ಶವಕುಮಾರ ಕುಕನೂರು
ಕೊಪ್ಪಳ: ಅಸಾಮಾನತೆಯಿಂದ ಬಳಲುವ ಪ್ರದೇಶಗಳಿಗೆ ಸಂವಿಧಾನದ ೩೭೧ನೆ ಕಲಂ ಜಾರಿಯದರೆ ಮಾತ್ರಾ ಅಭಿವೃಧಿ ಸಾಧ್ಯಾ ಎಂದು ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಧ್ಯಾಪಕರಾದ ಶಿವಕುಮಾರ ಕುಕನೂರುರವರು ನುಡಿದರು. ಅವರು ಶ್ರೀ ಗವಿಸಿದ್ದೇಶ್ವರ ಪ.ಪೂ.ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ೨೦೧೧-೧೨ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ೩ನೇ ದಿನದ ಪ್ರಾದೇಶಿಕ ಅಸಾಮಾನತೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತ ನುಡಿದರು. ಮುಂದುವರೆದು ಅವರು ಪ್ರಾದೇಶಿಕ ಅಸಾಮಾನತೆ ನಿಮಾರಣೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಹಿರಿಯ ಹೋರಟಾಗರರು ನಿಶ್ಕ್ರಿಯ ವಾಗುತ್ತಿದ್ದು ಯುವ ಹೋರಟಾಗರರು ಅಸಮಾನತೆಯ ವಿರುದ್ಧ ಉಗ್ರ ಹೋರಾಟಮಾಡಬೇಕಾಗಿರುವದು ಅನಿವಾರ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಾಗರಿಕ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಸಂತೋಷ ದೇಶಪಾಂಡೆ ಯವರು ಅಸಮಾನತೆಯ ನಿವಾರಣೆಗಾಗಿ ಬಹುದೊಡ್ಡ ಹೋರಾಟ ಮಾಡಬೇಕಿದೆ ಎಂದರು. ವೇದಿಕೆಯ ಮೇಲೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಪ್ರಾಧ್ಯಾಪಕರಾದ ಡಾ. ಬಸವರಾಜ ಪೂಜಾರ ಮತ್ತು ಗಣ್ಯರಾದ ರಮೇಶ ತುಪ್ಪದ ಉಪಸ್ದಿತರಿದ್ದರು.
ಸೋಮಶೇಖರ ದೊಡ್ಡಮನಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಶರಣಪ್ಪ ಗೌಡರ ಸ್ವಾಗತಿಸಿದರೆ ಕೊನೆಗೆ ಬಸವರಾಜ ಗದಾರ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಅಶೋಕ ಮಲ್ಲಡದ ನೆರೆವೆರಿಸಿದರು.
0 comments:
Post a Comment