹಾಗೂ ಸತ್ಯ ಮಾರ್ಗದಲ್ಲಿ ಮುನ್ನಡೆಯುವದೇ ಧiವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಂವಾದ,ಚರ್ಚೆ ನಡೆಸಿದರು. ಎನ್.ಎಸ್.ಎಸ್. ಅಧಿಕಾರಿ ಪ್ರಭುರಾಜನಾಯಕ ಮಾತನಾಡಿ,ದೇವರು ಮತ್ತು ಧರ್ಮಗಳನ್ನು ಪಟ್ಟಭದ್ರರು ತಮ್ಮ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಘವೇಂದ್ರಾಚಾರ ಕಾಂiiಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ,ವಿಜ್ಞಾನ,ದೇವರು,ನಂಬಿಕೆಗಳ ಬಗೆಗೆ ಬಹಳ ಹಿಂದಿಂದಲೂ ಚರ್ಚೆ ನಡೆಯುತ್ತಿವೆ.ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿರಬೇಕು ಎಂದರು.
ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕರಾದ ಕೃಷ್ಣಾರೆಡ್ಡಿ,ದೇವೇಂದ್ರಪ್ಪ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪಲ್ಲವಿ ಪ್ರಾರ್ಥಿಸಿದರು,ಪಡಿಯುಪ್ಪ ಕಾರ್ಯಕ್ರಮ ರೂಪಿಸಿದರು.
0 comments:
Post a Comment